10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಬ್ರಹ್ಮಣ್ಯಪುರ ಕೆರೆ ಪುನಶ್ಚೇತನ ಆರಂಭ

Posted By:
Subscribe to Oneindia Kannada

ಬೆಂಗಳೂರು, ಜುಲೈ 31 : ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉತ್ತರಹಳ್ಳಿಯ ಸುಬ್ರಹ್ಮಣ್ಯಪುರ ಕೆರೆಯ ಪುನಶ್ಚೇತನ ಕಾಮಗಾರಿ ಕೊನೆಗೂ ಆರಂಭಗೊಂಡಿದೆ.

100 ಕೋಟಿ ವೆಚ್ಚದಲ್ಲಿ ಕೆರೆ ಕಾಯಕಲ್ಪಕ್ಕೆ ಸಂಪುಟ ಸಭೆ ನಿರ್ಧಾರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 3 ಕೋಟಿ ರು. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಒಳಚರಂಡಿ ನೀರನ್ನು ತಡೆಗಟ್ಟುವುದು, ಕಳೆಯನ್ನು ತೆರವುಗೊಳಿಸುವುದು, ನಡಿಗೆ ಪಥ ನಿರ್ಮಿಸುವುದು ಸಹ ಈ ಕಾಮಗಾರಿಯಲ್ಲಿ ಸೇರಿದೆ.

finally Bengaluru's Subramanyapura lake restored work started

ಕೆರೆ ಸುತ್ತಮುತ್ತ ತಲೆಎತ್ತಿರುವ ಅಪಾರ್ಟ್ ಮೆಂಟ್‌, ಖಾಸಗಿ ಬಡಾವಣೆಗಳು ಹಾಗೂ ಗೋಮಾಳದಲ್ಲಿರುವ ಕೊಳೆಗೇರಿಯ ತ್ಯಾಜ್ಯ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಶುದ್ಧೀಕರಿಸದೆ ರಾಜಕಾಲುವೆಗೆ ಬಿಡಲಾಗುತ್ತಿದೆ. ಇದನ್ನು ತಡೆಗಟ್ಟಲು ಜಲಮಂಡಳಿ ಸಹಾಯದಿಂದ ಪ್ರತ್ಯೇಕ ಒಳಚರಂಡಿ ನಿರ್ಮಿಸಲಾಗುತ್ತದೆ.

Bengaluru Rain | BBMP cancels leave for officers

'ಕೆರೆಯನ್ನು ಅಭಿವೃದ್ಧಿ ಪಡಿಸಲು ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ಹಿಡಿಯಬಹುದು' ಎಂದು ಬಿಬಿಎಂಪಿ ಇಂಜಿನಿಯರ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a decade of neglect, the rejuvenation of Subramanyapura lake in Uttharahalli ward has finally started. The Bruhat Bengaluru Mahanagara Palike (BBMP), which is the custodian of the lake, has taken up the work at a cost of Rs 3 crore.
Please Wait while comments are loading...