ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರ ಗಣತಿ ಮಾಡಲು ಕೊನೆಗೂ ಬಿಬಿಎಂಪಿಗೆ ಕಾಲ ಕೂಡಿ ಬಂತು!

By Nayana
|
Google Oneindia Kannada News

ಬೆಂಗಳೂರು, ಮೇ 4: ಮಳೆಗಾಲ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ ಆದರೆ ನಗರದಲ್ಲಿ ಈಗಾಗಲೇ ಅನೇಕ ಬಾರಿ ವರುಣನ ಆರ್ಭಟ ಕೇಳಿಸಿದೆ.

ಈಗಾಗಲೇ ಸಾಕಷ್ಟು ಮರಗಳು ಧರೆಗುರುಳಿವೆ ಹಾಗಾಗಿ ಆಸ್ತಿಪಾಸ್ತಿಗೆ ಕಂಟಕವಾಗುವುದನ್ನು ತಡೆಯಲು ಬಿಬಿಎಂಪಿ ಮುಂದಾಗಿದೆ. ಚುನಾವಣೆ ಮುಗಿದ ಕೂಡಲೇ ಖಾಸಗಿ ಏಜೆನ್ಸಿ ಮೂಲಕ ಮರಗಳ ಗಣತಿ ನಡೆಸಲು ಯೋಜನೆ ರೂಪಿಸಿದೆ.

ಲಕ್ಷ್ಮಣರಾವ್ ಉದ್ಯಾನದಲ್ಲಿರುವ 24 ಮರಗಳಿಗೆ ಬಿತ್ತು ಕೊಡಲಿ ಪೆಟ್ಟುಲಕ್ಷ್ಮಣರಾವ್ ಉದ್ಯಾನದಲ್ಲಿರುವ 24 ಮರಗಳಿಗೆ ಬಿತ್ತು ಕೊಡಲಿ ಪೆಟ್ಟು

ಮರ ಗಣತಿ ಯೋಜನೆ ಹಲವು ವರ್ಷಗಳಿಂದ ಘೋಷಣೆಗಷ್ಟೇ ಸೀಮಿತವಾಗಿತ್ತು. ಅದಕ್ಕೀಗ ಚಾಲನೆ ನೀಡಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಸಿಬ್ಬಂದಿ ಕೊರತೆಯಿರುವ ಕಾರಣದಿಂದಾಗಿ ಖಾಸಗಿ ಸಂಸ್ಥೆಗೆ ಮರ ಗಣತಿ ಕಾರ್ಯ ವಹಿಸಲು ಬಿಬಿಎಂಪಿ ಅರಣ್ಯ ಘಟಕ ನಿರ್ಧರಿಸಿದೆ. ಈ ಬಗ್ಗೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಿರುವ ಘಟಕ ಅಲಲ್ಇ ಅನುಮೋದನೆ ನಂತರ ಗುತ್ತಿಗೆ ಮುಂದಿನ ಕ್ರಮ ಕೈಗೊಳ್ಳಲಿದೆ.

Finally BBMP hires agency for tree census

1 ಕೋಟಿ ರೂ. ವೆಚ್ಚ: ಬಿಬಿಎಂಪಿ ಬಜೆಟ್‌ನಲ್ಲಿ 2016-17ನೇ ಸಾಲಿನಲ್ಲಿ ಮರ ಗಣತಿ ಸೇರಿ ಇನ್ನಿತರ ಕಾರ್ಯಗಳಿಗಾಗಿ 4 ಕೋಟಿ ರೂ. ಮೀಸಲಿರಿಸಲಾಗಿತ್ತು. ಆದರೆ, ನಿಗದಿತ ಯೋಜನೆಗಳು ಜಾರಿಯಾಗದ ಕಾರಣ ಹಣ ಖರ್ಚಾಗದೆ ಹಾಗೆಯೇ ಉಳಿಸಿದೆ. ಆ ಹಣದಲ್ಲಿ ಮರಗಣತಿ ಮಾಡಲು ನಿರ್ಧರಿಸಿದೆ.

ಬಿಬಿಎಂಪಿ ಅರಣ್ಯ ಘಟಕದಲ್ಲಿ ಸಮರ್ಪಕ ಸಿಬ್ಬಂದಿಯಿಲ್ಲ. ಸಿಬ್ಬಂದಿ ನೇಮಕಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಘಿಯೇ ಮರಗಣತಿಯಂತಹ ಕಾರ್ಯವೂ ಪೂರ್ಣಗೊಂಡಿಲ್ಲ. ವಾರ್ಡ್‌ನಲ್ಲಿರುವ ಪ್ರತಿ ರಸ್ತೆಗಳಲ್ಲಿರುವ ಮರಗಳ ಲೆಕ್ಕ ಹಾಕಲಾಗುತ್ತದೆ. ಅಲ್ಲದೆ, ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಯಾವೆಲ್ಲ ಮರಗಳಿವೆ. ಅವುಗಳ ವಯಸ್ಸೆಷ್ಟು, ಅವುಗಳ ಸದೃಢತೆ ಏನು ಎಂಬುದನ್ನು ದಾಖಲಿಸಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Immediately after completion of state assembly poll, BBMP is taking up census of trees in the Bengaluru city and also hired an agency. The tree census was planned four years before but the authority was failed to implement the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X