ಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತ

Posted By:
Subscribe to Oneindia Kannada

1960ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದವು. ಈ ಸಭೆ ಸಮಾರಂಭಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡೇತರ ಹಾಡುಗಾರರು-ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿತ್ತು. ಕನ್ನಡನಾಡಿನ ಪ್ರತಿಭಾವಂತ ಕಲಾವಿದರು ಸಾಕಷ್ಟು ಮಂದಿ ಇದ್ದರೂ ಅವರು ಪ್ರಸಿದ್ಧರಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದರು.

ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?

ಅಂದು ಕನ್ನಡದ ನೆಲದಲ್ಲಿ ಕನ್ನಡಿಗ ಕಲಾವಿದನಿಗೆ ನ್ಯಾಯ ಸಿಗಬೇಕು ಮತ್ತು ಕನ್ನಡ-ಕನ್ನಡಿಗನಿಗೆ ಈ ನೆಲದಲ್ಲಿ ಸಾರ್ವಭೌಮತ್ವ ದೊರಕಿಸಿಕೊಡಲು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ ಅನಕೃ-ರಾಮಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೇ ಮಂದಿನ ಕನ್ನಡ ಚಳವಳಿಯ ಉದಯಕ್ಕೆ ನಾಂದಿಯಾಯಿತು.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

Festivals like Ganeshotsava and negligence of Kannadigas

ಚಳವಳಿಯಿಂದ ಪ್ರೇರಿತರಾದ ಹಲವಾರು ಉತ್ಸಾಹಿಗಳು ನಂತರದಲ್ಲಿ ಕನ್ನಡ ಸಂಘಟನೆ, ಯುವಕ ಸಂಘ, ಗಣೇಶ ಮತ್ತು ರಾಮಸೇವಾ ಮಂಡಳಿಗಳನ್ನು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಕನ್ನಡ ಕಲೆ-ಕಲಾವಿದರ ಪೋಷಣೆಗೆ ಮುಂದಾದರು.

ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!

ಈಗ ಬೆಂಗಳೂರಿನಲ್ಲಿ ಗಣೇಶ ಹಬ್ಬದ ಸಮಯದಲ್ಲಿ ಕೆಲದಿನ-ವಾರದವರೆಗೂ, ರಸ್ತೆ-ಬೀದಿ-ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಪದ್ಧತಿ ಚಾಲನೆಯಲ್ಲಿದೆ. ಈ ಗಣೇಶೋತ್ಸವಗಳಲ್ಲಿ ನಾಟ್ಯ-ಹಾಡು-ಹರಿಕತೆ-ನಾಟಕ-ಸಂಗೀತ ಕಾರ್ಯಕ್ರಮಗಳನ್ನೇರ್ಪಡಿಸುವುದು ವಾಡಿಕೆ. ಉದಯೋನ್ಮುಖ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಒದಗಿಸುವ ವೇದಿಕೆಯಾಗಿ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ಸಹ ಕಾರಣವಾಗಿದೆ.

Festivals like Ganeshotsava and negligence of Kannadigas

ಇತ್ತೀಚಿನ ದಿನಗಳಲ್ಲಿ ಹಣವುಳ್ಳ ಕಾರ್ಪೊರೆಟ್ ಸಂಸ್ಥೆಗಳು, ಬಡಾವಣೆ ಅಂಗಡಿ ಮಾಲೀಕರ ಸಂಘದವರು ತಮ್ಮ ಉತ್ಪನ್ನ-ವಸ್ತುಗಳ ಪ್ರಚಾರಕ್ಕಾಗಿ ಪ್ರಾಯೋಜಕತ್ವ ನೀಡುವ ಮೂಲಕ ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ ಕಟ್ಟುವಲ್ಲಿ ಸಹ ಯಶಸ್ವಿಯಾಗಿದ್ದಾರೆ! ಆದರೆ ಮೆಲ್ಲಗೆ ಇಲ್ಲಿ ಕನ್ನಡ ಕಾರ್ಯಕ್ರಮಗಳು ಮತ್ತು ಕನ್ನಡ ಕಲಾವಿದರು ಅವಕಾಶದಿಂದ ವಂಚಿತರಾಗುತ್ತಿರುವುದು ಕಂಡು ಬರುತ್ತಿರುವ ಸತ್ಯ.

ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ

ಕನ್ನಡಿಗರೇ ಆಯೋಜಕರಾಗಿರುವೆಡೆ ಕನ್ನಡತನ ಪ್ರದರ್ಶನಕ್ಕೆ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾದರೆ, ಹೊಸ ಹೊಸ ಕನ್ನಡ ಪ್ರತಿಭೆಗಳು ಬೆಳಕಿಗೆ ಬರುವುದು ಮತ್ತು ಅವರಿಗೆ ಸೂಕ್ತ ಅವಕಾಶಗಳು ದೊರೆಯುವುದು ಹೇಗೆ? ನಮ್ಮಲ್ಲಿ ಇತರ ಭಾಷೆ-ಭಾಷಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಆಯೋಜಕರು, ಇತರ ರಾಜ್ಯಗಳಲ್ಲಿ ಕನ್ನಡ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶ ದೊರಕುತ್ತದೆಯೆ ಎಂದು ಯೋಚಿಸಿದ್ದಾರೆಯೆ?

Festivals like Ganeshotsava and negligence of Kannadigas

ಅವಕಾಶ ದೊರಕದೆ ಕಣ್ಮರೆಯಾಗುತ್ತಿರುವ ನಮ್ಮದೆ ನೆಲದ ಕಲೆ-ನಿಪುಣತೆ-ಜಾನಪದ ಕೌಶಲ್ಯ ಪ್ರದರ್ಶನಕ್ಕೆ, ದೊಡ್ಡಮಟ್ಟದ ಪ್ರಾಯೋಜಕತ್ವ-ಪ್ರಚಾರದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅನುವು ಮಾಡಿಕೊಟ್ಟು, ಅವುಗಳನ್ನು ಉಳಿಸಿ ಬೆಳೆಸುವುದು ಇಂತಹ ಸಂಘಟನೆಗಳ ಮುಖ್ಯ ಕರ್ತವ್ಯವಾಗಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Negligence of Kannadigas in festivals like Ram Navami, Ganeshotsav are not uncommon in Bengaluru. The organizers given priority to non-Kannadigas and neglect Kannada talent. An article by Kalyana Raman Chandrasekaran.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ