ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್ ನಲ್ಲಿ‌ನ ಅಲಂಕಾರಿಕ ಮನೆಗಳ ಪುನಶ್ಚೇತನ ಶೀಘ್ರ

By Nayana
|
Google Oneindia Kannada News

ಬೆಂಗಳೂರು, ಮೇ 31: ಕಬ್ಬನ್‌ ಉದ್ಯಾನದಲ್ಲಿರುವ ಫರ್ನ್ ಹೌಸ್ ಶೀಘ್ರವೇ ಮರುಜೀವ ಪಡೆಯಲಿದೆ. ಅದು ಹೇಗೆ ಅಂತೀರಾ, ಹಲವು ವರ್ಷಗಳ ಹಿಂದೆ ಕಬ್ಬನ್‌ ಉದ್ಯಾನದ ಆಕರ್ಷಣೀಯ ತಾಣಗಳಲ್ಲಿ ಇದೂ ಒಂದಾಗಿತ್ತು.

ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದುಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು

ಕಾಲ ಕ್ರಮೇಣ ಅದು ಕಳೆಗುಂದಿತ್ತು. ಫರ್ನ್ ಹೌಸ್‌ ಎಂದರೆ ಅಲಂಕಾರಿಕ ಜರಿ ಗಿಡಗಳ ಮನೆ ಎಂದು ಹೇಳಬಹುದು. ಉದ್ಯಾನದಲ್ಲಿ ಎರಡು ಫರ್ನ್ ಹೌಸ್‌ಗಳಿವೆ, ಬ್ರಿಟಿಷರ ಕಾಲದಲ್ಲಿ ಇದು ನಿರ್ಮಾಣಗೊಂಡಿತ್ತು. ಹಡ್ಸನ್‌ ವೃತ್ತದಿಂದ ಸೆಂಟ್ರಲ್ ಲೈಬ್ರರಿಗೆ ಬರುವ ಮಾರ್ಗ ಮಧ್ಯೆ ಎಡ ಬದಿಯಲ್ಲಿ ಹಾಗೂ ಬಾಲಭವನದಿಂದ ಪ್ರೆಸ್‌ಕ್ಲಬ್‌ಗೆ ಸಾಗುವ ಹಾದಿಯಲ್ಲಿ ಇದನ್ನು ನೋಡಬಹುದಾಗಿದೆ.

Fern house in Cubbon park rejuvenate soon

ಜರಿ ಗಿಡಗಳನ್ನು ತಂದು ಈ ಫರ್ನ್ ಹೌಸ್‌ನಲ್ಲಿಡಲಾಗಿತ್ತು. ಈ ಜಾಗವನ್ನು ಮತ್ತೆ ಆಕರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲಿ ಮೂಲ ವಿನ್ಯಾಸಕ್ಕೆ ಧಕ್ಕೆ ಬರದಂತೆ ನವೀಕರಿಸುವ ಸಂಬಂಧ ಸುಂಆರು ಎರಡು ವರ್ಷಗಳಿಂದ ಸತತವಾಗಿ ಇಲಾಖೆಯು ಪ್ರಯತ್ನ ಪಡುತ್ತಿದೆ. ಕಡಿಮೆ ಹಣದಲ್ಲಿ ಉತ್ತಮ ಕಾರ್ಯವಾಗಬೇಕು ಎಂದು ಯೋಚಿಸಿ, ಕರ್ನಾಟಕ ರೋಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಮೋರೆ ಹೋದರು, ಕೆಆರ್‌ಐಡಿ ಸೂಕ್ತ ಯೋಜನೆ ಮುಂದಿಟ್ಟಿದ್ದು, ಅದಕ್ಕೆ ತೋಟಗಾರಿಕೆ ಇಲಾಖೆ ಒಪ್ಪಿಗೆ ಸೂಚಿಸಿದೆ.

English summary
Fern house with rare kind of plants in Cubbon park will be rejuvenated soon. Fern houses in park were center of attraction since British era later they were neglected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X