ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆಕ್ರೋಶಕ್ಕೆ ನಡುಗಿತು ರಾಜಧಾನಿ, ಟ್ವಿಟ್ಟರ್ ನಲ್ಲಿ ಪ್ರತಿಧ್ವನಿ!

|
Google Oneindia Kannada News

Recommended Video

ಕರ್ನಾಟಕದಲ್ಲಿ ಆಗುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ನವೆಂಬರ್ 19: 'ರೈತರ ಸಾಲಮನ್ನಾ, ಬೆಂಬಲ ಬೆಲೆ, ರೈತರಿಗಾಗಿ ವಿವಿಧ ಯೋಜನೆಗಳು...' ಇಂಥ ಸಾವಿರ ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬರುವ ಸರ್ಕಾರ ನಂತರ ರೈತರ ಬಗ್ಗೆ ಎಷ್ಟು ಕಾಳಜಿ ತೋರಿಸುತ್ತದೆ? ತನ್ನ ಬೇಡಿಕೆಗಳನ್ನು ಈಡೇರಿಸಿ ಎಂದು ಅನ್ನದಾತ ಬೀದಿಗಿಳಿದ ಮೇಲೆಯೇ ಸರ್ಕಾರಕ್ಕೂ ಜ್ಞಾನೋದಯವಾಗೋದು. ಈಗಲೂ ಅದೇ ಆಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಳುವ ಯೋಗಿ ಆರಂಭಿಸಿರುವ ಪ್ರತಿಭಟನೆಗೆ ರಾಜಧಾನಿ ನಡುಗಿದೆ. ಈ ಪ್ರತಿಭಟನೆಯಲ್ಲಿ 26 ಸಾವಿರ ರೈತರು ಭಾಗವಹಿಸುವ ನಿರೀಕ್ಷೆ ಇದೆ. ತನ್ನ ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಗೆ 'ಇಷ್ಟು ದಿನ ಎಲ್ಲಿ ಮಲಗಿದ್ದಿರಿ ತಾಯೆ' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೇಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ರೈತರ ಆಕ್ರೋಶಕ್ಕೆ ಇದೂ ಒಂದು ಕಾರಣವಾಗಿತ್ತು.

ವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ: LIVE:ರೈತರ ಕ್ಷಮೆ ಕೇಳದ ಕುಮಾರಸ್ವಾಮಿವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ: LIVE:ರೈತರ ಕ್ಷಮೆ ಕೇಳದ ಕುಮಾರಸ್ವಾಮಿ

ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಿದ್ಧವಾಗಿರುವ ರೈತರ ನಡೆಗೆ ಟ್ವಿಟ್ಟರ್ ನಲ್ಲೂ ಸಾಕಷ್ಟು ಜನ ಧ್ವನಿಗೂಡಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರನ್ನು ಮೂರ್ಖರನ್ನಾಗಿ ಮಾಡಬೇಡಿ!

"ಕರ್ನಾಟಕದಲ್ಲಿ ರೈತರು ಇಂದು ಪ್ರತಿಭಟನೆ ಮಾಡುತ್ತಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಮೌನವಾಗಿದ್ದಾರೆ. ಸರ್ಕಾರ ನೀಡಿದ ಎಲ್ಲಾ ಭರವಸೆಗಳೂ ಸುಳ್ಳು ಎಂದು ರೈತರು ದೂರುತ್ತಿದ್ದಾರೆ. ಮುಖ್ಯಮಂತ್ರಿಗಳೇ, ನೀವು ರೈತರಿಗೆ ಎಲ್ಲಿ, ಯಾವಾಗ, ಹೇಗೆ, ಎಷ್ಟು ಉಪಯುಕ್ತ ಯೋಜನೆಗಳನ್ನು ನೀಡಿದ್ದೀರಿ ಎಂದು ತಿಳಿಸಿ. ಸುಳ್ಳು ಹೇಳಿ ರೈತರನ್ನು ಮೂರ್ಖರನ್ನಾಗಿ ಮಾಡಬೇಡಿ" ಎಂದಿದ್ದಾರೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ.

ಮುಖ್ಯಮಂತ್ರಿಗೆ ಸಮಯವಿಲ್ಲ!

ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡುವುದಕ್ಕೆ, ದೇವಾಲಯಗಳಿಗೆ ಹೋಗುವುದಕ್ಕೆ, ಪುತ್ರ ನಟಿಸಿದ ಸಿನೆಮಾ ನೋಡುವುದಕ್ಕೆ, ಕುಟುಂಬದ ಜೊತೆ ರಜೆ ಕಳೆಯುವುದಕ್ಕೆ ಸಮಯವಿದೆ. ಆದರೆ ಕಬ್ಬು ಬೆಳೆಗಾರರೊಂದಿಗೆ ನಿಗದಿತ ಸಭೆಯಲ್ಲಿ ಪಾಲ್ಗೊಳ್ಳಲು ಸಮಯವಿಲ್ಲ ಎಂದು ಬಿಜೆಪಿ ಶಾಸಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

ಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆ

ಕಬ್ಬುಬೆಳೆಗಾರರ ನೋವಿನ ಮಾತು!

"ನಾವು ಸಾಯೋವರೆಗೂ ಕಬ್ಬನ್ನೇ ಬೆಳೆಯೋದು.ಇವರು ಕುಟುಂಬದವರನ್ನೇ ಬೆಳೆಸೋದು". ಮುಖ್ಯಮಂತ್ರಿಗಳಿಂದ " ಗೂಂಡಾಗಳು" ಎಂದು ಅನಿಸಿಕೊಂಡ ನಂತರದ ಕರ್ನಾಟಕದ ಕಬ್ಬು ಬೆಳೆಗಾರರೊಬ್ಬರ ನೊಂದ ಮಾತಿದು.‌" ಎಂದು ಟ್ವೀಟ್ ಮಾಡಿದ್ದಾರೆ ಬಿಜೆಪಿ ಶಾಸಕ ಸುರೇಶ್ ಕುಮಾರ್.

ನಾಳೆ ರೈತರೊಂದಿಗೆ ಸಭೆ

ನಾಳೆ ರೈತರೊಂದಿಗೆ ಸಭೆ

ಇಂದು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಯುತ್ತಿದ್ದು, ನಾಳೆ ಮಧ್ಯಾಹ್ನ 3.00 ಗಂಟೆಗೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

English summary
Farmers' across the state protesting against the government in Bengaluru. Here are twitter reactions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X