ಕೆ.ಆರ್. ಮಾರ್ಕೆಟ್ ನಲ್ಲಿ ಅನಧಿಕೃತ ಮಳಿಗೆ ತೆರವುಗೊಳಿಸಿ ಜಾಗ ಕೊಡಿಸಿ : ಪ್ರತಿಭಟನೆ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04 : ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ಅಂಗಡಿಗಳ ಜಾಗದಲ್ಲಿ ಅನಧಿಕೃತ ಮಳಿಗೆ ತೆರೆದಿದ್ದು, ರೈತರಿಗೆ ಹೂ ಮಾರಾಟಕ್ಕೆ ಜಾಗವಿಲ್ಲದಂತಾಗಿದೆ ಎಂದು ಆರೋಪಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಡುರಾತ್ರಿಯಲ್ಲಿ ರೈತರು ಹೂ ತಂದು ಬೆಳಿಗ್ಗೆ 8 ರ ವರೆಗೆ ಮಾರಾಟ ಮಾಡಬೇಕಾಗಿದೆ. ಪೂರ್ವ ದಿಕ್ಕಿನ ಖಾಲಿ ಜಾಗದಲ್ಲಿ ಮಾರಾಟ ಮಾಡುತ್ತಿದ್ದರು, ಆದರೆ ಈಗ ಇದ್ದಕ್ಕಿದ್ದ ಹಾಗೆ ನಾಲ್ಕು ಮಳಿಗೆ ತಲೆ ಎತ್ತಿವೆ.

Farmers protest at KR Market

ಇವರಿಗೆ ಯಾರು ಅಧಿಕಾರ ಕೊಟ್ಟವರು , ಬಿಬಿಎಂಪಿ ಆಯುಕ್ತರು ತೆರವು ಮಾಡಲು ಆದೇಶಿಸಿದರೂ ಮಳಿಗೆ ಕಟ್ಟಲಾಗಿದೆ. ಮಾರುಕಟ್ಟೆಯಲ್ಲಿ ಮಿನಿರೌಡಿಗಳ ತಂಡ ಇದೆ. ವೇಲು ಅಲಿಯಾಸ್ ವೇಡಿ ಅನ್ನುವ ರೌಡಿಯ ತಂಡ ಇಲ್ಲಿ ಸಕ್ರಿಯವಾಗಿದೆ. ಇವರು ಪ್ರತಿ ದಿನ ರೈತರಿಂದ, ವ್ಯಾಪಾರಿಗಳಿಂದ ವಸೂಲಿ ಮಾಡುತ್ತಾರೆ. ಹಾಕರ್ಸ್ ಝೋನ್ ನಲ್ಲಿಯೂ ಹತ್ತು ಇಪ್ಪತ್ತು ಲಕ್ಷಕ್ಕೆ ಮಳಿಗೆ ಮಾರಾಟ ಮಾಡಲಾಗುತ್ತಿದೆಎಂದು ರೈತರು ದೂರಿದರು.

ಅನಧಿಕೃತ ಮಳಿಗೆಯಿಂದ ನೂರಾರು ರೈತರಿಗೆ ಅನ್ಯಾಯ ವಾಗುತ್ತಿದೆ, ಕೂಡಲೇ ಅನಧಿಕೃತ ಅಂಗಡಿ ತೆರವು ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಕೆಆರ್.ಮಾರುಕಟ್ಟೆಯಿಂದ ರೈತರು ಬಿಬಿಎಂಪಿವರೆಗೆ ಜಾಥಾ ನಡೆಸಿ ದಬ್ಬಾಳಿಕೆ ನಿಲ್ಲಿಸುವಂತೆ ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opposing the evacuation of flower seller's in KR Market farmers have protesting in front of their stalls at KR Market in the leadership of farmers leader Kodihalli Chandrashekhar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ