ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ದರ ಎಷ್ಟಿರುತ್ತದೆ?

By Gururaj
|
Google Oneindia Kannada News

ಬೆಂಗಳೂರು, ಜೂನ್ 11 : ಎಲೆಕ್ಟ್ರಿಕ್ ಬಸ್‌ಗಳು ಉದ್ಯಾನ ನಗರಿ ಬೆಂಗಳೂರಿನ ರಸ್ತೆಗೆ ಇಳಿಯಲು ಸಜ್ಜಾಗಿವೆ. ಈಗಿರುವ ಹವಾನಿಯಂತ್ರಿತ ಬಸ್ಸುಗಳ ದರವೇ ಎಲೆಕ್ಟ್ರಿಕ್ ಬಸ್‌ಗಳಿಗೆ ಇರುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ನೀಡಿಲ್ಲ. ಆದ್ದರಿಂದ, ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಓಡಿಸಲಾಗುತ್ತದೆ.

ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪ್ರಕ್ರಿಯೆ ಮತ್ತೆ ಚುರುಕು!

Fares of electric buses with existing fares of air-conditioned buses

ಎಲೆಕ್ಟ್ರಿಕ್ ಬಸ್ ದರ ಹೆಚ್ಚು ಎಂಬ ಕಾರಣಕ್ಕೆ ಪ್ರಯಾಣದರವನ್ನು ಹೆಚ್ಚಳ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕ ಸಾರಿಗೆ ಎಂಬ ಕಾರಣಕ್ಕೆ ದರ ಹೆಚ್ಚಳ ಮಾಡಲಾಗದು. ಈಗಿರುವ ಬಿಎಂಟಿಸಿಯ ಹವಾನಿಯಂತ್ರಿತ ಮಾದರಿ ಬಸ್‌ಗಳ ಪ್ರಯಾಣದರವೇ ಇರುತ್ತದೆ.

ಸಬ್ಸಿಡಿ ಗೊಂದಲ: ಗೋಲ್‌ ಸ್ಟೋನ್ ಒಪ್ಪಂದಕ್ಕೆ ಬಿಎಂಟಿಸಿ ತಡೆಸಬ್ಸಿಡಿ ಗೊಂದಲ: ಗೋಲ್‌ ಸ್ಟೋನ್ ಒಪ್ಪಂದಕ್ಕೆ ಬಿಎಂಟಿಸಿ ತಡೆ

ಎಲೆಕ್ಟ್ರಿಕ್ ಬಸ್ ನಿರ್ವಹಣೆ ಸುಲಭ, ವಾಯು ಮಾಲಿನ್ಯ ವಾಗುವುದಿಲ್ಲ. ಆದ್ದರಿಂದ, ಬಸ್ ಓಡಿಸಿದರೆ ಸಂಸ್ಥೆಗೆ ನಷ್ಟ ಉಂಟಾಗುವುದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಬಿಎಂಟಿಸಿ ಎಷ್ಟು ಬಸ್‌ಗಳನ್ನು ಗುತ್ತಿಗೆಗೆ ಪಡೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಮೊದಲು ಬಸ್ಸುಗಳ ಕ್ಷಮತೆ ನೋಡಿಕೊಂಡು ಸಂಸ್ಥೆ ಮುಂದಿನ ನಿರ್ಧಾರವನ್ನು ಮಾಡಲಿದೆ. ಬಸ್‌ಗಳ ದರ ಅದರ ಬ್ಯಾಟರಿ ಮೇಲೆ ಅವಲಂಬಿತವಾಗಿರುತ್ತದೆ.

English summary
Electric buses will hit Bengaluru roads soon. The Bangalore Metropolitan Transport Corporation (BMTC) will not hike fares of electric buses. Fare will be existing fares of air-conditioned buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X