ನಕಲಿ ವಾಚ್ ದಂಧೆ: 1.8 ಕೋಟಿ ಮೌಲ್ಯದ ಮಾಲು ವಶ, ಮೂವರ ಸೆರೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ರಾಡೋ, ಹುಬ್ಲಟ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ನಕಲಿ ವಾಚ್ ಮಾರಾಟ ಜಾಲವನ್ನು ಭೇದಿಸಿ ಮೂರು ಜನರನ್ನು ಬಂಧಿಸಿರುವ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ರು 1.8 ಕೋಟಿ ಮೌಲ್ಯದ 541 ಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಹಾವನೂರು ಬಡಾವಣೆಯ ಅನ್ವೇಶ್ ಐಪಿಆರ್ ಸರ್ವಿಸ್ ನ ಪ್ರಮೋದ್ ಕುಮಾರ್ ಚಿಕ್ಕಪೇಟೆಯಲ್ಲಿ ನಕಲಿ ವಾಚ್ ದಂಧೆ ನಡೆಯುತ್ತಿರುವುದರ ಬಗ್ಗೆ ದೂರು ನೀಡಿದ್ದರು. ಈ ಮಾಹಿತಿ ಆದರಿಸಿ ಚಿಕ್ಕಪೇಟೆಯಲ್ಲಿ ತನಿಖೆ ಮಾಡಿದ ಸಿಸಿಬಿ ಅಧಿಕಾರಿಗಳು ಜೆ.ಸಿ. ನಗರ ವಾಸಿ ‍ಎಂ.ಬಿ.ಷಫಿವುಲ್ಲಾ,(40), ಯಲಹಂಕ ನಿವಾಸಿ ಇಂತಿಯಾಜ್(23) ಮತ್ತು ಗೌರಿಪಾಳ್ಯ ನಿವಾಸಿ ಖಲೀಂ (34) ಮೂವರ ಅಂಗಡಿಗಳ ಮೇಲೆ ದಾಳಿ ನಡೆಸಿ 1.8 ಕೋಟಿ ಮೌಲ್ಯದ 541 ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ.[ಊಬ್ಲೋ ವಾಚ್ ವಿವಾದ : ಎಚ್ಡಿಕೆ ವಿರುದ್ಧ ತನಿಖೆಗೆ ಆದೇಶ!]

Fake Watch racket: 1.8 crore valuable 541 clocks Seized

ದೊರೆತಿರುವ ಗಡಿಯಾರಗಳು ರಾಡೋ, ಹುಬ್ಲಟ್, ಟಿಸಾಟ್, ಕ್ಯಾಲ್ವಿನ್ ಕೇವಿನ್, ಲಾಂಗಿನೀಸ್, ಒಮೇಗಾ ಇತ್ಯಾದಿ ಪ್ರತಿಷ್ಠಿತ ಕಂಪನಿಗಳ ನಕಲು ವಾಚ್ ಗಳಾಗಿದ್ದು, ಆರೋಪಿಗಳು ನಕಲಿ ವಾಚ್ ಗಳನ್ನು ಮುಂಬೈ ಮತ್ತು ಚೆನ್ನೈ ನಿಂಕ ಕಡಿಮೆ ಬೆಲೆಗೆ ಖರೀದಿಸಿ ತಂದು ಗ್ರಾಹಕರಿಗೆ 3ಸಾವಿರದಿಂದ 7 ಸಾವಿರದ ವರೆಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದರು.[ವಜ್ರ ಖಚಿತ ಉಬ್ಲೋ ವಾಚ್ ಬಗ್ಗೆ ಎಸಿಬಿಗೆ ಮೊದಲ ದೂರು!]

ಇನ್ನು ಈ ಆಸಾಮಿಗಳ ಮೇಲೆ ಚಿಕ್ಕಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Fake Watch racket: 1.8 crore valuable 541 clocks Seized and three arrested in chikkapet in bengaluru. RADO, HUBLOT, TISSOT, TAGHUAR, CALVIN KLEIN LONGINES, OMEGA, CHRISTIAN DIOR & FOSSIL are faked to sell the people.
Please Wait while comments are loading...