ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸರು!

Posted By:
Subscribe to Oneindia Kannada

ಬೆಂಗಳೂರು, ಜನವರಿ 07 : ತಾವು ಪೊಲೀಸರೆಂದು ಹೇಳಿ ನೈಸ್ ರಸ್ತೆಯಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 19ರಂದು ಈ ಆರೋಪಿಗಳು ಯುವ ಜೋಡಿಯಿಂದ 60 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದರು.

ಬಂಧಿತ ಆರೋಪಿಗಳನ್ನು ಎಂ.ರಘು ಮತ್ತು ಗೋವಿಂದ ರಾಜು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 52,000 ರೂ. ಹಣ, ಆರೋಪಿಗಳು ಬಳಸುತ್ತಿದ್ದ ಸ್ವಿಪ್ಟ್ ಕಾರು ಮತ್ತು ನಕಲಿ ಖಾಕಿ ಸಮವಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. [ಯಲಹಂಕ ಪೊಲೀಸರ ಕಾರ್ಯಾಚರಣೆಗೆ ಸಲಾಂ]

Talaghattapura police

ಘಟನೆಯ ವಿವರ : 2015ರ ಡಿಸೆಂಬರ್ 19ರ ಸಂಜೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬನ್ನೇರುಘಟ್ಟ ಟೋಲ್ ವರುಣ್ ಉಮೇಶ್ ಅವರು ತನ್ನ ಗೆಳತಿಯೊಂದಿಗೆ ವಿಹಾರಕ್ಕೆ ಹೋಗಿದ್ದರು. ಅವರನ್ನು ಅಡ್ಡಗಟ್ಟಿದ ಆರೋಪಿಗಳು ತಾವು ಪೊಲೀಸರೆಂದು ಅವರನ್ನು ಹೆದರಿಸಿದ್ದರು. [ಬೆಂಗಳೂರು : ಸೊಸೆಯಿಂದ ಅತ್ತೆ, ಮಾವನ ಕೊಲೆ]

ಅವರ ಕಾರಿನಲ್ಲಿಯೇ ತಲಘಟ್ಟಪುರದ ಹತ್ತಿರ ಹೋಗಿ ಕೆನರಾ ಬ್ಯಾಂಕ್ ಎಟಿಎಂನಿಂದ 60, 000 ರೂ. ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು. ಈ ಹಣ ಸುಲಿಗೆ ಪ್ರಕರಣದ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜನವರಿ 4ರಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೈಲಿಗೆ ಹೋಗಿ ಬಂದಿದ್ದ ರಘು : ಪ್ರಕರಣದಲ್ಲಿ ಬಂಧಿತನಾಗಿರುವ ರಘು ಹಿಂದೆಯೂ ಜೈಲಿಗೆ ಹೋಗಿ ಬಂದಿದ್ದ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಘು ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಕಾರಿನಲ್ಲಿ ಏಕಾಂತಕ್ಕೆಂದು ಬರುವ ಜೋಡಿಯನ್ನು ಹೆದರಿಸಿ ಹಣ ಸುಲಿಗೆ ಮಾಡಿದ್ದ. ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Talaghattapura police arrested Raghu and Govinda Raju who posed as cops to carry out robberies in Nandi Infrastructure Corridor Enterprises (NICE) road. Both robbed Rs 60, 000 on December 19, 2015.
Please Wait while comments are loading...