ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 6 ಲಕ್ಷ ನಕಲಿ ನೋಟು ಪತ್ತೆ, ಎನ್‌ಐಎಯಿಂದ ಚಾರ್ಜ್‌ಶೀಟ್

|
Google Oneindia Kannada News

ಬೆಂಗಳೂರು, ನವೆಂಬರ್ 09 : ಮಾದನಾಯಕನಹಳ್ಳಿಯಲ್ಲಿ ಪತ್ತೆಯಾಗಿದ್ದ ನಕಲಿ ನೋಟುಗಳ ಬಗ್ಗೆ ಎನ್‌ಐಎ ಪೊಲೀಸರು ನಾಲ್ವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಸಿಕ್ಕ ನಕಲಿ ನೋಟಿಗೂ ಪಶ್ಚಿಮ ಬಂಗಾಳಕ್ಕೂ ನಂಟಿದೆ.

ಎನ್‌ಐಎ ಪೊಲೀಸರು ದೇವನಹಳ್ಳಿಯ ಎಂ.ಜಿ.ರಾಜು, ಬಾಗಲಕೋಟೆಯ ಗಂಗಾಧರ್ ರಾಮಪ್ಪ ಕೋಲ್ಕರ್, ರಾಮಚಂದ್ರಾಪುರಂನ ಜೆ.ವನಿತಾ ಮತ್ತು ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ಸಾಜಿದ್ ಅಲಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಬೆಂಗಾಳದಿಂದ ಬೆಂಗಳೂರು : ನಕಲಿ ನೋಟು ಜಾಲ ವಿಸ್ತರಿಸಿದ್ದ ಅಕ್ಬರ್ಬೆಂಗಾಳದಿಂದ ಬೆಂಗಳೂರು : ನಕಲಿ ನೋಟು ಜಾಲ ವಿಸ್ತರಿಸಿದ್ದ ಅಕ್ಬರ್

ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ 2000 ರೂ. ಮುಖಬೆಲೆಯ 6 ಲಕ್ಷ ರೂ. ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ನಕಲಿ ನೋಟುಗಳನ್ನು ಪಶ್ಚಮ ಬಂಗಾಳದಿಂದ ತರಲಾಗಿತ್ತು ಎಂದು ಎನ್‌ಐಎ ಹೇಳಿದೆ.

ಎಟಿಎಂಗೆ ಹಣ ಭರಿಸುವ ಮೊದಲೇ 75 ಲಕ್ಷ ದೋಚಿ ಚಾಲಕ ಪರಾರಿಎಟಿಎಂಗೆ ಹಣ ಭರಿಸುವ ಮೊದಲೇ 75 ಲಕ್ಷ ದೋಚಿ ಚಾಲಕ ಪರಾರಿ

Fake Indian Currency Note in Bengaluru : NIA files charge sheet

ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲು ಆರೋಪಿಗಳು ಬೆಂಗಳೂರು ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು. ದೊಡ್ಡ ಮೊತ್ತದ ನಕಲಿ ನೋಟುಗಳನ್ನು ತಂದು ಚಲಾವಣೆ ಮಾಡಲಾಗುತ್ತಿತ್ತು.

ಮೊಹಮ್ಮದ್ ಸಾಜಿದ್ ಅಲಿ ಈ ಯೋಜನೆಯ ಕಿಂಗ್ ಪಿನ್ ಆಗಿದ್ದ. ಪಶ್ಚಿಮ ಬಂಗಾಳದಿಂದ ಈತ ನೋಟುಗಳನ್ನು ಬೆಂಗಳೂರಿಗೆ ತರುತ್ತಿದ್ದ. ಎಂ.ಜಿ.ರಾಜು ಮತ್ತು ಗಂಗಾಧರ್ ರಾಮಪ್ಪ ಕೋಲ್ಕರ್ ಹಿಂದೆಯೂ ನಕಲಿ ನೋಟು ಚಲಾವಣೆ ಮಾಡಿ ಜೈಲು ಸೇರಿದ್ದರು.

ಎಂ.ಜಿ.ರಾಜು ನಕಲಿ ನೋಟು ಚಲಾವಣೆ ಮಾಡಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಅವನಿಗೆ 7 ವರ್ಷಗಳ ಜೈಲು ಶಿಕ್ಷೆ ಆಗಿತ್ತು. ಜೈಲಿನಿಂದ ಹೊರಬಂದ ಬಳಿಕ ಪುನಃ ಆತ ನಕಲಿ ನೋಟುಗಳ ಚಲಾವಣೆ ಆರಂಭಿಸಿದ್ದ.

English summary
The National Investigation Agency (NIA) filed a charge sheet to NIA special court Bengaluru against four accused in connection with Fake Indian Currency Note. Rs 6 lakhs of Rs 2000 notes on found in Bengaluru on August 8, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X