ಸಿಬಿಐ ಅಧಿಕಾರಿಯಂತೆ ಕರೆ ಮಾಡಿದ ಕಲ್ಲಿನ ವ್ಯಾಪಾರಿ!

Posted By:
Subscribe to Oneindia Kannada

ಬೆಂಗಳೂರು, ಜನವರಿ 19 : ಸಿಬಿಐ ದಾಳಿಯ ವಿಡಿಯೋ ನೋಡಿ ಪ್ರೇರಿತನಾದ ಯುವಕನೊಬ್ಬ ಹಾಗೇ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ಯುವಕನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಆನೇಪಾಳ್ಯದ ನಿವಾಸಿ ಮೊಹಮದ್ ಅಬ್ಬಾಸ್ (21) ಎಂದು ಗುರುತಿಸಲಾಗಿದೆ. ತಾನು ಸಿಬಿಐ ವಿಶೇಷ ನಿರ್ದೇಶಕ ಎಂದು ಸಿಪಿಡ್ಲ್ಯೂಡಿ ಇಂಜಿನಿಯರ್‌ಗಳಿಗೆ ಕರೆ ಮಾಡಿದ್ದ ಅಬ್ಬಾಸ್, ಹಣ ಕೊಡದಿದ್ದರೆ ನಿಮ್ಮ ಮನೆ ಮೇಲೆ ಸಿಬಿಐ ದಾಳಿ ನಡೆಯಲಿದೆ ಎಂದು ಬೆದರಿಕೆ ಹಾಕಿದ್ದ. [ಮಹಾಪ್ರಚಂಡ ನಕಲಿ ಸಿಬಿಐ ಅಧಿಕಾರಿ ಬಂಧನ!]

bangalore police

ಇಂಜಿನಿಯರ್‌ಗಳು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಅಬ್ಬಾಸ್‌ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಇಂಜಿನಿಯರ್‌ಗಳಿಗೆ ಕರೆ ಮಾಡಲು ಬಳಸಿದ್ದ ಮೊಬೈಲ್‌ ಪೋನ್‌ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. [ಸಿಬಿಐ ಅಧಿಕಾರಿ ಹಣ, ಕಾರಿನೊಂದಿಗೆ ಪರಾರಿ]

ವಿಡಿಯೋ ನೋಡಿ ಕರೆ ಮಾಡಿದ : ಕಲ್ಲಿನ ವ್ಯಾಪಾರಿಯಾದ ಅಬ್ಬಾಸ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ. ಕಳೆದ ವರ್ಷ ಸಿಬಿಐ ಅಧಿಕಾರಿಗಳು ಉತ್ತರ ಪ್ರದೇಶದಲ್ಲಿ ಸಿಪಿಡ್ಲ್ಯೂಡಿ ಇಂಜಿನಿಯರ್ ಮನೆ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದು.

ಯೂಟ್ಯೂಬ್‌ನಲ್ಲಿ ಈ ಕುರಿತ ವಿಡಿಯೋ ನೋಡಿದ ಅಬ್ಬಾಸ್, ಇಂಜಿನಿಯರ್‌ಗಳಿಗೆ ಕರೆ ಮಾಡುವ ಸಂಚು ರೂಪಿಸಿದ. ಅದರಂತೆ ಇಂಟರ್‌ ನೆಟ್ ಮೂಲಕ ಇಂಜಿನಿಯರ್‌ಗಳ ದೂರವಾಣಿ ಸಂಖ್ಯೆಗಳನ್ನು ಪಡೆದು, ಅವರಿಗೆ ಜನವರಿ 12ರಂದು ಕರೆ ಮಾಡಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Ashoknagar police have arrested Syed Mohammed Abbas (21) who was posing as a CBI officer and threatening government officials and demanding money.
Please Wait while comments are loading...