ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ಸಿಐಎ ಎಜೆಂಟ್

|
Google Oneindia Kannada News

ಬೆಂಗಳೂರು, ಜ. 21 : ಅಮೆರಿಕದ ಸಿಐಎ ಎಜೆಂಟ್ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಐಎ ಎಜೆಂಟ್, ಪೈಲೆಟ್ ಎಂದು ಈತ ಹಲವಾರು ಯುವತಿಯರಿಗೆ ವಂಚನೆ ಮಾಡಿದ್ದ ಎಂದು ತಿಳಿದುಬಂದಿದೆ.

ಬಂಧಿತ ವ್ಯಕ್ತಿಯನ್ನು ಮುಂಬೈನ ಪರಿತೀಕ್ ಮಾತೂರ್ (28) ಎಂದು ಗುರುತಿಸಲಾಗಿದೆ. ನಾನು ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜನ್ಸ್ ಏಜೆನ್ಸಿ (ಸಿಐಎ)ಯ ಏಜೆಂಟ್, ಭಾರತದಲ್ಲಿ ಸೀಕ್ರೇಟ್ ಮಿಷನ್ ನಡೆಸುತ್ತಿದ್ದೇನೆ ಎಂದು ಯುವತಿಯರಿಗೆ ಈ ಮೇಲ್ ಕಳಿಸುತ್ತಿದ್ದ ಈತ ಅವರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ. [ಹುಬ್ಬಳ್ಳಿಯಲ್ಲಿ ಸಿಬಿಐ ಅಧಿಕಾರಿ ಹಣ, ಕಾರಿನೊಂದಿಗೆ ಪರಾರಿ]

ccb police

ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಪೈಲೆಟ್ ಆಗಿ ನಾನು ಕೆಲಸ ಮಾಡಿದ್ದು, ಸದ್ಯ ಭಾರತದಲ್ಲಿ ನೆಲೆಸಿದ್ದೇನೆ. ನೀವು ನನಗೆ ರಹಸ್ಯ ಕಾರ್ಯಾಚರಣೆಗೆ ಸಹಕಾರ ನೀಡಿಬೇಕು ಎಂದು ಯುವತಿಯರಿಗೆ ಈ ಮೇಲ್ ಕಳಿಸುತ್ತಿದ್ದ ಈತ, ಅವರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ. [ಸಿಸಿಬಿ ಪೊಲೀಸರ ಬಳಿ 150 ಕೋಟಿ ಕೇಳಿ ಸಿಕ್ಕಿಬಿದ್ದರು!]

ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತ ಯುವತಿಯೊಬ್ಬಳಿಂದ ಹಣ ಪಡೆದು ವಂಚನೆ ಮಾಡಿದ್ದ. ಈ ಕುರಿತು ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಬುಧವಾರ ನಕಲಿ ಸಿಐಎ ಎಜೆಂಟ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕಿಲೋಗರ್ ಎಂಬ ಸಾಫ್ಟ್‌ವೇರ್‌ ಬಳಸಿಕೊಂಡು ಈತ ಯುವತಿಯರಿಗೆ ಇಮೇಲ್ ಕಳಿಸುತ್ತಿದ್ದ. ಹಣಕಾಸಿನ ವ್ಯವಹಾರ ಮತ್ತು ಮಾಹಿತಿ ತಂತ್ರಜ್ಞಾನ ದುರ್ಬಳಕೆ ಸಂಬಂಧಿಸಿದಂತೆ ಈತನ ವಿರುದ್ಧ ಹಲವು ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ.

English summary
Bengaluru Central Crime Branch (CCB) police arrested 28 year old man for impersonating as an American Airline Pilot and The Central Intelligence Agency (CIA) agent to lure gullible ladies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X