ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ನಲ್ಲಿ ವೈರಸ್ ವಿಡಿಯೋ ಕಿರಿಕ್

By Mahesh
|
Google Oneindia Kannada News

ಬೆಂಗಳೂರು, ಜೂ.10: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮತ್ತೊಮ್ಮೆ ವಿಡಿಯೋ ವೈರಸ್ ಹರಿದಾಡುತ್ತಿದೆ. ಮಂಗಳವಾರ ಇಡೀ ಆಕ್ಟೀವ್ ಇದ್ದ ವೈರಸ್ ವಿಡಿಯೋ ಬುಧವಾರ ಸ್ವಲ್ಪ ತಣ್ಣಗಾಗಿದೆ. ಅದರೆ, ಈ ಬಗ್ಗೆ ಎಂಥಾ ಮಾಡುವುದು ಹೇಳಿ ತಿಳಿಯದೇ ಒಂದಷ್ಟು ಜನ ಗಾಬರಿಯಾಗಿದ್ದರೆ, ಕೆಲವರು ಅಕೌಂಟ್ ನಿಷ್ಕ್ರಿಯಗೊಳಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಈ ರೀತಿ ಸ್ಪಾಮ್ ವಿಡಿಯೋ ಹರಿದಾಡುವುದು ಮಾಮೂಲಿ. ಅದರೆ, ಮಂಗಳವಾರ ಹಲವಾರು ಮಂದಿಗೆ ಅಮಂಗಳಕರ ವಿಡಿಯೋ ದರ್ಶನ ಮಾಡಿ ಮುಜುಗರಕ್ಕೀಡಾಗಿದ್ದಾರೆ. [ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡಿದರೆ ಬಂಧಿಸಲ್ಲ]

ಏನಿಡು ವಿಡಿಯೋ ಕಿರಿಕಿರಿ: ನಿಮ್ಮ ಹೆಸರಿನ ಜತೆಗೆ ಅರ್ಜೆಂಟ್ ನಿಮ್ಮ ವಿಡಿಯೋ ನೋಡಿ ಎಂಬ ಮೆಸೇಜ್ ನಿಮ್ಮ ಇನ್ ಬಾಕ್ಸ್ ಗೆ ಬರುತ್ತದೆ. ಇದರಿಂದ ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದರೆ ಮುಗಿಯಿತು. ಸರಣಿಯಾಗಿ ಎಲ್ಲರಿಗೂ ವಿಡಿಯೋ ಮೆಸೇಜ್ ಹೋಗುತ್ತದೆ.

ಇದಾದ ಬಳಿಕ ನಿಮ್ಮ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆಗಿ ನಿಮ್ಮ ವಾಲ್ ಪೋಸ್ಟ್ ಪೂರ್ತಿ ಗಬ್ಬೆದ್ದು ಹೋಗುತ್ತದೆ. ವಿವಿಧ ತರಹದ ಅಶ್ಲೀಲ ವಿಡಿಯೋ ಇದ್ದು ಹಲವರಿಗೆ ಕಿರಿಕಿರಿ ಉಂಟು ಮಾಡಿದೆ.

ಒನ್ ಇಂಡಿಯಾದ 60ಸೆಕೆಂಡ್ಸ್ ನೌ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸುಮ ಮುದ್ದಾಪುರ ಅವರು ತಮಗಾದ ಅನುಭವವನ್ನು ವಿವರಿಸಿದ್ದಾರೆ ಮುಂದೆ ಓದಿ...

Facebook's Sneaky Viral Video Spam Problem

ಎಂದಿನಂತೆ ಇಂದು ಕೂಡ ಬೆಳಗ್ಗೆ 9.45ಕ್ಕೆ ಆಫೀಸಿಗೆ ಬಂದೆ. ಬಂದವಳೆ ನನ್ನ ಸಿಸ್ಟಮ್ ಮುಂದೆ ಕೂತು ಕೆಲಸ ಮಾಡಲು ಶುರು ಮಾಡಿದೆ. ಹಾಗೇ ಸ್ವಲ್ಪ ಸಮಯದ ನಂತರ ಫೇಸ್ ಬುಕ್ ಓಪನ್ ಮಾಡಿದಾಗ ಒಂದು ಮೆಸೇಜ್ ಬಂತು ಅದರಲ್ಲಿ honey suma watch urgent, because its your video ಅಂತ ಒಂದು link ಬಂತು. [ಫೇಸ್ ಬುಕ್ ಸಂಸ್ಥಾಪಕನಿಗೆ ಕೇರಳೀಯರ ಮನವಿ]

ತಕ್ಷಣ ನನಗೆ ಕುತೂಹಲವೆನಿಸಿ link ಅನ್ನು ಕ್ಲಿಕ್ಕಿಸಿದೆ. ಅಲ್ಲಿ ಯಾವುದೇ ವಿಡಿಯೋ ಪ್ಲೇ ಆಗಲಿಲ್ಲ. ಏನಿದು ಅಂತ ಮತ್ತೊಮ್ಮೆ ಕ್ಲಿಕ್ಕಿಸಿದೆ. ಆಗಲೂ ಯಾವುದೇ ವಿಡಿಯೋ ಪ್ಲೇ ಆಗಲಿಲ್ಲ.

ಅಷ್ಟರಲ್ಲೇ ಆ ವಿಡಿಯೋ link ನನ್ನ ಫೇಸ್ ಬುಕ್ ಗೆಳೆಯರಿಗೆಲ್ಲ ತನ್ನಷ್ಟಕ್ಕೆ ತಾನೇ ಸೆಂಡ್ ಆಗಿದೆ. ಮರುಕ್ಷಣವೇ ನನ್ನ ಸ್ನೇಹಿತರು ನನಗೆ ಕರೆ ಮಾಡಿದರು. ಅರೆ ಏನದು ಯಾವುದೋ ಅಶ್ಲೀಲ ವಿಡಿಯೋಗೆ ನನ್ನು ಟ್ಯಾಗ್ ಮಾಡಿದ್ದಿಯಾ ಅಂತ ಕೇಳಿದ್ರು. ನನಗೆ ಗಾಬರಿಯಾಗಿ ನನ್ನ ಪ್ರೋಫೈಲ್ ಚಕ್ ಮಾಡಿದಾಗ ನಾನು ಮತ್ತಷ್ಟು ಗಾಬರಿಯಾದೆ.

ಗೆಳೆಯರಿಂದ ಕರೆಗಳು ಬರುತ್ತಲೇ ಇವೆ. ಏನು ಮಾಡಬೇಕು ಎಂದು ತೋಚದೆ ತಬ್ಬಿಬ್ಬಾಗಿ ಹೊದೆ. ನನ್ನ ಫ್ರೋಫೈಲ್ ನ ವಾಲ್ ನಲ್ಲಿ ಅಶ್ಲೀಲ ಚಿತ್ರಗಳು ತನ್ನಷ್ಟಕ್ಕೆ ತಾನೇ ಅಪ್ ಲೋಡ್ ಆಗಿಬಿಟ್ಟಿವೆ. ಹಾಗೆಯೇ ತನ್ನಷ್ಟಕ್ಕೆ ತಾನೇ ನನ್ನ ಗೆಳೆಯರನ್ನು ಟ್ಯಾಗ್ ಮಾಡಿಕೊಂಡು ಬಿಟ್ಟಿದೆ. [ಅಶ್ಲೀಲ ಬರಹ ಶೇರ್ ಮಾಡಿ ಸಿಕ್ಕಿಬಿದ್ದ]

ತತ್‌ಕ್ಷಣ ನನ್ನ ಸಹೋದ್ಯೋಗಿಯ ಸಲಹೆ ಮೇರೆಗೆ ನನ್ನ ಅಕೌಂಟ್ ಪಾಸ್‌ವರ್ಡ್ ಬದಲಿಸಿದೆ. ಆದರೂ, ಸರಿ ಹೋಗಲಿಲ್ಲ. ಕೊನೆಗೆ ನನ್ನ ಅಕೌಂಟ್ ಅನ್ನು ಡಿ ಆಕ್ಟಿವೇಟ್ ಮಾಡಿದ ನಂತರವೇ ಆ ವಿಡಿಯೋಗಳೆಲ್ಲ ತನ್ನಷ್ಟಕ್ಕೆ ತಾನೇ ಡಿಲಿಟ್ ಆಗಿವೆ. ಈ ವಿಡಿಯೋದಿಂದ ನನ್ನ ಮಂಡೆ ಬಿಸಿ ಆಗಿದ್ದಂತೂ ಸುಳ್ಳಲ್ಲ.... ಫೇಸ್ ಬುಕ್ ಈ ಬಗ್ಗೆ ಏಕೆ ಗಮನ ಹರಿಸುವುದಿಲ್ಲ..

English summary
"My account has been hacked by some one so plz don't mind if any nonsense msgs or post are displayed thanks" This was the message posted by many Facebook users after facing sneaky viral video spam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X