ತಾಯ್ತನ ರಜಾ ವಿಸ್ತರಣೆ ವಿರೋಧಿಸಿದ ಮಹಿಳಾ ಉದ್ಯಮಿಗಳು

Posted By:
Subscribe to Oneindia Kannada

ಬೆಂಗಳೂರು: ಮಾರ್ಚ್ 13: ಇತ್ತೀಚೆಗೆ ಕೇಂದ್ರ ಸರ್ಕಾರ 26 ವಾರಗಳ ವೇತನ ಸಹಿತ ತಾಯ್ತನ ರಜೆಯನ್ನು ಘೋಷಿಸುತ್ತಿದ್ದಂತೆಯೇ ಹಲವು ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಉದ್ಯೋಗಸ್ಥ ಮಹಿಳೆಯರ ಪಾಲಿಗೆ ಕೇಂದ್ರ ಸರ್ಕಾರದ ಈ ಕೊಡುಗೆ ನಿಜಕ್ಕೂ ವರದಾನ ಎಂಬ ಮಾತು ಎಲ್ಲೆಡೆಯಿಂದ ಕೇಳಿಬರುತ್ತಿದೆ.

ಆದರೆ ಇದೇ ಹೊತ್ತಲ್ಲಿ ಕೆಲ ಮಹಿಳಾ ಉದ್ಯಮಿಗಳೇ ತಾಯ್ತನದ ರಜೆಯ ವಿಸ್ತರಣೆಯನ್ನು ವಿರೋಧಿಸುತ್ತಿದ್ದಾರೆ. ತಾಯ್ತನದ ರಜೆಯ ವಿಸ್ತರಣೆಯಿಂದಾಗಿ ಉದ್ಯೋಗಕ್ಕೆ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೇ ಕಂಪೆನಿಗಳು ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಬರುತ್ತದೆ, ಇದು ಮಹಿಳೆಯರ ವೃತ್ತಿ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ಮಹಿಳಾ ಉದ್ಯಮಿಗಳ ಅಭಿಪ್ರಾಯ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ಶಾ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಮಹಿಳೆಯರಿಗೆ ಸಿಹಿಸುದ್ದಿ- ತಾಯ್ತನದ ರಜೆ ಇನ್ಮುಂದೆ 26 ವಾರ]

ಮೊದಲು 14 ವಾರ ಸಾಕು

ಮೊದಲು 14 ವಾರ ಸಾಕು

ತಾಯ್ತನ ರಜಾ ವಿಸ್ತರಣೆಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ವ್ಯಕ್ತಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಿರಣ್ ಮಜುಂದಾರ್ ಶಾ, "ನೀವು ನಿಜಕ್ಕೂ ಉದ್ಯೋಗಸ್ಥ ಮಹಿಳೆಯರನ್ನು ಬೆಂಬಲಿಸುತ್ತಿಲ್ಲ. ಜಾಗತಿಕವಾಗಿ ಸರಾಸರಿ 14 ವಾರಗಳ ತಾಯ್ತನ ರಜಾ ಸಾಮಾನ್ಯ. ಉಳಿದ 12 ವಾರಗಳನ್ನು ಎರಡನೇ ವರ್ಷ ನೀಡುವುದು ಸರಿಯಾದ ಕ್ರಮ" ಎಂದಿದ್ದಾರೆ.

ನಷ್ಟದ ಪ್ರಶ್ನೆಯಷ್ಟೇ ಅಲ್ಲ!

"ವೇತನ ಸಹಿತ ತಾಯ್ತನ ರಜಾ ನೀಡುವುದು ಕಂಪೆನಿಗೆ ನಷ್ಟ ಎಂಬುದೊಂದೇ ವಿಷಯವಲ್ಲ. ಅದಕ್ಕಿಂತ ಹೆಚ್ಚಾಗಿ, ಅವರು ರಜೆಯಲ್ಲಿದ್ದಾಗ ಮತ್ತೊಬ್ಬರನ್ನು ಆ ಜಾಗಕ್ಕೆ ಆಯ್ಕೆ ಮಾಡಿಕೊಳ್ಳುವುದು ಕಂಪೆನಿಗೆ ಅನಿವಾರ್ಯವಾಗುತ್ತದೆ. ಇದರಿಂದ ಮಹಿಳೆಯರ ಉದ್ಯೋಗಕ್ಕೆ ಕುತ್ತು ಬರಬಹುದು" ಎಂಬುದು ಸಿಮ್ಮಿ ಸಮೀರ್ ಎಂಬುವವರ ಅಭಿಪ್ರಾಯ

ಮಸೂದೆಯನ್ನು ಒಪ್ಪೋಲ್ಲ

ಅಮಿತಾ ಸಹಾಯ ಎನ್ನುವವರು ಹೇಳುವ ಪ್ರಕಾರ, "ನಾವು ಈ ಮಸೂದೆಯನ್ನು ಒಪ್ಪೋಲ್ಲ. ಇದರಿಂದ ಮಹಿಳೆಯರು ತಮ್ಮ ಉದ್ಯೋಗ ಕಳೆದುಕೊಳ್ಳಬೇಕಾಗಬಹುದು".

ವೇತನ ತಾರತಮ್ಯ ಹೆಚ್ಚಾಗಬಹುದು

"ಪುರುಷರಿಗೆ ಹೋಲಿಸಿದರೆ ಈಗಾಗಲೇ ಮಹಿಳೆಯರಿಗೆ ನೀಡುವ ವೇತನದಲ್ಲಿ ತಾರತಮ್ಯವಿದೆ. ಈ ಮಸೂದೆಯಿಂದ ಈ ತಾರತಮ್ಯ ಇನ್ನಷ್ಟು ಹೆಚ್ಚಬಹುದು" ಎಂಬ ಅಭಿಪ್ರಾಯ ಲಿವ್ ಫಾರೆವರ್ ಎಂಬ ಖಾತೆಯಿಂದ ಪೋಸ್ಟ್ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some women enterprenours oppose the new bill on Maternity Leave extension by Central government. It is not a good decision for women, Kiran mazumdar shaw, Biocon chairman says.
Please Wait while comments are loading...