ಪ್ರವಾಸಿಗರೇ, ದೇವರ ಸ್ವಂತ ನಾಡನ್ನು ಆವಿಷ್ಕರಿಸಿ!

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಬೆಂಗಳೂರಿನಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನಲ್ಲಿ ಇಂದು(ಜನವರಿ 12) ಬಿ2ಬಿ ರೋಡ್‍ಶೋಗಳನ್ನು ಆಯೋಜಿಸಿದೆ. ಈ ರೋಡ್ ಶೋ ನಗರದ ಮುಂಚೂಣಿಯ ಟ್ರಾವೆಲ್ ಏಜೆಂಟರು ಮತ್ತು ಟೂರ್ ಆಪರೇಟರ್ ಗಳನ್ನು ದೇವರ ಸ್ವಂತ ನಾಡು'ವಿನ ಶ್ರೇಷ್ಠತೆಯನ್ನು ಕಾಣಲು ಆಕರ್ಷಿಸಲಿದೆ.

ಕೇರಳ ಪ್ರವಾಸೋದ್ಯಮದ ಉಪ ನಿರ್ದೇಶಕ ಕೆ.ಪಿ.ನಂದಕುಮಾರ್ ಮತ್ತು ರಾಜ್ಯ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ. ಹೊಸ ಸಹಯೋಗಗಳಲ್ಲದೆ ಈ ರೋಡ್‍ಶೋ ಹೊಸ ಉಪಕ್ರಮಗಳು, ಅನುಭವಗಳು ಮತ್ತು ಆಕರ್ಷಣೆಗಳನ್ನು ಪ್ರದರ್ಶಿಸಲಿದೆ.

ಕೇರಳ ಪ್ರವಾಸೋದ್ಯಮ: ಇಲ್ಲಿಯವರೆಗಿನ ಕಥೆ: 2016-17ರ ವರ್ಷಕ್ಕೆ ಮಾರ್ಕೆಟಿಂಗ್ ಉಪಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದ್ದು 'ದೇವರ ಸ್ವಂತ ನಾಡಿ'ಗೆ ಭೇಟಿ ನೀಡುವವರ ವಿಶಿಷ್ಟ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಪೂರೈಸಲಾಗುತ್ತದೆ. ಸರ್ಕಾರ ಅಳವಡಿಸಿಕೊಂಡಿರುವ ಅತ್ಯಾಧುನಿಕ ಮಾರಾಟ ಉಪಕ್ರಮಗಳಿಂದ ರಾಜ್ಯವು ವಿಶ್ವದಾದ್ಯಂತ ಕಡ್ಡಾಯವಾಗಿ ಭೇಟಿ' ನೀಡಬೇಕಾದ ತಾಣವೆನಿಸಿದೆ. ಸರ್ಕಾರ ಅನುಷ್ಠಾನಗೊಳಿಸಿದ ಹಲವು ಉಪಕ್ರಮಗಳಿಂದ ಒಂದು ವರ್ಷದಲ್ಲಿಯೇ ಪ್ರವಾಸಿಗರ ಸಂಖ್ಯೆ ಅಪಾರವಾಗಿ ಹೆಚ್ಚಿದೆ.

ಪ್ರವಾಸಿಗರ ಸಂಖ್ಯೆ

ಪ್ರವಾಸಿಗರ ಸಂಖ್ಯೆ

ಸೆಪ್ಟೆಂಬರ್ 2016ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಹಿಂದಿನ ವರ್ಷ ಸೆಪ್ಟೆಂಬರ್ 2015ಕ್ಕೆ ಹೋಲಿಸಿದರೆ ಶೇ.5.61ರಷ್ಟು ಹೆಚ್ಚಿದೆ.
ದೇಶಿ ಪ್ರವಾಸಿಗರ ಪ್ರಮಾಣ ಸೆಪ್ಟೆಂಬರ್ 2016ಕ್ಕೆ ಕಳೆದ ವರ್ಷ ಸೆಪ್ಟೆಂಬರ್ 2015ಕ್ಕೆ ಹೋಲಿಸಿದರೆ ಶೇ.6.01ರಷ್ಟು ಹೆಚ್ಚಾಗಿದೆ.
2015ರಲ್ಲಿ ವಿದೇಶಿ ವಿನಿಮಯ ಗಳಿಕೆ 6949.88 ಕೋಟಿ ರೂ.ಇದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.8.61ರಷ್ಟು ಹೆಚ್ಚಾಗಿದೆ.
ಪ್ರವಾಸೋದ್ಯಮದಿಂದ 2015ರಲ್ಲಿ ಒಟ್ಟು ಆದಾಯ(ನೇರ ಮತ್ತು ಪರೋಕ್ಷ) 26689.63 ಕೋಟಿ ರೂ.ಗಳಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.7.25ರಷ್ಟು ಹೆಚ್ಚಾಗಿದೆ.

ಹೆಚ್ಚು ಪ್ರವಾಸಿಗರ ಆಕರ್ಷಣೆ

ಹೆಚ್ಚು ಪ್ರವಾಸಿಗರ ಆಕರ್ಷಣೆ

ಸೆಪ್ಟೆಂಬರ್ 2016ರಂದು ಪ್ರಾರಂಭವಾದ ಗ್ರೀನ್ ಕಾರ್ಪೆಟ್ ಉಪಕ್ರಮ 10-ಅಂಶದ ಕಾರ್ಯಕ್ರಮ ಹೊಂದಿದ್ದು ರಾಜ್ಯದ ಆಯ್ದ ಪ್ರವಾಸೀ ತಾಣಗಳನ್ನು ಪರಿವರ್ತಿಸುತ್ತದೆ. ಈ ಉಪಕ್ರಮವು ಭದ್ರತೆ, ಸ್ವಚ್ಛತೆ, ನೈರ್ಮಲ್ಯ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ವಿಧಾನಗಳಿಗೆ ಒಗ್ಗೂಡಿದ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದು ವಿನೂತನ ಅನುಭವಗಳನ್ನು ನೀಡುತ್ತದೆ. ಈ ಉಪಕ್ರಮ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಮುದಾಯದ ತೊಡಗಿಕೊಳ್ಳುವಿಕೆಗೆ ಉತ್ತೇಜನ ನೀಡುತ್ತದೆ.

ಮಸಾಲೆ ಮಾರ್ಗದ ಜಾಡು ಹಿಡಿದು.....

ಮಸಾಲೆ ಮಾರ್ಗದ ಜಾಡು ಹಿಡಿದು.....

ಕೇರಳ ಎರಡು ಸಹಸ್ರ ವರ್ಷಗಳ ನೈಋತ್ಯ ಭಾರತದಿಂದ ಯೂರೋಪ್‍ಗೆ ಇರುವ ಹಳೆಯ ಮಸಾಲೆ ಮಾರ್ಗವನ್ನು ಪುನರುತ್ಥಾನಗೊಳಿಸಿದ್ದು, ಯುನೈಟೆಡ್ ನೇಷನ್ಸ್ ವರ್ಲ್ಡ್ ಟೂರಿಸಂ ಆರ್ಗನೈಸೇಷನ್ (ಯುಎನ್ ಡಬ್ಲ್ಯೂಟಿಒ) ಈ ಪ್ರಯತ್ನಕ್ಕೆ ನೆರವಾಗುವ ಭರವಸೆ ನೀಡಿದೆ.

ಸೆಪ್ಟೆಂಬರ್ ನಲ್ಲಿ ಕೇರಳದ ಸ್ಥಳೀಯ ಬಾಣಸಿಗರ 17 ತಂಡಗಳು ಕೊಚ್ಚಿಯ ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಅಲ್ಲಿನ ಉತ್ಪನ್ನಗಳನ್ನು ಬಳಸಿ ತಯಾರಿಸುವ ಸ್ಪೈಸ್ ರೂಟ್ ಕಲಿನರಿ ಫೆಸ್ಟಿವಲ್‍ನಲ್ಲಿ ಭಾಗವಹಿಸಿದರು. ಅವರು ಮಾರುಕಟ್ಟೆಯ ನೋಟ, ವಾಸನೆ ಮತ್ತು ಶಬ್ದಗಳು ಎಷ್ಟು ಥ್ರಿಲ್ಲಿಂಗ್ ಆಗಿವೆ ಎಂದು ತೋರಿಸಿದರು

ದ್ವೈವಾರ್ಷಿಕದ ಭೂಮಿ

ದ್ವೈವಾರ್ಷಿಕದ ಭೂಮಿ

ಕೊಚ್ಚಿ ಮುಝಾರಿಸ್ ಬೈಯೆನ್ನೇಲ್ ಅಂತಾರಾಷ್ಟ್ರೀಯ ಸಮಕಾಲೀನ ಕಲಾ ಉತ್ಸವವಾಗಿದ್ದು ಕೇರಳಕ್ಕೆ 'ದ್ವೈವಾರ್ಷಿಕದ ಭೂಮಿ' ಎಂಬ ಹೆಸರನ್ನು ನೀಡಿದೆ.

ಪ್ರವಾಸೋದ್ಯಮ ಇಲಾಖೆ 7.5 ಕೋಟಿ ರೂ.ಗಳನ್ನು ಈ ದ್ವೈವಾರ್ಷಿಕ ಕಾರ್ಯಕ್ರಮದ ಮೂರನೆಯ ಆವೃತ್ತಿಗೆ ಮೀಸಲಿರಿಸಿದೆ. ಈ ಕಾರ್ಯಕ್ರಮ ರಾಜ್ಯದ ಪ್ರವಾಸೋದ್ಯಮ ವಲಯ ಅಭಿವೃದ್ಧಿಗೆ ಸಮುದಾಯದ ಭಾಗವಹಿಸುವಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಕಾರ್ಯಕ್ರಮದಿಂದ ನೋಟುಗಳ ಅಮಾನ್ಯೀಕರಣದಿಂದ ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾದಾಗ ವಿಶಿಷ್ಟ ಆರ್ಥಿಕ ವಲಯ ಸೃಷ್ಟಿಸಲು ನೆರವಾಗಿದೆ.

ವಿಶಿಷ್ಟ ನಿಸರ್ಗ ಆಧರಿತ ಸಾಹಸ

ವಿಶಿಷ್ಟ ನಿಸರ್ಗ ಆಧರಿತ ಸಾಹಸ

ಕೇರಳ ಪ್ರವಾಸೋದ್ಯಮ ವಿಶಿಷ್ಟ ನಿಸರ್ಗ ಆಧರಿತ ಸಾಹಸದ ರಜಾಮೋಜಿನ ಕಾರ್ಯಕ್ರಮಗಳನ್ನು ನ್ಯಾಟ್ ವೆಂಚರ್ ಹೆಸರಿನಲ್ಲಿ ಪ್ರಾರಂಭಿಸಿದೆ. ಈ ಕಾರ್ಯಕ್ರಮದ ಹಿಂದಿನ ಉದ್ದೇಶ ವನ್ಯಜೀವಿ, ಹಿಲ್ ಸ್ಟೇಷನ್‍ಗಳು, ಬೀಚ್ ಗಳು, ಹಿನ್ನೀರು ಇತ್ಯಾದಿಗಳನ್ನೂ ಅಭಿವೃದ್ಧಿಪಡಿಸಲಿದೆ. ಮತ್ತು ಅವುಗಳಲ್ಲಿ ದೊರೆಯುವ ಸಾಹಸ ಚಟುವಟಿಕೆಗಳ ಸಾಧ್ಯತೆಗಳನ್ನು ಅನ್ವೇಷಿಸಲಿದೆ. ಕೇರಳ ನ್ಯಾಟ್ ವೆಂಚರ್ ಚಟುವಟಿಕೆಗಳಲ್ಲಿ ಟ್ರೆಕ್ಕಿಂಗ್, ಕ್ಯಾಂಪಿಂಗ್, ರಾಕ್ ಕ್ಲೈಂಬಿಂಗ್, ಜಂಗಲ್ ಟೂರ್, ವೈಲ್ಡ್‍ಲೈಫ್ ಸಫಾರಿ, ಪಕ್ಷಿವೀಕ್ಷಣೆ, ಸೈಕ್ಲಿಂಗ್, ಕಯಾಕಿಂಗ್, ಕ್ಯಾನೋಯಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಒಳಗೊಂಡಿವೆ.

ಬೇಕಲ್' ಅನ್ನು ಉತ್ತರ ಕೇರಳದ ಹೊಸ ತಾಣ

ಬೇಕಲ್' ಅನ್ನು ಉತ್ತರ ಕೇರಳದ ಹೊಸ ತಾಣ

ಹೊಸ ಅಭಿಯಾನ ಹೋಮ್ ಆಫ್ ಆಯುರ್ವೇದ ಕೂಡಾ ಎಲ್ಲ ಮಾಧ್ಯಮಗಳಲ್ಲಿ ಆಯುರ್ವೇದವನ್ನು ಉತ್ತೇಜಿಸಲು ಪ್ರಾರಂಭಿಸಲಾಗಿದೆ. `ಬೇಕಲ್' ಅನ್ನು ಉತ್ತರ ಕೇರಳದ ಹೊಸ ತಾಣವಾಗಿ ಪರಿಚಯಿಸಲಾಗಿದೆ. ಋತು ಆಧಾರಿತ ಪ್ರವಾಸೋದ್ಯಮ ಆಯ್ಕೆಯಿಂದ ಕೇರಳ ಎಲ್ಲ ಋತುಗಳ ಪ್ರವಾಸೀ ತಾಣವಾಗಿ ಬದಲಾಗಿದ್ದು ಅದಕ್ಕೆ ಆಫ್ ಸೀಸನ್‍ನಲ್ಲಿ ಡ್ರೀಮ್ ಸೀಸನ್ ಎಂಬ ಯಶಸ್ವಿ ಅಭಿಯಾನ ಕಾರಣ.

ಡಿಜಿಟಲ್ ಜಗತ್ತಿನಲ್ಲಿ ಹೆಗ್ಗುರುತು

ಡಿಜಿಟಲ್ ಜಗತ್ತಿನಲ್ಲಿ ಹೆಗ್ಗುರುತು

ಬಹಳ ಅಲ್ಪ ಅವಧಿಯಲ್ಲಿ ಕೇರಳ ಪ್ರವಾಸೋದ್ಯಮ ಡಿಜಿಟಲ್ ಜಗತ್ತಿನಲ್ಲಿ ಕೂಡಾ ತನ್ನದೇ ಹೆಗ್ಗುರುತನ್ನು ಮೂಡಿಸಿದೆ. ಅದರ ಫೇಸ್‍ಬುಕ್ ಪುಟದಲ್ಲಿ 12.8 ಲಕ್ಷ ಫಾಲೋಯರ್ ಗಳಿದ್ದು ಭಾರತದ ಯಾವುದೇ ಟೂರಿಸಂ ಬೋರ್ಡ್‍ನ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ. ಇದಲ್ಲದೆ ಕೇರಳ ಟೂರಿಸಂ 44,000ಕ್ಕೂ ಹೆಚ್ಚು ಟ್ವಿಟ್ಟರ್ ಫಾಲೋಯರ್ ಗಳು, 6000ಕ್ಕೂ ಹೆಚ್ಚು ಇನ್‍ಸ್ಟಾಗ್ರಾಮ್ ಫಾಲೋಯರ್ ಗಳು, 500ಕ್ಕೂ ಹೆಚ್ಚು ಪಿಂಟರೆಸ್ಟ್ ಫಾಲೋಯರ್ ಗಳು ಮತ್ತು 700ಕ್ಕೂ ಹೆಚ್ಚು ಫೋರ್ ಸ್ಕ್ವಯರ್ ಫಾಲೋಯರ್ ಗಳನ್ನು ಹೊಂದಿದೆ. ಕೇರಳ ಟೂರಿಸಂನ ಅಧಿಕೃತ ಯೂಟ್ಯೂಬ್ ಚಾನೆಲ್‍ಗೆ 23,000 ಚಂದಾದಾರರಿದ್ದು ಕೇರಳ, ಬ್ಯಾಕ್‍ವಾಟರ್ಸ್ ಮತ್ತು ಆಯುರ್ವೇದ ಕುರಿತು ಗೆಸ್ಟ್ ಬ್ಲಾಗ್‍ಗಳಲ್ಲಿ 250ಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿವೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು..

ಪ್ರಶಸ್ತಿ ಮತ್ತು ಪುರಸ್ಕಾರಗಳು..

ಕೇರಳ ಟೂರಿಸಂ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಜಾಗತಿಕ ವೇದಿಕೆಯಲ್ಲಿ ಐಟಿಬಿ ಬರ್ಲಿನ್‍ನಲ್ಲಿ ಗೋಲ್ಡನ್ ಸಿಟಿ ಗೇಟ್ ಅವಾರ್ಡ್(ಮುದ್ರಣ ಅಭಿಯಾನ), ಬೆಸ್ಟ್ ಫ್ಯಾಮಿಲಿ ಅಂಡ್ ಬೆಸ್ಟ್ ವ್ಯಾಲ್ಯೂ ಫಾರ್ ಮನಿ ಡೆಸ್ಟಿನೇಷನ್ ಇತ್ಯಾದಿ ಅಲ್ಲದೆ ಇತ್ತೀಚೆಗೆ ತನ್ನ ಮಾರ್ಕೆಟಿಂಗ್ ಉಪಕ್ರಮಗಳಿಗೆ ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್(ಪಿಎಟಿಎ)ನಲ್ಲಿ ಎರಡು ಗೋಲ್ಡ್ ಪ್ರಶಸ್ತಿಗಳನ್ನು ಪಡೆದಿದೆ.

ವಲ್ರ್ಡ್ ಟ್ರೇಡ್ ಮಾರ್ಕೆಟ್, ಲಂಡನ್‍ನಲ್ಲಿ `ಬೆಸ್ಟ್ ಸ್ಟಾಂಡ್ ಫೀಚರ್' ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ. ಕೇರಳದ ಸ್ನೇಕ್-ಬೋಟ್ ರೇಸ್‍ಗಳಲ್ಲಿ ಶೋಪೀಸ್ ಪ್ರದರ್ಶನವನ್ನು `ವಲ್ಲಂ ಕಾಳಿ'ಯಲ್ಲಿ ಸ್ನೇಕ್-ಬೋಟ್ ಪ್ರತಿಕೃತಿಗಳನ್ನು ಮಾತ್ರವಲ್ಲದೆ ವಿಡಿಯೋ ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala Tourism: Considering the uptick in inbound tourism from Bengaluru, the Department of Tourism, Government of Kerala is organizing B2B Roadshows in Bengaluru on 12th of January, 2017. The roadshow desires to attract city’s leading travel agents and tour operators, and showcase to them the best of ‘God’s own country’.
Please Wait while comments are loading...