ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪಾಡ್‌ ಟ್ಯಾಕ್ಸಿ ಯೋಜನೆಗೆ ನಗರ ತಜ್ಞರ ವಿರೋಧ

By Nayana
|
Google Oneindia Kannada News

ಬೆಂಗಳೂರು, ಜು.9: ಬೆಂಗಳೂರಿನ ಟ್ರಾಫಿಕ್‌ ನಿರ್ವಹಣೆಗಾಗಿ ಪಾಡ್‌ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಸರ್ಕಾರ ಮುಂದಾಗಿತ್ತು. ಆದರೆ ಅರಂಭದಲ್ಲೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಪಾಡ್‌ ಟ್ಯಾಕ್ಸಿ ಯೋಜನೆಯಿಂದ ತೊಂದರೆಗಳು ಹೆಚ್ಚುತ್ತಿದೆ ಎಂದು ನಗರ ಯೋಜನಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮೆಟ್ರೋ ರೈಲು ಬಳಿಕ ಎಲಿವೇಟೆಡ್‌ ರಸ್ತೆ ಹಾಗೂ ಪಾಡ್‌ ಟ್ಯಾಕ್ಸಿ ಯೋಜನೆಗೆ ಸರ್ಕಾರ ಮುಂದಾಗಿತ್ತು. ಮುಂದಾಲೋಚನೆ ಇಲ್ಲದೆ ಜಾರಿಗೆ ತಂದಿದ್ದೇ ಆದಲ್ಲಿ ಜನರಿಗೆ ತೊಂದರೆ ಜತೆಗೆ ಸರ್ಕಾರಕ್ಕೂ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ? ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ?

ಸಿಟಿಜನ್‌ ಫಾರ್‌ ಬೆಂಗಳೂರು ಏರ್ಪಡಿಸಿದ್ದ ಎಲಿವೇಟೆಡ್‌ ಕಾರಿಡಾರ್‌, ಪಾಡ್‌ ಟ್ಯಾಕ್ಸಿ ಯೋಜನೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ತಜ್ಞರು ಈ ಅಭಿಪ್ರಾಯ ತಿಳಿಸಿದ್ದಾರೆ.

Experts oppose elevated corridor and POD taxi

ಎಲಿವೇಟೆಡ್‌ ಕಾರಿಡಾರ್‌ ರಸ್ತೆ ಯೋಜನೆಗಳಿಗೆ ಅತ್ಯಧಿಕ ಹಣ ಖರ್ಚಾಗುತ್ತದೆ. ಪಾಡ್‌ ಟ್ಯಾಕ್ಸಿಯಿಂದಲೂ ಸಂಚಾರ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬ ಖಾತರಿ ಇಲ್ಲ, ಹಣ ದುಂದುವೆಚ್ಚ ಮಾಡುವ ಬದಲು ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಐಐಎಸ್ಸಿಯ ಪ್ರಾಧ್ಯಾಪಕ ಪ್ರೊ. ಆಶಿಷ್‌ ವರ್ಮಾ ಮಾಹಿತಿ ನೀಡಿದ್ದಾರೆ.

ನಗರ ಯೋಜನಾ ತಜ್ಞ ವಿ. ರವಿಚಂದರ್‌ ಮಾತನಾಡಿ, ಸುಸ್ಥಿರ ಸಾರಿಗೆ ಯೋಜನೆಯನ್ನು ಜಾರಿಗೆ ತರುವ ಮುನ್ನ ನಾಗರಿಕರ ಸಲಹೆ ಆಲಿಸಬೇಕು. ಉದ್ದೇಶಿತ ಎರಡೂ ಯೋಜನೆಗಳು ನಮ್ಮ ನಗರಕ್ಕೆ ಪೂರಕವಾಗಿದೆಯೇ ಎಂಬುದರ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು.

English summary
Urban experts, environmentalists and thinkers have opposed elevated corridor project in Bangalore as the project will be costlier and unscientific while POD taxi will not be suitable for Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X