ಬೆಳ್ಳಂದೂರು, ವರ್ತೂರು ಕೆರೆಗಳ ಪರಿಶೀಲನೆ ಪೂರ್ಣ: ಏ.20ಕ್ಕೆ ವರದಿ ಸಾಧ್ಯತೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚನೆ ಹಿನ್ನೆಲೆಯಲ್ಲಿ ಬೆಳ್ಳಂದೂರು ಸೇರಿ ಇತರೆ ಕೆರೆಗಳ ವಸ್ತುಸ್ಥಿತಿ ಅಧ್ಯಯನ ನಡೆಸಿರುವ ಹಿರಿಯ ವಕೀಲ ರಾಜ್ ಪಂಜ್ವಾನಿ ನೇತೃತ್ವದ ತಜ್ಞರ ಸಮಿತಿ ಏ.20ರೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ

ಮೇ.11ರ ವರದಿ ಸಲ್ಲಿಕೆಗೆ ಅವಕಾಶವಿದೆಯಾದರೂ ಏ.20ರೋಳಗೆ ಪೂರ್ಣ ಪ್ರಮಾಣದ ವರದಿ ಸಿದ್ಧಪಡಿಸುವ ಗುರಿಯನ್ನು ರಾಜ್ ಪಂಜ್ವಾನಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಭಾನುವಾರ ವರ್ತೂರು ಕೆರೆ ಸೇರಿ ಕೆಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ ಸಮಿತಿ, ಬಿಡಿಎ ಕಚೇರಿಯಲ್ಲಿ ಸ್ಥಳೀಯ ಪ್ರಾಧಿಕಾರಗಳು ಮತ್ತು ಸ್ಥಳೀಯರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ದೂರುಗಳನ್ನು ಸ್ವೀಕರಿಸಿದೆ. ಎನ್ ಜಿಟಿ ಸ್ಥಳೀಯ ಪ್ರಾಧಿಕಾರಗಳು ಸಲ್ಲಿಸಿರುವ ಕ್ರಿಯಾ ಯೋಜನೆಯಲ್ಲಿರುವ ಅಂಶಗಳು ಮತ್ತು ಕೆರೆಯಲ್ಲಿನ ವಸ್ತು ಸ್ಥಿತಿಯನ್ನು ತಂಡ ತನ್ನ ವರದಿ ಮೂಲಕ ನ್ಯಾಯಪೀಠದ ಮುಂದುವರಿಸಲಿದೆ.

Expert committee will submit report NGT before April 20

ಕೆರೆ ವಿಚಾರವಾಗಿ ಈಗಾಗಲೇ ಎನ್ ಜಿಟಿ ಕೆಂಗಣ್ಣಿಗೆ ಗುರಿಯಾಗಿರುವ ಸ್ಥಳೀಯ ಪ್ರಾಧಿಕಾರಗಳಿಗೆ ಸಮಿತಿಯ ಪರಿಶೀಲನೆ ಮತ್ತಷ್ಟು ಆತಂಕ ತರಿಸಿದೆ. ವಸ್ತುಸ್ಥಿತಿ ಮತ್ತು ಕ್ರಿಯಾಯೋಜನೆಯಲ್ಲಿನ ಅಂಶಗಳಿಗೆ ಹೋಲಿಕೆಯಾಗುತ್ತಿಲ್ಲ. ಸ್ಥಳೀಯ ಪ್ರಾಧಿಕಾರಗಳು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿವೆ ಎಂದು ಭಾವಿಸಿರಲಿಲ್ಲ ಎಂದು ನೇರವಾಗಿಯೇ ನ್ಯಾಯಪೀಠ ಅಸಮಾಧಾನ ಹೊರಹಾಕಿತ್ತು.

ಈ ನಡುವೆ ತಂಡ ಪರಿಶೀಲನೆ ನಡೆಸುತ್ತಿದ್ದ ವೇಳೆಯೂ ಹಲವು ಸಂಗತಿಗಳನ್ನು ಸ್ಥಳೀಯರು ಬಿಚ್ಚಿಟ್ಟಿರುವುದು ಅಧಿಕಾರಿಗಳಲ್ಲಿ ನ್ಯಾಯಾಂಗ ತೂಗುಗತ್ತಿ ಭೀತಿ ಶುರುವಾಗಿದೆ. ರಾಜ್ ಪಂಜ್ವಾನಿ ಯಾವೆಲ್ಲ ಅಂಶಗಳನ್ನು ನಮೂದಿಸಲಿದ್ದಾರೆ ಎಂಬುದು ವಿಚಾರಣೆಯಲ್ಲಿ ಬಹಿರಂಗವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Expert committee on Bangalore lakes led by Delhi senior advocate will submit its report to national green tribunal before April 20. The team was visited Bellanduru, Araga and Varthur lakes on Saturday and Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ