ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಮದ್ಯ ದಾಸ್ತಾನು, ಕಪಾಲಿ ಮೋಹನ್ ವಿರುದ್ಧ ಮತ್ತೊಂದು ಕೇಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಜೂಜಾಟದ ಕೇಸಿನಲ್ಲಿ ಮುಖ್ಯ ಆರೋಪಿ ಉದ್ಯಮಿ, ಫೈನಾನ್ಶಿಯರ್ ಕಪಾಲಿ ಮೋಹನ್ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಅಕ್ರಮ ಮದ್ಯ ದಾಸ್ತಾನು ಮಾಡಿದ ಆರೋಪವನ್ನು ಮೋಹನ್ ಎದುರಿಸುತ್ತಿದ್ದಾರೆ.

ಉದ್ಯಮಿ ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿಉದ್ಯಮಿ ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ

ಜೂಜೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪಾಲಿ ಮೋಹನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆರೋಪಿಗಾಗಿ ವಿವಿಧೆಡೆ ವಿಚಾರಣೆ ನಡೆಸಿದ್ದಾರೆ.

Excise department file case against financier Kapali Mohan

ಯಶವಂತಪುರದಲ್ಲಿರುವ ಆರ್ . ಜಿ ಹೋಟೆಲ್ ನ ಆರ್ ಜಿ ರಿಕ್ರಿಯೇಷನ್ ಕ್ಲಬ್ ಮೇಲೆ ಭಾನುವಾರದಂದು ಸಿಸಿಬಿ ಹಿರಿಯ ಅಧಿಕಾರಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿತ್ತು. ನಂತರ ಕಪಾಲಿ ಮೋಹನ್ ಮನೆ ಹಾಗೂ ಬಾಲಾಜಿ ಫೈನಾನ್ಸ್ ಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿದ್ದರು. ಆದರೆ, ದಾಳಿ ಸುಳಿವು ಪಡೆದಿದ್ದ ಮೋಹನ್, ಪರಾರಿಯಾಗಿದ್ದ.

ಇದೇ ವೇಳೆ ಮೋಹನ್ ಮನೆಯಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಮದ್ಯ ದಾಸ್ತಾನು ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಅಬಕಾರಿ ಇಲಾಖೆಗೆ ಸಿಸಿಬಿ ಪೊಲೀಸರು ತಿಳಿಸಿದ್ದರು.

ಈ ಬಗ್ಗೆ ಪರಿಶೀಲಿಸಿದ ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಅವರಿಗೆ ಮೋಹನ್ ಮನೆಯಲ್ಲಿ 1.5 ಲಕ್ಷ ಲೀಟರ್ ಗೂ ಅಧಿಕ ಮದ್ಯವನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಈ ಪೈಕಿ 44 ಲೀಟರ್ ವಿದೇಶಿ ಬ್ರ್ಯಾಂಡ್ ಮದ್ಯ ಸೇರಿದೆ. ಕಾನೂನಿ ಪ್ರಕಾರ, 9.1 ಲೀಟರ್ ಇಟ್ಟುಕೊಳ್ಳಲು ಮಾತ್ರ ಅನುಮತಿ ಇದೆ. ಹೀಗಾಗಿ, ಅಕ್ರಮ ದಾಸ್ತಾನು ಹೊಂದಿರುವ ಮೋಹನ್ ವಿರುದ್ಧ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಅವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.

English summary
Excise department file case against financier Kapali Mohan for illegal storage of liquor. Kapali Mohan has been absconding ever since and a massive manhunt has been launched to nab him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X