ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ಕ್ಷೇತ್ರ ಹೊರತುಪಡಿಸಿ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ

By Nayana
|
Google Oneindia Kannada News

ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಯದು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಹೊಸದಾಗಿ ನೇಮಕವಾಗಿರುವ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮತದಾರರನ್ನು ಸೆಳೆಯಲು ಸಾಕಷ್ಟು ಕಾರ್ಯಕ್ರಮ ಕೈಗೊಂಡಿದ್ದೇವೆ, ಅಂತಿಮವಾಗಿ ಒಟ್ಟು 7,56,000 ಮತದಾರರನ್ನು ಮತಪಟ್ಟಿಗೆ ಸೇರಿಸಲಾಗಿದೆ. ನಗರದಲ್ಲಿ ಒಟ್ಟು 91 ಲಕ್ಷ ಮತದಾರರಿದ್ದಾರೆ. 26 ಸಾವಿರ ಅಂಗವಿಕಲ ಮತದಾರರ ಮತದಾನಕ್ಕೆ ವಿಶೇಷ ಕ್ರಮ ಕೈಗೊಂಡಿದ್ದೇವೆ.

VVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿVVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿ

ಈತನಕ ಮಾದರಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅಕ್ರಮ ಹಣ 6 ಕೋಟಿ ರೂ, ಸರಕು ಹಂಚಿಕೆ 32 ಪ್ರಕರಣ ದಾಖಲಿಸಿ 17 ಕೋಟಿ ರೂ. ಮೌಲ್ಯದ ವಸ್ತು ವಶ ಪಡಿಸಿಕೊಳ್ಳಲಾಗಿದೆ, ಒಟ್ಟಾರೆ 29 ಕೋಟಿ ರೂ. ಸೀಜ್ ಮಾಡಲಾಗಿದೆ.. ಎಂದು ತಿಳಿಸಿದ್ದಾರೆ.

Except Jayanagar, 431 candidates in fray for 27 constituencies

ಜಯನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ನಡೆಯಲಿದೆ ಜಯನಗರ ಕ್ಷೇತ್ರ ಹೊರತುಪಡಿಸಿ ಒಟ್ಟು 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ನಗರದಲ್ಲಿ 1,200 ಕ್ರಿಟಿಕಲ್, 324 ಮತಕೇಂದ್ರಗಳಿವೆ. ಭದ್ರತೆಗಾಗಿ 7,776 ಸಿಬ್ಬಂದಿ, 550 ಮೊಬೈಲ್ ಸ್ಕ್ವಾಡ್, 4,501 ಕೇಂದ್ರೀಯ ಅರೆಸೇನಾಪಡೆಗಳನ್ನ ಬಳಸಲಾಗುತ್ತದೆ.

ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಮಾತನಾಡಿ, ನಗರದಲ್ಲಿ ಈತನಕ 142 ಕ್ರಿಮಿನಲ್ ಕೇಸ್ ಹಾಕಲಾಗಿದೆ, ಜನವರಿಯಿಂದ 6,000 ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ, ನಗರದಲ್ಲಿ ಒಟ್ಟು 8,096 ಪರವಾನಗಳಿವೆ,ಆ ಪೈಕಿ 7,500 ಶಸ್ತ್ರಾಸ್ತ್ರ ಪೊಲೀಸ್ ಠಾಣೆಗಳಲ್ಲಿ ಡಿಪಾಸಿಟ್ ಆಗಿದೆ. ಕೇಂದ್ರ ಸೇನಾಪಡೆಯ 44 ಕಂಪನಿಗಳ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

English summary
Bangalore urban district elecrion officer Maheshwar Rao said except Jayanagar constituency, there were 431 candidates in the fray for 27 constituencies in Bengaluru on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X