ಬೆಳ್ಳಂದೂರು ಕೆರೆಯನ್ನು ಬಹುಪಾಲು ಕಸಮುಕ್ತವಾಗಿಸಿದ ಮಾಜಿ ಸೈನಿಕರು

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಬೆಂಕಿ, ನೊರೆ, ತ್ಯಾಜ್ಯ ಪ್ರಕರಣಗಳ ಮೂಲಕ ಬೆಳ್ಳಂದೂರು ಕೆರೆ ಸುದ್ದಿಯಲ್ಲಿತ್ತು. ಬೆಳ್ಳಂದೂರು ಕೆರೆಯನ್ನು ಮೊದಲಿನಂತೆ ಮಾಡಲು ಮಾಜಿ ಸೈನಿಕರು ಪಣತೊಟ್ಟಿದ್ದರು.

ಮಾರ್ಷಲ್‌ಗಳ ನೇಮಕಗೊಂಡ ಕೇವಲ ಒಂದೂವರೆ ತಿಂಗಳಿನಲ್ಲಿ ಕಸ ಸುರಿಯುವ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಿದೆ. 800 ಎಕರೆಯಲ್ಲಿ ಹರಡಿರುವ ಈ ಕೆರೆಯಲ್ಲಿ ರಾಜಾರೋಷವಾಗಿ ಟ್ರ್ಯಾಕ್ಟರ್, ಲಾರಿಗಳಲ್ಲಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿತ್ತು. ಈಗ ಕಸ ಸುರಿಯಲು ಬಂದವರು ಸೇನಾ ಸಮವಸ್ತ್ರದಲ್ಲಿ ಇರುವ ಮಾರ್ಷಲ್ ಗಳನ್ನು ನೋಡಿ ಹಿಂದಿರುಗುತ್ತಿದ್ದಾರೆ.

ಟ್ರಾಶ್ ಬ್ಯಾರಿಯರ್ ಯಂತ್ರದಿಂದ ಬೆಳ್ಳಂದೂರು ಕೆರೆ ಸ್ವಚ್ಛ!

ರಾಜಕಾಲುವೆ, ಮಳೆನೀರು ಕಾಲುವೆಗಾಗಿ ಬಿಬಿಎಂಪಿ ಪ್ರಹರಿ ವಾಹನಗಳನ್ನು ನೀಡಿದೆ. ಆದರೆ, ಬೆಳ್ಳಂದೂರು ಕೆರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವುದರೊಂದಿಗೆ ಎನ್‌ಜಿಟಿ ಕೂಡ ಛೀಮಾರಿ ಹಾಕಿರುವುದರಿಂದ ಎಚ್ಚೆತ್ತಿರುವ ಬಿಬಿಎಂಪಿ, ಬೆಳ್ಳಂದೂರು ಕೆರೆ ಸಂರಕ್ಷಣೆಗಾಗಿಯೇ ಮಾರ್ಷಲ್ ಗಳನ್ನು ನೇಮಕ ಮಾಡಿತ್ತು.

Ex Army men were cleaned Bellandur Lake

ದಂಡ ವಿಧಿಸುವ ಅಧಿಕಾರಕ್ಕೆ ಚಿಂತನೆ: ಕೆರೆಗಳ ವಾರ್ಡ್ ಗಳ ಮೂಲಕವೇ ದಂಡ ವಿಧಿಸುವ ಕ್ರಮವನ್ನು ಜಾರಿಗೊಳಿಸಲು ಬಿಡಿಎ ಚಿಂತನೆ ನಡೆಸಿದೆ, ಮಾರ್ಷಲ್ ಗಳು ಕಸ ಸುರಿಯುವುದನ್ನು ತಡೆಯುತ್ತಿದ್ದಾರೆ. ಆದರೆ ದಂಡ ವಿಧಿಸುವ ಅಧಿಕಾರವನ್ನೂ ನೀಡಬೇಕೆಂದು ಸ್ಥಳೀಯರು ಬಿಡಿಎಯನ್ನು ಒತ್ತಾಯಿಸಿದ್ದಾರೆ. ಅದಕ್ಕೆ ಸ್ಪಂಧಿಸಿರುವ ಬಿಡಿಎ ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bellandur lake was infamous for some wrong doing only. Thia time ex army men gave good news through cleanliness drive in Bellandur lake.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ