ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವುದು ಇದೊಂದೇ ಲೆಕ್ಕಾಚಾರ!

By ಬೆಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ಸದ್ಯ ಎಲ್ಲರ ಬಾಯಲ್ಲೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೇನೇ ಮಾತು | Oneindia Kannada

ಬೆಂಗಳೂರು ಮೇ 22: ಬಿಜೆಪಿಯನ್ನು ಹೊರಗಿಡಲು ಜೆಡಿಎಸ್-ಕಾಂಗ್ರೆಸ್ ಕೈ ಜೋಡಿಸಿದ್ದಾಗಿದೆ. ಆದರೆ ಈಗ ರಾಜಕೀಯ ಪಂಡಿತರ ಲೆಕ್ಕಾಚಾರ ಈ ಮೈತ್ರಿ ಅದೆಷ್ಟು ದಿನ ಬಾಳಲಿದೆ ಎಂಬುದರ ಬಗ್ಗೆ. ಈ ಲೆಕ್ಕಾಚಾರಕ್ಕೆ ಹಲವು ಕಾರಣಗಳಿವೆ.

ಬಿಜೆಪಿ-ಜೆಡಿಎಸ್ ಗಳೇ ನೈಜ ಮೈತ್ರಿ ಪಕ್ಷಗಳು. ಏಕೆಂದರೆ ಬಿಜೆಪಿ ಪ್ರಬಲವಾಗಿರುವಲ್ಲಿ ಜೆಡಿಎಸ್ ಗೆ ಅಸ್ತಿತ್ವವಿಲ್ಲ. ಒಕ್ಕಲಿಗರ ಕೋಟೆಯಲ್ಲಿ ಬಿಜೆಪಿ ಇನ್ನೂ ಬೇರು ಬಿಟ್ಟಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಲ್ಲೆಡೆ ಹಾವು-ಮುಂಗುಸಿಗಳಂತೆ ಕಚ್ಚಾಡುತ್ತಿವೆ.

ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡ ಜೆಡಿಎಸ್ಸ್ಪೀಕರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡ ಜೆಡಿಎಸ್

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ನ ಗರ್ಭಗುಡಿ ಸಂಸ್ಕೃತಿ ಇನ್ನಷ್ಟು ಕರ್ಮಠವಾಗಿದೆ. ಉದಾಹರಣೆಗೆ ಕುಮಾರಣ್ಣ ಸೋಮವಾರವೇ ಅಧಿಕಾರ ಸ್ವೀಕರಿಸಬೇಕು ಎನ್ನುವ ಹವಣಿಕೆಯಲ್ಲಿದ್ದರು. ಆದರೆ ಸೋಮವಾರ ಕಾಂಗ್ರೆಸ್ ಗೆ ಇಷ್ಟವಾಗಲಿಲ್ಲ. ಪರಿಣಾಮ ಪ್ರಮಾಣ ವಚನ ದಿನ ಮುಂದಕ್ಕೆ ಹೋಗಿದೆ.

Everybody is talking about Congress JDS alliance

ಮೂಲಗಳ ಪ್ರಕಾರ ಕಾಂಗ್ರೆಸ್ ಎರಡು ಡಿಸಿಎಂ ಹುದ್ದೆಗಳನ್ನು ಕೇಳುತ್ತಿದೆ. ಒಂದೊಮ್ಮೆ ಇದಕ್ಕೆ ಒಪ್ಪಿದರೆ ಕುಮಾರಣ್ಣ ಡಮ್ಮಿ ಸಿಎಂ ಆಗೋದು ಖಚಿತ. ಈ ಎಲ್ಲವುಗಳ ಮಧ್ಯೆ ಎರಡೂವರೆ ವರ್ಷಗಳ ಬಳಿಕ ಕಾಂಗ್ರೆಸ್ ಗೆ ಜೆಡಿಎಸ್ ಅಧಿಕಾರ ಹಸ್ತಾಂತರಿಸಬೇಕು ಎಂಬ ಷರತ್ತನ್ನು ಕೂಡಾ ಕಾಂಗ್ರೆಸ್ ಮುಂದಿಡಲಿದೆ ಎಂಬ ಸುದ್ದಿ 10, ಜನಪಥ್ ನಿಂದ ಸೋರಿಕೆಯಾಗಿದೆ.

ಇನ್ನು ಕುಮಾರಣ್ಣ-ಡಿಕೆಶಿ ಇಬ್ಬರೂ ಒಕ್ಕಲಿಗ ಸೇನಾಪತಿಗಳು. ಇವರಿಬ್ಬರ ನಡುವಣ ರಾಜಕೀಯ ಶತ್ರುತ್ವ ಎಲ್ಲರಿಗೂ ತಿಳಿದಿರುವಂತದ್ದೆ. ಇಂತಹ ಪರಿಸ್ಥಿತಿಯಲ್ಲಿ ಮೈತ್ರಿಕೂಟ ಸರ್ಕಾರ ಎಷ್ಟು ದಿನ ಎನ್ನುವ ಚರ್ಚೆ ಈಗಾಗಲೆ ಮುಂದಲೆಗೆ ಬಂದಿದೆ.

English summary
Karnataka Election Results 2018: Everybody is talking about Congress JDS alliance. Such discussions are being heard everywhere. Among all this Tomorrow coalition government will come into existence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X