ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಚಹಾ ವೃತ್ತಿಗೆ ಅವಮಾನ ಮಾಡಿದವರಿಗೆ ಧಿಕ್ಕಾರ: ಅಭಿಪ್ರಾಯ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್ 22 : ಚಹಾ ಮಾರುವವನಾಗಲಿ ಅಥವಾ ದೇಶದ ಜನರ ಸೇವೆ ಮಾಡುವ ಪ್ರಧಾನಿಯೇ ಆಗಲಿ ಅವರವರ ವೃತ್ತಿಗೆ ಅವರವರ ಸೇವೆಗೆ ಅದರದೇ ಆದ ಘನತೆ ಇರುತ್ತದೆ ಅದನ್ನು ಯಾರೂ ಕೂಡ ಪ್ರಶ್ನಿಸುವಂತಿಲ್ಲ ಎಂದು ಬೆಂಗಳೂರಿಗರು ಅಭಿಪ್ರಾಯ ಪಟ್ಟಿದ್ದಾರೆ.

  ಮೋದಿ, ಚಾಯ್ ವಾಲಾರನ್ನು ಅಣಕಿಸಿದ ಕಾಂಗ್ರೆಸ್ ಗೆ ಜನರಿಂದ ಛೀಮಾರಿ

  ಪ್ರಧಾನಿ ಹುದ್ದೆಯಲ್ಲಿರುವ ಮೋದಿಯವರು ತಾನು ಚಹಾ ವ್ಯಾಪಾರಿಯಾಗಿದ್ದೆ ಎಂದು ಹೆಮ್ಮೆ ಇಂದ ಹೇಳಿಕೊಳ್ಳುತ್ತಾರೆ. ಆದರೆ ಕೆಲವು ಮಂದಿ ಅವರ ಹಳೆಯ ವೃತ್ತಿಯಿಂದಲೇ ಇದುವರೆಗೂ ಗುರುತಿಸುತ್ತಿದ್ದಾರೆ ಅದು ತಪ್ಪು ಎಂಬ ಅಭಿಪ್ರಾಯಗಳು ಕೇಳಿಬಂದಿದೆ.ಪ್ರಧಾನಿ ನರೇಂದ್ರ ಮೋದಿ ಹಳೆಯ ವೃತ್ತಿ ಕುರಿತಂತೆ ಯುವ ಕಾಂಗ್ರೆಸ್ ಮಾಡಿರುವ ಅವಹೇಳನಕಾರಿ ಟ್ವೀಟ್ ಗೆ ಬೆಂಗಳೂರಿನ ಚಹಾ ವ್ಯಾಪಾರಿಗಳು "ಒನ್ ಇಂಡಿಯಾ" ಬಳಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ವೃತ್ತಿಗೆ ಸಂದ ಗೌರವ

  ವೃತ್ತಿಗೆ ಸಂದ ಗೌರವ

  ವೃತ್ತಿಗೆ ಅವಮಾನ ಮಾಡಿದರೆ ದೇಶಕ್ಕೆ ಅವಮಾನ ಮಾಡಿದಂತೆ: ಒಬ್ಬ ಚಹಾ ಮಾರುವವನೂ ಕೂಡ ದೇಶವನ್ನು ಆಳಬಹುದು ಎನ್ನುವುದಾದರೆ ಅದು ತಾನು ಮಾಡುತ್ತಿರುವ ವೃತ್ತಿಗೆ ಸಂದ ಗೌರವ. ಪ್ರಧಾನಿ ಮೋದಿ ಮಾಡುತ್ತಿರುವ ಪ್ರತಿಯೊಂದು ಕೆಲಸವೂ ದೇಶಕ್ಕೆ ಒಳ್ಳೆಯದಾಗುವ ರೀತಿಯಲ್ಲಿಯೇ ಮಾಡುತ್ತಿದ್ದಾರೆ. ವೃತ್ತಿಗೆ ಅವಮಾನ ಮಾಡಿದರೆ ದೇಶಕ್ಕೆ ಅವಮಾನ ಮಾಡಿದಂತಾಗುತ್ತದೆ.- ನಾಗರಾಜ್- ಚಹಾ ಅಂಗಡಿ ಮಾಲೀಕ.

  ಮೋದಿಯೇ ಆದರ್ಶ

  ಮೋದಿಯೇ ಆದರ್ಶ

  ನಮಗೂ ಮುಂದೆ ಒಳ್ಳೆಯ ಕಾಲವಿದೆ ಎಂಬ ಭರವಸೆ: ಮೊದ ಮೊದಲು ಚಹಾದ ಅಂಗಡಿಯಲ್ಲಿ ಲಾಭವಾಗುತ್ತಿಲ್ಲ, ಎಂದಿಗೂ ಉತ್ತಮ ಬದುಕನ್ನು ನಿರ್ಮಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ ಎಂದು ಬೇಸರ ಆಗುತ್ತಿತ್ತು. ಚಹಾ ಮಾರುವವರು ಒಬ್ಬ ಪ್ರಧಾನಿಯಾದರು ಎಂದು ಕೇಳಿದಾಗ ಆಶ್ಚರ್ಯ ವಾಗಿತ್ತು. ಅವರೇ ನಮಗೆ ಆದರ್ಶ ಮುಂದೊಂದು ದಿನ ಒಳ್ಳೆಯ ಕಾಲ ಬರಬಹುದು ಎಂಬ ನಂಬಿಕೆ ನಮಗೂ ಬಂದಿದೆ. ಅಂತಹವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು- ವೆಂಕಟೇಶ್ ಜಯನಗರ.

  ವ್ಯಕ್ತಿತ್ವದಿಂದ ಅಳೆಯಿರಿ

  ವ್ಯಕ್ತಿತ್ವದಿಂದ ಅಳೆಯಿರಿ

  ವೃತ್ತಿಯಿಂದ ಮನುಷ್ಯನನ್ನು ಅಳೆಯಬೇಡಿ: ಯೂಥ್ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಇಂತಹ ಮಾತುಗಳಿಗಾಗಿ ಬಳಸಿಕೊಂಡಿರುವುದು ತಪ್ಪು, ಯಾವುದೇ ವ್ಯಕ್ತಿಯನ್ನು ಅವರ ವ್ಯಕ್ತಿತ್ವದಿಂದಲೇ ಅಳೆಯಬೇಕು ವೃತ್ತಿಯಿಂದಲ್ಲ. ನಮ್ಮ ವೃತ್ತಿಯ ಬಗ್ಗೆ ನಮಗೆ ಗೌರವವಿದೆ. ನಾವು ಬಡವರೇ ಇರಬಹುದು ಆದರೆ ನಿಯತ್ತಿನಿಂದ ಕೆಲಸ ಮಾಡುತ್ತೇವೆ ಎಂದಿಗೂ ಯಾರಿಗೂ ಮೋಸ ಮಾಡದೆ ಬದುಕುತ್ತೇವೆ ಅಂತಹ ವೃತ್ತಿ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ- ಷಣ್ಮುಗಂ, ಚಹಾ ವ್ಯಾಪಾರಿ

  ಮೋದಿ ಕಾರ್ಯಗಳ ಬಗ್ಗೆ ಮಾತನಾಡಲಿ ಹಳೆಯ ವೃತ್ತಿ ಬಗ್ಗೆ ಅಲ್ಲ

  ಮೋದಿ ಕಾರ್ಯಗಳ ಬಗ್ಗೆ ಮಾತನಾಡಲಿ ಹಳೆಯ ವೃತ್ತಿ ಬಗ್ಗೆ ಅಲ್ಲ

  ಅಭಿಪ್ರಾಯ ವ್ಯಕ್ತಪಡಿಸುವುದು ಅವರ ಸ್ವಾತಂತ್ರ್ಯ ದುರುಪಯೋಗ ಬೇಡ: ಮಾತನಾಡುವುದಾದರೆ ಮೋದಿಯವರ ಕಾರ್ಯದ ಬಗ್ಗೆ ಮಾತನಾಡಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ. ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ. ಅಂದ ಮಾತ್ರಕ್ಕೆ ಯಾರ ಬಗ್ಗೆ ಏನೇನೋ ಹೇಳಿಕೆ ನೀಡುವುದಲ್ಲ. ಮೋದಿಯವರ ಹಳೆಯ ವೃತ್ತಿ ಏನೇ ಆಗಿರಲಿ ಆದರೆ ಇಂದು ಅವರು ದೇಶದ ಪ್ರಧಾನಿ ಎನ್ನುವುದನ್ನು ಮರೆಯಬಾರದು- ಪ್ರಶಾಂತ್, ಚಹಾ ಅಂಗಡಿ ಮಾಲೀಕ.

  ದೇಶಕ್ಕೆ ಒಳ್ಳೆಯದಾಗುವುದಾದರೆ ಕಷ್ಟ ಪಡುವುದಕ್ಕೂ ಸಿದ್ಧ

  ದೇಶಕ್ಕೆ ಒಳ್ಳೆಯದಾಗುವುದಾದರೆ ಕಷ್ಟ ಪಡುವುದಕ್ಕೂ ಸಿದ್ಧ

  ಚಹಾ ವೃತ್ತಿಯ ಬಗ್ಗೆ ಗೌರವವಿದೆ: ಮೋದಿಯವರು ದೇಶಕ್ಕೆ ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ನೋಟು ಅಪಮೌಲ್ಯದಿಂದ ಮೊದಲು ಕಷ್ಟವಾದರೂ ನಂತರ ದೇಶಕ್ಕೆ ಒಳ್ಳೆಯದಾಯಿತ್ತಲ್ಲ ಎಂದು ಸಂತೋಷ ಪಟ್ಟಿದ್ದೆವು. ಅವರು ಚಹಾ ಮಾರುವವರಾಗಿ ಇಷ್ಟು ಒಳ್ಳೆಯ ಹಂತಕ್ಕೆ ಬಂದರಲ್ಲ ಎಂದು ಸಂತೋಷವಾಗುತ್ತದೆ. ಚಹಾ ವೃತ್ತಿ ಬಗ್ಗೆ ನಮಗೆ ಗೌರವವಿದೆ. ಈ ವೃತ್ತಿಯ ಬಗ್ಗೆ ಗೊತ್ತಿಲ್ಲದವರು ಇಲ್ಲ ಸಲ್ಲದ ಮಾತನಾಡುತ್ತಾರೆ. ಅದರಿಂದ ನಮಗೇನು ನಷ್ಟವಿಲ್ಲ.- ಶ್ರೀಧರ, ಚಹಾ ವ್ಯಾಪಾರಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Most of the Bengalureans including Chaiwala opined that every profession has its own dignity. It will be celebrity or it will be Prime Minister.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more