ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಮೆಟ್ರೋ' ಸಿಬ್ಬಂದಿ ವಿರುದ್ಧ ESMA ಜಾರಿಗೆ ಸರ್ಕಾರ ನಿರ್ಧಾರ?

ಪ್ರತಿಭಟನೆ ನಿರತ ನಮ್ಮ ಮೆಟ್ರೋ ಸಿಬ್ಬಂದಿ ಮೇಲೆ ಎಸ್ಮಾ ಜಾರಿಗೆ ರಾಜ್ಯ ಸರ್ಕಾರದ ಚಿಂತನೆ. ನಮ್ಮ ಮೆಟ್ರೋ ಸಿಬ್ಬಂದಿ ಹಾಗೂ ಕೆಎಸ್ ಐಎಸ್ಎಫ್ ಸಿಬ್ಬಂದಿ ನಡುವೆ ಜಗಳ. ಮೆಟ್ರೋ ಸಿಬ್ಬಂದಿ ಬಂಧನ ಮಾಡಿರುವ ಕೆಎಸ್ ಐಎಸ್ಎಫ್.

|
Google Oneindia Kannada News

ಬೆಂಗಳೂರು, ಜುಲೈ 7: ಹಲಸೂರು ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮೆಟ್ರೋ ಸಿಬ್ಬಂದಿಯ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ಸಿಬ್ಬಂದಿ ವಿರುದ್ಧ ರಾಜ್ಯ ಸರ್ಕಾರ ಗರಂ ಆಗಿದೆ.

'ನಮ್ಮ ಮೆಟ್ರೋ' ಬಂದ್: ಲಕ್ಷಾಂತರ ಪ್ರಯಾಣಿಕರ ಗೋಳು ಕೇಳೋರ್ಯಾರು?!'ನಮ್ಮ ಮೆಟ್ರೋ' ಬಂದ್: ಲಕ್ಷಾಂತರ ಪ್ರಯಾಣಿಕರ ಗೋಳು ಕೇಳೋರ್ಯಾರು?!

ಸಿಬ್ಬಂದಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 7) ಮೆಟ್ರೋ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಸೇವಾ ಪೂರೈಕೆ ನಿರ್ವಹಣಾ ಕಾಯ್ದೆ (ಏಸ್ಮಾ) ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ESMA on Namma Metro Staff protesting against the arrest of Metro staff by Halasuru police stage

ರೈಲು ಪ್ರಯಾಣಕ್ಕಾಗಿ ಸೆಂಟ್ರಲ್ ಕಾಲೇಜು ನಿಲ್ದಾಣವಾದ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ಕೆಎಸ್ ಐಎಸ್ಎಫ್ ಆಗಮಿಸಿದ್ದಾಗ, ಮೆಟ್ರೋ ಸಿಬ್ಬಂದಿ ಎಂದಿನಂತೆ ತಪಾಸಣೆಗೆ ಮುಂದಾಗಿದ್ದರು.

'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ಮೆಟ್ರೋ ರೈಲು ಸೇವೆ ಸ್ಥಗಿತ'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರ: ಮೆಟ್ರೋ ರೈಲು ಸೇವೆ ಸ್ಥಗಿತ

ಆದರೆ, ತಪಾಸಣೆಗೆ ಕೆಎಸ್ ಐಎಸ್ಎಫ್ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ, ಕೆಎಸ್ ಐಎಸ್ಎಫ್ ಹಾಗೂ ಮೆಟ್ರೋ ಸಿಬ್ಬಂದಿಯ ನಡುವೆ ತಳ್ಳಾಟವೂ ನಡೆದ್ದು, ದೊಡ್ಡ ಗಲಾಟೆಯೇ ಆಯಿತು. ತಮ್ಮ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿರುವ ಕೆಎಸ್ ಐಎಸ್ಎಫ್ ಸಿಬ್ಬಂದಿ, ನಮ್ಮೆ ಮೆಟ್ರೋದ ಕೆಲ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇದು ಮೆಟ್ರೋ ಸಿಬ್ಬಂದಿಯ ವಿವಾದಕ್ಕೆ ಕಾರಣವಾಗಿದೆ.

ಈ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಂದಿನಂತೆ ಜುಲೈ 7ರಂದು ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಮೆಟ್ರೋ ಸೇವೆ ನಿಂತು ಹೋಗಿದೆ. ಈ ಬಗ್ಗೆ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕಾಗಮಿಸಿ ಸಂಧಾನ ಮಾಡಲೆತ್ನಿಸಿದರೂ, ಅದು ಫಲ ನೀಡಿಲ್ಲ.

English summary
As Namma Metro staff began strike to protest against arrest of some metro staff by KSISF, state government mulling to exert ESMA on Namma Metro staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X