ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬಿಎಸ್‌ವೈ ಪಿಎ ವಿರುದ್ಧದ ಚಾರ್ಜ್ ಶೀಟ್‌ನಲ್ಲಿ ಏನಿದೆ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್ 23 : ಬಿಜೆಪಿ ಕಾರ್ಯಕರ್ತ ವಿನಯ್ ಮೇಲಿನ ಹಲ್ಲೆ, ಅಪಹರಣದ ಯತ್ನ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಎನ್.ಆರ್.ಸಂತೋಷ್ ಪ್ರಕರಣದ ಮೊದಲನೇ ಆರೋಪಿಯಾಗಿದ್ದಾರೆ.

  ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾಧಿಕಾರಿ, ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎ.ಆರ್.ಬಡಿಗೇರ್ 760 ಪುಟಗಳ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ. 2ನೇ ಚಾರ್ಜ್ ಶೀಟ್‌ ಅನ್ನು ಶೀಘ್ರದಲ್ಲಿಯೇ ಸಲ್ಲಿಕೆ ಮಾಡಲಿದ್ದಾರೆ.

  ಈಶ್ವರಪ್ಪ ಅವರ ಪಿಎ ವಿನಯ್ ರನ್ನು ಅಪಹರಿಸಲು ಯತ್ನ

  ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎನ್.ಆರ್.ಸಂತೋಷ್ ಪ್ರಕರಣದ ಪ್ರಮುಖ ಆರೋಪಿ. ಈ ಪ್ರಕರಣದಲ್ಲಿ ಸಂತೋಷ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ, ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ.

  ಜಾಮೀನು ರದ್ಧತಿ ಅರ್ಜಿ ವಿಚಾರಣೆ ಮುಂದೂಡಿಕೆ, ಸಂತೋಷ್‌ಗೆ ರಿಲೀಫ್

  ಈ ಪ್ರಕರಣದಲ್ಲಿ 12 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎ.ಆರ್.ಬಡಿಗೇರ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ...

  ಎನ್.ಆರ್.ಸಂತೋಷ್ ಮೊದಲನೇ ಆರೋಪಿ

  ಎನ್.ಆರ್.ಸಂತೋಷ್ ಮೊದಲನೇ ಆರೋಪಿ

  ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಮೊದಲ ಆರೋಪಿ. ಬಿಜೆಪಿ ಯುವಮೋರ್ಚಾ ಬೆಂಗಳೂರು ಘಟಕದ ಕಾರ್ಯದರ್ಶಿ ರಾಜೇಂದ್ರ ಅರಸ್, ರೌಡಿ ಶೀಟರ್‌ಗಳಾದ ಪ್ರಶಾಂತ್, ಉಮಾಕಾಂತ್, ಚೆಲುವಾ, ಅಭಿಷೇಕ್, ಅರವಿಂದ್, ಅಯ್ಯಪ್ಪ, ಸೆಲ್ವಿ, ಇಂದ್ರೇಶ್, ಶಿವಪ್ಪ, ಅರವಿಂದ್ ಇತರ ಆರೋಪಿಗಳು.

  ಮೇ 11ರಂದು ನಡೆದಿದ್ದ ಘಟನೆ

  ಮೇ 11ರಂದು ನಡೆದಿದ್ದ ಘಟನೆ

  ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಕುಮಾರ್ ಅವರನ್ನು ಅಪಹರಿಸಲು ಮೇ 11ರಂದು ಪ್ರಯತ್ನ ನಡೆಸಲಾಗಿತ್ತು. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಬಳಿ ಗುಂಪೊಂದು ಅವರನ್ನು ಅಡ್ಡಗಟ್ಟಿ, ಅಪಹರಿಸಲು ಯತ್ನಿಸಿ ಹಲ್ಲೆ ಮಾಡಿತ್ತು.

  ಯಡಿಯೂರಪ್ಪ ಪಿಎ ಮೇಲೆ ಆರೋಪ

  ಯಡಿಯೂರಪ್ಪ ಪಿಎ ಮೇಲೆ ಆರೋಪ

  ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಎ.ಆರ್.ಬಡಿಗೇರ್ ಅವರ ನೇತೃತ್ವದಲ್ಲಿ ತನಿಖೆ ನಡೆಯಿತು. ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಎನ್.ಆರ್.ಸಂತೋಷ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

  ಮತ್ತೊಂದು ಚಾರ್ಜ್ ಶೀಟ್

  ಮತ್ತೊಂದು ಚಾರ್ಜ್ ಶೀಟ್

  ತನಿಖಾಧಿಕಾರಿ ಎ.ಆರ್.ಬಡಿಗೇರ್ ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯಕ್ಕೆ 760 ಪುಟಗಳ ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಶೀಘ್ರದಲ್ಲೇ ಎರಡನೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.

  ಮೊಬೈಲ್ ವಶಕ್ಕೆ ಪಡೆಯಬೇಕು

  ಮೊಬೈಲ್ ವಶಕ್ಕೆ ಪಡೆಯಬೇಕು

  ಸದ್ಯ, ಪೊಲೀಸರು ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಎನ್.ಆರ್.ಸಂತೋಷ್ ಅವರ ಮೊಬೈಲ್ ಜಪ್ತಿ ಮಾಡಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಮೊಬೈಲ್ ಜಪ್ತಿ ಮಾಡಿದ ಬಳಿಕ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

  ಜಾಮೀನು ರದ್ದುಪಡಿಸಲು ಮನವಿ

  ಜಾಮೀನು ರದ್ದುಪಡಿಸಲು ಮನವಿ

  ಎನ್.ಆರ್.ಸಂತೋಷ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಮಾಡಲು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪೊಲೀಸರು ಸಂತೋಷ್ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಆದ್ದರಿಂದ, ಅವರ ಜಾಮೀನು ರದ್ದುಪಡಿಸಬೇಕು ಎಂದು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka BJP president B.S.Yeddyurappa personal assistant N.R.Santhosh and among 12 people charged by the police in the case of attempting to kidnap Vinay Kumar, a close aide of the KS Eshwarappa, Leader of the Opposition in the Legislative Council.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more