ಬೆಂಗಳೂರು ಕೆರೆ ಸಂರಕ್ಷಣೆಗೆ ಅಳಿಲು ಸೇವೆ ನೀಡಿ

Written By:
Subscribe to Oneindia Kannada

ಬೆಂಗಳೂರು, ಜೂನ್, 09: ಬೆಂಗಳೂರಿನ ಕೆರೆಗಳು ಮಾಲಿನ್ಯಗೊಂಡು ಪ್ರಪಂಚ ಮಟ್ಟದಲ್ಲಿ ಬೆಂಗಳೂರು ಕಲುಷಿತ ನಗರ ಎಂಬ ಬೇಡದ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ.

ನಿಮಗೆ ಬೆಂಗಳೂರು ಕೆರೆ ಸಂರಕ್ಷಣೆ ಮಾಡಬೇಕು ಎಂಬ ಬಯಕೆ ಇದ್ದರೆ ಅವಕಾಶವೊಂದು ಒದಗಿ ಬಂದಿದೆ. ನೀವು ನಗರದ ಉಳಿವಿಗೆ ಒಂದು ಅಳಿಲು ಸೇವೆ ಸಲ್ಲಿಸಬಹುದು.[ಬೆಳ್ಳಂದೂರು ಕೆರೆ ಕತೆ-ವ್ಯಥೆ]

lake

ಕರ್ನಾಟಕ ಸರ್ಕಾರ ಹೊಸದಾಗಿ ಶುರು ಮಾಡಿದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್ ಸಿಡಿಎ) ಕರೆಯ ವಾರ್ಡ್ ನ್ ಆಗಲು ಅರ್ಜಿ ಕರೆದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಕೆ ಮಾಡಬೇಕು.[ಕಲುಷಿತ ನೀರಿಗೆ ಜಲಚಿಕಿತ್ಸೆ, ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ]

ಜವಾಬ್ದಾರಿಗಳೇನು?
* ಕೆರೆ ದಂಡೆಯಲ್ಲಿ ನಿಷೇಧಿತ ಕೆಲಸ ಕಾರ್ಯಗಳು ನಡೆಯದಂತೆ ಕಣ್ಣಿಡುವುದು
* ಒತ್ತುವರಿ ತೆರವಿಗೆ ಸೂಚನೆ ನೀಡುವುದು, ಮತ್ತು ಒತ್ತುವರಿ ಆಗದಂತೆ ತಡೆಯುವುದು.
* ಕೆರೆ ಅಭಿವೃದ್ಧಿಗೆ ಸಂಬಂಧಿಸಿ ಸ್ಥಳೀಯರಲ್ಲಿ ಸಮಾಲೋಚನೆ ನಡೆಸುವುದು.

ಹೋರಾಟಗಳು ತಳಮಟ್ಟದಿಂದ ಆರಂಭವಾಗಬೇಕು. ಸಮುದಾಯಗಳು ಇಂಥ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ನೀರಾವರಿ ಹೋರಾಟ ಸಮಿತಿಯ ಕ್ಷಿತಿಜ್ ಅರಸ್ ಹೇಳುತ್ತಾರೆ.[ಬೆಂಗಳೂರು ಕೆರೆ ತೊಳೆಯುವುದಕ್ಕೆ ಕೇಂದ್ರದಿಂದ 800 ಕೋಟಿ ರು.]

ಹಿಂದಿನ ಸಂಘಟನೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಆಡಳಿತದಲ್ಲಿ ಸ್ಥಳೀಯರೇ ಭಾಗವಹಿಸುತ್ತಿದ್ದಾರೆ ಎಂದು ಕೆರೆ ಸಂರಕ್ಷಣೆ ಪ್ರಾಧಿಕಾರದ ಮಡಿವಾಳ ಮತ್ತು ಹುಳಿಮಾವು ವಿಭಾಗದ ಸದಸ್ಯ ಜಿ ಬಿ ಅತ್ರಿ ಹೇಳುತ್ತಾರೆ.

ಕೆರೆ ಸಂರಕ್ಷಣೆ ಸಾಧ್ಯವೇ?
ಕೆರೆ ಸಂರಕ್ಷಣೆ ಸಾಧ್ಯವೇ ಎಂಬ ಪ್ರಶ್ನೆ ಮಾಡಿಕೊಳ್ಳುವ ಮೊದಲು ಸ್ಥಳೀಯರು ಆಡಳಿತದಲ್ಲಿ ಹೇಗೆ ಭಾಗವಹಿಸುತ್ತಾರೆ ಎನ್ನುವುದರ ಮೇಲೆ ಕೆರೆ ಉಳಿವು ನಿರ್ಧಾರವಾಗುತ್ತದೆ.

ಬೆಳ್ಳಂದೂರು ಕರೆ, ಹೆಬ್ಬಾಳ, ವರ್ತೂರು, ಸಾರಕ್ಕಿ ಸೇರಿದಂತೆ ಅನೇಕ ಕೆರೆಗಳು ಮಾಲಿನ್ಯದ ತವರಾಗಿದ್ದು ಕೆರೆ ಸಂರಕ್ಷಣೆಗೆ ಸರ್ಕಾರ ವಿದೇಶಿ ಕಂಪನಿಗಳ ಮೊರೆ ಹೋಗಿತ್ತು. ಇದೀಗ ಸ್ಥಳಿಯರನ್ನೇ ಹೊಂದಿರುವ ಸಮಿತಿ ನೇಮಕ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: If you want to do your bit to save the city's lakes, now is the time to enrol as a lake warden. The newly formed Karnataka Lake Conservation and Development Authority (KLCDA) has invited applications from citizens to enrol as lake wardens for Lake Watch Committees. The KLCDA is the nodal agency. Interested citizens should apply to either the Bangalore Development Authority (BDA) or the Bruhat Bangalore Mahanagara Palike (BBMP) depending on who is in charge of that particular lake.
Please Wait while comments are loading...