ಪ್ರಿಯಕರನಿಂದ ಪ್ರಿಯತಮೆಗೆ ಸಿಕ್ಕಿದ್ದು ಸಾವು ಬದುಕಿನ ಹೋರಾಟ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್, 14: ಪ್ರಿಯಕರನ ಹುಚ್ಚು ಪ್ರೇಮಕ್ಕೆ ಬಲಿಯಾಗಿ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಿಯತಮೆ ಮೇಘನಾ ಹಾಗೂ ತಂಗಿ ಸಂಜನಾಳ ಸ್ಥಿತಿ ಚಿಂತಾಜನಕವಾಗಿದೆ.

ಮೇಘನಾ ದೇಹ ಶೇ.60ರಷ್ಟು ಸುಟ್ಟು ಹೋಗಿದ್ದು, ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಸಂಜನಾ ದೇಹವೂ ಶೇ.40ರಷ್ಟು ಸುಟ್ಟು ಹೋಗಿದೆ. ಈಕೆಯ ವಿಷಯದಲ್ಲಿ ಇನ್ನೆರಡು ದಿನ ಏನನ್ನೂ ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಮೇಘನಾರ ಚಿಕ್ಕಪ್ಪ ಹರೀಶ್ ತಿಳಿಸಿದ್ದಾರೆ.[ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ]

Engineering student critical after lover sets her house on fire in Bengaluru

ಏನಿದು ಘಟನೆ?

ಮೇಘನಾ ಮತ್ತು ದೀಪಕ್ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ವಿಚಾರ ತಿಳಿದ ಮೇಘನಾಳ ಮನೆಯವರು ದೀಪಕ್ ಗೆ ಮೊದಲು ಡಿಗ್ರಿ ಓದಿ ಮುಗಿಸು ಎಂದಿದ್ದರು. ಹಾಗೆಯೇ ಎಂಜಿನಿಯರಿಂಗ್ ಓದುತ್ತಿದ್ದ ಮೋಘನಾಳು ಸಹ ಇದೇ ಸಲಹೆ ನೀಡಿದ್ದಳು.[ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]

ಯಾವಾಗಲೂ ಮದುವೆಯ ಮುಂದೂಡುವಿಕೆಯ ಮಾತನಾಡುತ್ತಿದ್ದಾರೆ ಎಂದು ಕೋಪಗೊಂಡ ದೀಪಕ್ ಶುಕ್ರವಾರ 2 ಲೀಟರ್ ಪೆಟ್ರೋಲ್ ತೆಗೆದುಕೊಂಡು ಹೋಗಿ ಆಕೆಯ ಮನೆಯ ಸುತ್ತ ಸುರಿದು ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದನು. ಆಗ ನೆರೆಹೊರೆಯವರಿಗೆ ಸಿಕ್ಕಿಬಿದ್ದ ಈತನನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.[ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!]

ಈತನ ಆತುರದ ನಿರ್ಧಾರಕ್ಕೆ ಮೇಘನಾ, ಆಕೆಯ ಸಹೋದರಿ ಸಂಜನಾ ಹಾಗೂ ತಂದೆ ನಟರಾಜ್, ತಾಯಿ ಅನುಪಮಾ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆ ತಾಯಿ ಕೊಂಚ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಆದರೆ ಮೇಘನಾ ಹಾಗೂ ಸಂಜನಾಳ ಸ್ಥಿತಿ ಗಂಭೀರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Engineering student Meghana and her sister Sanjana is in critical stage after lover sets her house on fire in Bengaluru. Upset over his girlfriend neglecting him, a 21-year-old Deepak pre-university dropout set her house in Saibabanagar, Srirampura, on fire. on Friday night.
Please Wait while comments are loading...