ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನೌಕರರ ಮುಷ್ಕರ, ಕಿಮ್ಸ್‌ನಲ್ಲಿ ಸೇವೆ ಸ್ಥಗಿತ

By Nayana
|
Google Oneindia Kannada News

ಬೆಂಗಳೂರು, ಜೂನ್ 16: ಕಿಮ್ಸ್‌ ಆಸ್ಪತ್ರೆಯಲ್ಲಿ ಬೋಧಕೇತರ ಸಿಬ್ಬಂದಿಯನ್ನು ಕಾನೂನು ಬಾಹಿರವಾಗಿ ನೇಮಿಸಿಕೊಂಡಿರುವುದನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆಡಳಿತ ಮಂಡಳಿ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಶನಿವಾರ ಹೊರ ರೋಗಿಗಳ ವಿಭಾಗದ ಸೇವೆ ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಶನಿವಾರ ಕರ್ತವ್ಯಕ್ಕೆ ಹಾಜರಾಗದೆ ಪರೋಕ್ಷವಾಗಿ ಪ್ರತಿಭಟನೆಗೆ ತಮ್ಮ ಬೆಂಬಲಸೂಚಿಸಲಿದ್ದಾರೆ. ಹಾಗಾಗಿ ಶನಿವಾರ ಅಲ್ಲಿನ ಹೊರ ರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ ಎಂದು ಸಿಬ್ಬಂದಿ ಮೂಲಗಳು ತಿಳಿಸಿವೆ.

ಚುನಾವಣಾ ಜಂಜಾಟ ಅಂತ್ಯ: ನಿಸರ್ಗ ಕೇಂದ್ರಕ್ಕೆ ಹೊರಟ ಸಿದ್ದರಾಮಯ್ಯಚುನಾವಣಾ ಜಂಜಾಟ ಅಂತ್ಯ: ನಿಸರ್ಗ ಕೇಂದ್ರಕ್ಕೆ ಹೊರಟ ಸಿದ್ದರಾಮಯ್ಯ

ಆಸ್ಪತ್ರೆಗೆ ಅನಗತ್ಯವಾಗಿ ಸಿಬ್ಬಂದಿ ನೇಮಕ ಮಾಡದಂತೆ ಆಗ್ರಹಿಸಿ ನೌಕರರ ಸಂಘವು ಹಲವು ಬಾರಿ ಆಡಳಿತ ಮಂಡಳಿಗೆ ಮನವಿ ಮಾಡಿತ್ತು. ಆದರೆ ಈ ಕುರಿತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಚರ್ಚೆ ಕೂಡ ನಡೆಸಿಲ್ಲ.

Employees strike: service may hit in KIMS

ಬದಲಾಗಿ ಅನಗತ್ಯ ಕೆಲಸಗಳಿಗೆ ಕಾನೂನು ಬಾಹಿರವಾಗಿ ಸಿಬ್ಬಂದಿ ನೇಮಕ ಮಾಡಿದೆ. ಇದರಿಂದ ಆಸ್ಪತ್ರೆಯ ಖಾಯಂ ಸಿಬ್ಬಂದಿ ವೇತನ ಹೆಚ್ಚಳ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕಿಮ್ಸ್‌ ಆಸ್ಪತ್ರೆಗೆ ಶನಿವಾರ ಬರುವ ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ಕಷ್ಟವಾಗಿದೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

English summary
Alleging irregularities in recruitment and seeking salary, hundreds of employees of KIMS in Bangalore have going on strike from Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X