ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮೊದಲ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟನೆ

ಬ್ಯಾಟರಾಯನಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟಿಸಿ ಹಾಗೂ ಎಲಿವೇಟರ್ ರೆಸ್ಕ್ಯೂ ವಾಹನಕ್ಕೆ ಗೃಹ ಸಚಿವ ಜಿ ಪರಮೇಶ್ವರ ಚಾಲನೆ ನೀಡಿದರು.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಬ್ಯಾಟರಾಯನಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಲಿವೇಟರ್ ಟ್ರೇಡ್ ಸೆಂಟರ್ ಉದ್ಘಾಟಿಸಿ ಹಾಗೂ ಎಲಿವೇಟರ್ ರೆಸ್ಕ್ಯೂ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್, ತುರ್ತು ಸೇವೆಗಳತ್ತ ಖಾಸಗಿ ಕಂಪನಿಗಳು ಒಲವು ತೋರಿಸುತ್ತಿರುವುದು ಬಹಳ ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದರು.

ಎಲಿವೇಟರ್ ಟ್ರೇಡ್ ಸೆಂಟರ್‍ನ ಈ ಹೊಸ ರೆಸ್ಕ್ಯೂ ವಾಹನ ಅಗ್ನಿಶಾಮದ ಸಿಬ್ಬಂದಿಗಳ ಜೊತೆಗೂಡುವ ಮೂಲಕ ತಾಂತ್ರಿಕತೆಯ ಉಪಯೋಗದಿಂದ ಲಿಫ್ಟ್ ಗಳಲ್ಲಿ ಸಿಲುಕಿರುವವರನ್ನು ಹೊರತರಲು ಸಹಾಯಕ್ಕೆ ಮುಂದಾಗಿರುವುದು ಬಹಳ ಶ್ಲಾಘನೀಯ ವಿಷಯ. ಇಂತಹ ಸೌಲಭ್ಯ ಮುಂದಿನ ದಿನಗಳಲ್ಲಿ ರಾಜ್ಯದ ಇತರ ನಗರಗಳಿಗೂ ಹರಡಬೇಕು ಎಂದರು.

ಬೆಂಗಳೂರು ನಗರದಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಎಲಿವೇಟರ್‍ಗಳನ್ನ ಉಪಯೋಗಿಸಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಈ ಲಿಫ್ಟ್ ಗಳ ಬಳಕೆ ಬಹಳಷ್ಟು ವಿರಳವಾಗಿತ್ತು. ಆದರೆ, ಆಧುನೀಕರಣ ಹಾಗೂ ಬದಲಾದ ಜೀವನ ಸ್ಥಿತಿ ಹೆಚ್ಚೆಚ್ಚು ಲಿಫ್ಟ್‍ಗಳನ್ನು ಬಳಸುವಂತೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಎರಡು ಮಹಡಿಯ ಮನೆಗಳಲ್ಲೂ ಲಿಫ್ಟ್ ಇರುವುದನ್ನು ಕಾಣಬಹುದಾಗಿದೆ. ಲಿಫ್ಟ್ ಹಾಗೂ ಎಲಿವೇಟರ್‍ಗಳ ನಿರ್ವಹಣೆಯಲ್ಲಿ ಸ್ವಲ್ಪಮಟ್ಟಿನ ಆಚೀಚೆ ಆದರೂ ಜನರು ಆತಂಕಕ್ಕೀಡಾಗುವುದು ಸಾಮಾನ್ಯ. ಇಂತಹ ಸಂಧರ್ಭಗಳಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಹೆಚ್ಚಿನ ತಾಂತ್ರಿಕ ಜ್ಞಾನವಿಲ್ಲದೆ ಸಾಂಪ್ರದಾಯಿಕ ವಿಧಾನಗಳ ಮೂಲಕ ಲಿಫ್ಟ್ ಗಳಲ್ಲಿ ಸಿಲುಕಿರುವವರನ್ನು ಹೊರತರುತ್ತಾರೆ.

ಲೈವ್ ವರ್ಕಿಂಗ್ ಎಲಿವೇಟರ್ಸ್

ಲೈವ್ ವರ್ಕಿಂಗ್ ಎಲಿವೇಟರ್ಸ್

ಮೊದಲ ಬಾರಿಗೆ ಎಲ್ಲಾ ವಿಧವಾದ ಲೈವ್ ವರ್ಕಿಂಗ್ ಎಲಿವೇಟರ್ಸ್ ‍ಗಳನ್ನು ಒಂದೇ ಸೂರಿನಡಿಯಲ್ಲಿ ನೋಡಬಹುದಾಗಿದೆ. ಇದು ಗ್ರಾಹಕರಿಗೆ ಅತ್ಯುತ್ತಮ ಎಲಿವೇಟರ್ ಆಯ್ಕೆ ಮಾಡಲು ಸಹಕಾರಿಯಾಗಲಿದೆ. ಎಲಿವೇಟರ್ ತಯಾರಕರಿಗೆ, ವಿತರಕರಿಗೆ ಎಲ್ಲಾ ರೀತಿಯ ಸಿದ್ಧ ಮತ್ತು ಬಿಡಿಭಾಗಗಳು ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಸಮಯ, ಶ್ರಮ ಮತ್ತು ಹಣದ ಉಳಿತಾಯವಾಗಲಿದೆ.

ತುರ್ತು ಸೇವೆಗಳ ಇಲಾಖೆಗೆ ಮುಕ್ತ

ತುರ್ತು ಸೇವೆಗಳ ಇಲಾಖೆಗೆ ಮುಕ್ತ

ವಿಶ್ವದಲ್ಲೇ ಮೊದಲ ಬಾರಿಗೆ ಎಲಿವೇಟರ್ ರೆಸ್ಕ್ಯೂ ವೆಹಿಕಲ್ ಜನರ ತುರ್ತು ಸೇವೆಗಾಗಿ ಲೋಕಾರ್ಪಣೆಯಾಗುತ್ತಿದೆ. ಈ ವಾಹನವು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮುಕ್ತ ಬೆಂಬಲ ನೀಡಲಿದೆ.

ಕಾರ್ಮಿಕರ ಹಿತದೃಷ್ಟಿ

ಕಾರ್ಮಿಕರ ಹಿತದೃಷ್ಟಿ

ಪ್ರಪ್ರಥಮ ಬಾರಿ ಕಾರ್ಮಿಕ ಬಂಧು ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಎಲಿವೇಟರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಅವಘಡ ಸಂಭವಿಸಿ ಅಂಗವೈಕಲ್ಯ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಹಾಗೂ ಮಕ್ಕಳ ಸ್ಕಾಲರ್‍ಶಿಪ್ ಮತ್ತು ಮೆಡಿಕಲ್ ಫೆಸಿಲಿಟೀಸ್ ಹಾಗೂ ರಾಜ್ಯ - ಅಂತರರಾಜ್ಯ ಕಾರ್ಮಿಕರ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ.

ಹೈಡ್ರಾನಿಕ್ ಲಿಫ್ಟ್

ಹೈಡ್ರಾನಿಕ್ ಲಿಫ್ಟ್

ಎಲಿವೇಟರ್ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ - ಎಲಿವೇಟರ್ ಕ್ಷೇತ್ರದ ತಯಾರಕರನ್ನು ಒಳಗೊಂಡ ಸಮಿತಿ ಐವರನ್ನು ಗುರುತಿಸಿ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಗುತ್ತಿದೆ.
ಇದೇ ವೇದಿಕೆಯಲ್ಲಿ ಡಾ. ಉಮೇಶ್ ಕುಮಾರ್ ಸಾಧನೆಯ ಕುರಿತು ಚಿತ್ತಾರ ಹೊರತರುತ್ತಿರುವ ವಿಶೇಷ ಸಂಚಿಕೆ ಲೋಕಾರ್ಪಣೆಯಾಗಲಿದೆ.
ಗೃಹ ಬಳಕೆಗೆ ಯೋಗ್ಯವಾದ ಇಟಲಿ ದೇಶದ ಹೈಡ್ರಾನಿಕ್ ಲಿಫ್ಟ್ ಅನ್ನು ಪ್ರಪ್ರಥಮ ಬಾರಿಗೆ ಲೋಕಾರ್ಪಣೆ ಮಾಡಲಾಗುತ್ತಿದೆ.

ಎಲಿವೇಟರ್ ಟ್ರೇಡ್ ಸೆಂಟರ್

ಎಲಿವೇಟರ್ ಟ್ರೇಡ್ ಸೆಂಟರ್

ಬ್ಯಾಟರಾಯನಪುರದಲ್ಲಿ ಎಲಿವೇಟರ್ ಟ್ರೇಡ್ ಸೆಂಟರ್ ಇಂದು ಆರಂಭವಾಗಿದ್ದು. ಇಲ್ಲಿ ಎಲಿವೇಟರ್‍ ಗೆ ಸಂಬಂಧಿಸಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಉಪಕರಣಗಳು ಲಭ್ಯವಿರಲಿದೆ. ಇದು ಬೆಂಗಳೂರಿನ ಏಕೈಕ ಎಲಿವೇಟರ್ ಟ್ರೇಡ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಅಲ್ಲದೆ, ವಿಶ್ವದಲ್ಲೇ ಮೊದಲ ಬಾರಿಗೆ ಎಲಿವೇಟರ್ ರೆಸ್ಕ್ಯೂ ವೆಹಿಕಲ್ ಜನರ ತುರ್ತು ಸೇವೆಗಾಗಿ ಲೋಕಾರ್ಪಣೆಯಾಗುತ್ತಿದೆ. ಈ ವಾಹನವು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮುಕ್ತ ಬೆಂಬಲ ನೀಡಲಿದೆ ಎಂದರು.

ಎಲಿವೇಟರ್ ಸಂಬಂಧಿ ಉಪಕರಣಗಳು

ಎಲಿವೇಟರ್ ಸಂಬಂಧಿ ಉಪಕರಣಗಳು

ಕೈಲಾಶ ಆಶ್ರಮದ ಜಗದ್ಗುರು ಜಯೇಂದ್ರ ಪುರಿ ಮಹಾಸ್ವಾಮೀಗಳು ಮಾತನಾಡಿ, ಒಂದೇ ಸೂರಿನಡಿಯಲ್ಲಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾದ ಲಿಫ್ಟ್ ಮತ್ತು ಎಲಿವೇಟರ್ ಸಂಬಂಧಿ ಉಪಕರಣಗಳು ದೊರಕುವುದು ಬಹಳ ಸಂತಸದ ವಿಷಯ ಎಂದರು.

ಗಣ್ಯಾತಿಗಣ್ಯರ ಉಪಸ್ಥಿತಿ

ಗಣ್ಯಾತಿಗಣ್ಯರ ಉಪಸ್ಥಿತಿ

ಮಾಜಿ ಉಪಸಭಾಪತಿ ಪುಟ್ಟಣ್ಣ, ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಐ.ಎ.ಎಸ್, ಟ್ರಾನ್ಸಿಟಿಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ನಂದಗೋಪಾಲ್ ಮತ್ತು ಬಿಬಿಎಂಪಿ ಸದಸ್ಯೆ ಉಮಾ ವೇಣುಗೋಪಾಲ್.ಎನ್, ಸೌಮೇಂದು ಮುಖರ್ಜಿ ಐ.ಪಿ.ಎಸ್, ಕರ್ನಾಟಕ ಸರ್ಕಾರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಐಜಿಪಿ ಮತ್ತು ಎಜಿಡಿಪಿ, ಎಚ್. ನಾಗೇಶ್ - ಕೆಪಿಟಿಸಿಎಲ್ ನಿರ್ದೇಶಕ (ಪ್ರಸರಣ), ಡಿ.ಎಚ್. ಬಸವರಾಜು ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್, ಕೆ. ಸಿದ್ಧರಾಜು - ಬೆಸ್ಕಾಂನ ತಾಂತ್ರಿಕ ನಿರ್ದೇಶಕರು, ಎಂ.ಸಿ. ದಿನೇಶ್, ಎ. ಪದ್ಮನಾಭ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು

English summary
In Pics : Inauguration of Elevator Trade Center, Elevator Rescue Vehicle by Home minister G Parameshwara at a Trade Center Byataranapura, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X