6 ಎಲಿವೇಟೆಡ್ ಕಾರಿಡಾರ್, ಬಿಡದಿಯಲ್ಲಿ ಸ್ಮಾರ್ಟ್ ಸಿಟಿ: ಜಾರ್ಜ್

Posted By:
Subscribe to Oneindia Kannada

ಬೆಂಗಳೂರು, ಫೆ. 25: ನಗರದ 82.7 ಕಿ.ಮೀ. ಉದ್ದದ 6 ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಿದ್ದು, ಟೋಲ್ ಆಧಾರಿತ ಈ ರಸ್ತೆಗಳಿಗೆ 18 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಗುರುವಾರ ತಿಳಿಸಿದ್ದಾರೆ.

ಪಿಪಿಪಿ ಆಧಾರಿತ ಯೋಜನೆಯಾಗಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅಮೆರಿಕ ಮೂಲದ ಕಂಪೆನಿಗೆ ವಹಿಸಲಾಗಿತ್ತು. ಇದಕ್ಕಾಗಿ 14 ಕೋಟಿ ರೂ.ವೆಚ್ಚವಾಗಲಿದೆ ಎಂದರು. ಸುದ್ದಿಗೋಷ್ಠಿ ಮುಖ್ಯಾಂಶಗಳು ಇಲ್ಲಿವೆ: [ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್]

* ಮಲೇಷ್ಯಾ ಮೂಲದ ಕಂಪೆನಿಗಳ ನಿಯೋಗಕ್ಕೆ ಎಲಿವೇಟೆಡ್ ರಸ್ತೆಗಳ ಪ್ರಾಥಮಿಕ ಮಾಹಿತಿ ನೀಡಿದ್ದು ಯೋಜನೆ ಅನುಷ್ಠಾನಗೊಳಿಸಲು ಉತ್ಸುಕವಾಗಿದೆ.

* ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣ ಆಗಲಿದೆ.

KJ George

* 18.1 ಕಿ.ಮೀ ಉದ್ದದ 6 ಪಥದ ರಸ್ತೆಗಳನ್ನು ಒಳಗೊಳ್ಳಲಿದೆ.

* ಕೆ.ಆರ್.ಪುರಂನಿಂದ ಗೊರಗುಂಟೆ ಪಾಳ್ಯ ನಡುವಿನ 19.70 ಕಿ.ಮೀ. ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್ ಒಂದು ನಿರ್ಮಿಸಲಿದೆ.

* ಪೂರ್ವ-ಪಶ್ಚಿಮ ಕಾರಿಡಾರ್ 2ನೇ ರಸ್ತೆಯು ಜ್ಞಾನಭಾರತಿಯಿಂದ ವರ್ತೂರು ಕೋಡಿವರೆಗೆ 27.70 ಕಿ.ಮೀ. ಉದ್ದ ಒಳಗೊಂಡಿದ್ದು 6 ಪಥದ ರಸ್ತೆ ಆಗಲಿದೆ. [ಚಿತ್ರಗಳು : ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ]

* ಸಂಪರ್ಕ ಕಾರಿಡಾರ್ ಉತ್ತರ- ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್‌ಗಳನ್ನು ಸಂಪರ್ಕಿಸಲಿದ್ದು 9.20 ಕಿ.ಮೀ. ಉದ್ದದ 4 ಪಥದ ರಸ್ತೆಯಾಗಿದೆ. ಇದು ಅಗರ ಮತ್ತು ಕಲಾಸಿಪಾಳ್ಯ ನಡುವೆ ಸಂಪರ್ಕಿಸಲಿದೆ.

ಬಿಡದಿ ಸ್ಮಾರ್ಟ್ ಸಿಟಿ: ಬಿಡದಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ನೂಡಲ್ ಏಜೆನ್ಸಿಯಾಗಿರುತ್ತದೆ. [ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]

* ಬೆಂಗಳೂರಿನಲ್ಲಿ 500 ಕಿ.ಮೀ. ಸಿಮೆಂಟ್ ಟ್ಯಾಪಿಂಗ್ ರಸ್ತೆ ನಿರ್ಮಿಸಲಾಗುವುದು. 11 ಸಾವಿರ ಕೋಟಿ ರು. ವೆಚ್ಚದಲ್ಲಿ ಪೆರಿಪೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲಾಗುವುದು, ಜೈಕ ಸಂಸ್ಥೆಯಿಂದ 3800 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ.

* 100 ಮೀಟರ್ ಅಗಲ ಪೆರಿಪೆರಲ್ ರಿಂಗ್ ರಸ್ತೆಯಿದ್ದರೂ ಭೂಸ್ವಾಧೀನ ಮಾಡಿಕೊಳ್ಳಲಿದ್ದು 75 ಮೀಟರ್‌ನಲ್ಲಿ 8 ಪಥದ ರಸ್ತೆ ನಿರ್ಮಿಸಿ ಉಳಿದ 25 ಮೀಟರ್ ವಾಣಿಜ್ಯ ಬಳಕೆ ಮಾಡಲಾಗುವುದು.

* ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಮೋನೋ ರೈಲು ನಿರ್ಮಿಸಲು ಕೆಲವು ಕಂಪೆನಿಗಳು ಮುಂದೆ ಬಂದಿವೆ ಎಂದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Development Minister KJ George on Thursday (Feb.25) briefed about the upcoming infrastructure projects in Bengaluru. Peripheral Ring Road (PRR) and 6 elevated corridor, Bengaluru Development Authority (BDA) will be the nodal agency for Bidadi smart city project.
Please Wait while comments are loading...