ಕಾಡಾನೆ ಸಿದ್ದ ಚೇತರಿಕೆ, ವೈದ್ಯರ ರಾಜೋಪಚಾರ

Posted By:
Subscribe to Oneindia Kannada

ಮಾಗಡಿ, ನವೆಂಬರ್ 15: ಮಾಗಡಿ ತಾಲೂಕಿನ ಮಂಚನಬೆಲೆಯ ಜಲಾಶಯದ ಅವ್ವೇರಹಳ್ಳಿಯಲ್ಲಿ ಕೆಲದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಾಡಾನೆ ಸಿದ್ದ ಚೇತರಿಸಿಕೊಂಡಿದ್ದಾನೆ.

ಪ್ರಸ್ತುತ ಸೈನಿಕರ ಸಹಾಯದಿಂದ ಆತನನ್ನು ಎದ್ದು ನಿಲ್ಲಿಸಿದ್ದು ಪತ್ಯೆಕ ಮನೆಯೊಂದನ್ನು ನಿರ್ಮಿಸಲಾಗಿದೆ. ವೈದ್ಯರ ಸಹಾಯದಿಂದ ಆತನಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ.[ಎದ್ದು ನಿಂತ ಸಿದ್ದ, ಯೋಧರ ಶ್ರಮಕ್ಕೆ ಸಿಕ್ಕ ಫಲ]

Elephant sidda ready for the recovery

18 ದಿನಗಳಿಂದ ಇದ್ದ ಜಾಗದಲ್ಲೇ ಮಲಗಿದ್ದ ಸಿದ್ದ ಈಗ ಮೇಲೆದ್ದಿರುವ ಕಾರಣದಿಂದ ವೈದ್ಯರು ಆತನಿಗೆ ಹೊರಭಾಗದಲ್ಲಿ ಆಗಿರುವ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಕಾಲು ಮುರಿತದಿಂದ ಆಗಿರುವ ಗಾಯದಲ್ಲಿ ಕೀವು ಸಹ ಕಡಿಮೆಯಾಗಿದ್ದು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ.[ಜೀವನ್ಮರಣ ಹೋರಾಟದಲ್ಲಿರುವ ಗಜರಾಜ ಸಿದ್ದನಿಗಾಗಿ ಪ್ರಾರ್ಥನೆ]

ಇನ್ನು ಆರು ದಿನಗಳಿಂದ ನಿರ್ಮಿಸಿರು ಸೇಪ್ಟಿ ಟವರ್ ಅಲ್ಲಿ ನಿಂತಿರುವ ಕಾಡಾನೆ ಸಿದ್ದನಿಗೆ ಬಿಸಿಲಿನ ಝಳ ನಿವಾರಿಸಲು ಸ್ಟ್ರಿಂಕ್ಲರ್ಸ್ ಗಳನ್ನು ಅಳವಡಿಸಿ ಮೇಲಿಂದ ನೀರನ್ನು ತುಂತುರು ತುಂತುರಾಗಿ ಹರಿಸಲಾಗುತ್ತಿದೆ. ಹಾಗೆಯೇ ಆಹಾರ ಸೇವನೆಯಲ್ಲಿ ಚೇತರಿಸಿಕೊಂಡಿರುವ ಸಿದ್ದ 40 ಕೆಜಿ ಕಡಲೇ ಬೀಜ, ಬೆಲ್ಲ ಮಿಶ್ರಿತ ರಾಗಿಮುದ್ದೆ, 45ಕೆಜಿಯಷ್ಟು ಕಬ್ಬು ಅಲ್ಲದೇ ಮೆಕ್ಕೆಜೋಳ, ಬಾಳೆಹಣ್ಣು, ಹಸಿರು ಹುಲ್ಲನ್ನು ಸ್ವೀಕರಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಯಿಸಿರುವ ಬನ್ನೇರುಘಟ್ಟದ ವೈದ್ಯ ಡಾ. ನಾಗರಾಜು ಸಿದ್ದ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಡಾನೇ ಸಿದ್ದನ ಈ ಎಲ್ಲ ಬೆಳವಣಿಗಳು ಸಾವನ್ನೇ ಗೆದ್ದು ಬಂದಂತಾಗಿದೆ. ಈಗ ವೈದ್ಯರು ಮುರಿದಿರುವ ಮೂಳೆಯನ್ನು ಹೇಗೆ ಸಿದ್ದ ಪಡಿಸಬಹುದು ಎಂಬ ಚರ್ಚೆ ಶುರುವಾಗಿದೆ. ಸಿದ್ದ ಬೇಗ ಹುಷಾರಾಗಿ ಕಾಡಿನ ಎಡೆಗೆ ಹೆಜ್ಜೆ ಹಾಕಲಿ ಎಂಬು ಪ್ರಾಣಿಪ್ರಿಯರ ಆಶಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elephant sidda ready for the little bit recovery. Had food, and he response the doctor treatment
Please Wait while comments are loading...