ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

By Gururaj
|
Google Oneindia Kannada News

ಬೆಂಗಳೂರು, ಜುಲೈ 01 : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಮೂಲಕ ಸಂಚಾರ ನಡೆಸುವ ವಾಹನ ಸವಾರರು ಹೆಚ್ಚಿನ ಟೋಲ್ ಶುಲ್ಕ ಪಾವತಿ ಮಾಡಬೇಕು. ಟೋಲ್‌ ಶುಲ್ಕ, ತಿಂಗಳ ಪಾಸುಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ.

ಬೆಂಗಳೂರು ಎಲಿವೇಟೆಡ್‌ ಟೋಲ್‌ ವೇ ಲಿಮಿಟೆಡ್‌ ಸಂಸ್ಥೆಯು (ಬಿಇಟಿಎಲ್‌) ಟೋಲ್ ಶುಲ್ಕ, ತಿಂಗಳ ಪಾಸು ಶುಲ್ಕವನ್ನು ಏರಿಕೆ ಮಾಡಿದೆ. ನೂತನ ದರಗಳು ಜುಲೈ 1ರ ಭಾನುವಾರದಿಂದ ಜಾರಿಗೆ ಬಂದಿವೆ.

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ತಿಂಗಳ ಪಾಸು ಪಡೆದು ಸಂಚಾರ ನಡೆಸುವ ವಾಹನ ಸವಾರರಿಗೆ ಟೋಲ್ ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ. ಕಾರು ಮತ್ತು ಲೈಟ್ ಮೋಟಾರ್ ವೆಹಿಕಲ್‌ಗಳ ಶುಲ್ಕ 50 ರೂ. ಆಗಿದೆ. ಬಸ್ಸುಗಳು ರೂ. 105 ರೂ. ಪಾವತಿ ಮಾಡಬೇಕಿದೆ.

Electronic City and Attibele toll charges hikes

ಕಾರುಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ 5 ರೂ. ಶುಲ್ಕವನ್ನು ಏರಿಕೆ ಮಾಡಲಾಗಿದೆ. ದೊಡ್ಡ ವಾಹನಗಳು, ಅರ್ಥ್ ಮೂವರ್ಸ್‌ಗಳಿಗೆ ರೂ.10 ದರ ಏರಿಕೆಯಾಗಿದೆ.

ಏರ್‌ಪೋರ್ಟ್‌ ರಸ್ತೆಯಲ್ಲಿ ಎರಡೂ ಕಡೆ ಟೋಲ್ ಪಾವತಿಸಬೇಕುಏರ್‌ಪೋರ್ಟ್‌ ರಸ್ತೆಯಲ್ಲಿ ಎರಡೂ ಕಡೆ ಟೋಲ್ ಪಾವತಿಸಬೇಕು

ಅತ್ತಿಬೆಲೆ ಟೋಲ್‌ನಲ್ಲಿಯೂ ಕಾರುಗಳ ತಿಂಗಳ ಪಾಸುಗಳ ಶುಲ್ಕವನ್ನು 20 ರೂ.ಗೆ ಏರಿಕೆ ಮಾಡಲಾಗಿದೆ. ಒಮ್ಮೆ ಹೋಗಿಬರುವ ವಾಹನಗಳು 5 ರೂ. ಹೆಚ್ಚಿನ ದರವನ್ನು ಪಾವತಿ ಮಾಡಬೇಕು.

English summary
People who use the toll roads in Electronic City and Attibele Bengaluru will have to shell out more for return trips and monthly passes. Bangalore Elevated Tollway Private Limited has revised the toll charges from July 1, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X