ಬಿಬಿಎಂಪಿ: ರಸ್ತೆಯ ಕಸ ಗುಡಿಸಲು ಎಲೆಕ್ಟ್ರಿಕ್ ವಾಹನ ಬಳಕೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ಪರಿಸರ ಮಾಲಿನ್ಯ ತಡೆಗೆ ಈಗಾಗಲೇ ಎಲೆಕ್ಟ್ರಿಕ್ ಬೈಕ್, ಬಸ್, ಆಟೋಗಳು ರಸ್ತೆಗಿಳಿದಿವೆ.

ಆದರೆ ಇದೇ ಮೊದಲ ಬಾರಿಗೆ ನಗರದಲ್ಲಿ ಕಸ ಗುಡಿಸಲು ಎಲಕ್ಟ್ರಿಕ್ ವಾಹನ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿಯೇ ಬಿಬಿಎಂಪಿ ಬೆಲ್ಜಿಯಂನಿಂದ ತಂದಿರುವ ಕಸ ಗುಡಿಸುವ 2 ಎಲೆಕ್ಟ್ರಿಕ್ ವಾಹನಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಿದೆ.

ಎಲೆಕ್ಟ್ರಿಕ್ ಆಟೋಗಳಿಗೆ 1ಲಕ್ಷ ರೂ. ಸಬ್ಸಿಡಿ

ಈ ಹಿಂದೆಯೇ ರಸ್ತೆ ಗುಡಿಸಲು ಬಿಬಿಎಂಪಿ ಕಸಗುಡಿಸುವ 8 ವಾಹನಗಳನ್ನು ಖರೀದಿಸಿದೆ. ಅವುಗಳಿಂದ ಪ್ರಮುಖ ರಸ್ತೆಗಳನ್ನು ಈಗಾಗಲೇ ಗುಡಿಸಲಾಗುತ್ತಿದೆ. ಅವುಗಳ ಜತೆಗೆ ಮತ್ತೆ 34ವಾಹನ ಖರೀದಿಗೆ ಮುಂದಾಗಿರುವ ಬಿಬಿಎಂಪಿ ಅದರಲ್ಲಿ 2 ವಾಹನಗಳನ್ನು ಮೊದಲಿಗೆ ಪ್ರಾಯೋಗಿಕವಾಗಿ ಬಳಸಲಿದೆ. ಅವು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಖರೀದಿಸಲಾಗುತ್ತದೆ.

Electric vehicle will Broom Bengaluru

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಇಲ್ಲದಿದ್ದರೆ, ಈ ಹಿಂದೆಯೇ ಖರೀದಿಸಿದ್ದ ಕಂಪನಿಯ ವಾಹನಗಳನ್ನು ಖರೀದಿಸಿ ರಸ್ತೆಗಿಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಈ 2 ವಾಹನಗಳನ್ನು ಬೆಲ್ಜಿಯಂನ ಖಾಸಗಿ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದ್ದು, ಅವುಗಳ ಕಾರ್ಯದ ಬಗ್ಗೆ ಪರಿಶೀಲಿಸಲಾಗುವುದು . ಅದಕ್ಕಾಗಿ ಕನಿಷ್ಟ 2 ರಿಂದ 3 ತಿಂಗಳ ಕಾಲ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಈ ವಾಹನದಿಂದ ಕಸ ಗುಡಿಸಲಾಗುತ್ತದೆ. ಸೇಂಟ್ ಮಾರ್ಕ್ಸ್ ರಸ್ತೆ, ವಿಠ್ಠಲ ಮಲ್ಯ ರಸ್ತೆ ಸೇರಿ ಇನ್ನಿತರೆ ರಸ್ತೆಗಳನ್ನು ಗುರುತಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP has brought new electric broom vehicle to clean the Bengaluru. Two vehicle will operate in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ