ಬೆಸ್ಕಾಂ: ಇ-ಚಾರ್ಜಿಂಗ್ ಕೇಂದ್ರಕ್ಕೆ ನೀರಸ ಪ್ರತಿಕ್ರಿಯೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 10: ಕಳೆದ ಒಂದೂವರೆ ತಿಂಗಳ ಹಿಂದೆ ಬೆಸ್ಕಾಂನ ಮುಖ್ಯ ಕಚೇರಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಸ್ಥಾಪಿಸಲಾದ ಇ-ಚಾರ್ಜಿಂಗ್ ಕೇಂದ್ರಕ್ಕೆ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ.

ಫೆಬ್ರವರಿ 10ರಂದು ಬೆಸ್ಕಾಂ ಪ್ರಾಯೋಗಿಕವಾಗಿ ಕೆಎಆರ್ ವೃತ್ತದ ಬಳಿ ಇರುವ ಮುಖ್ಯ ಕಚೇರಿ ಆರವಣದಲ್ಲಿ ಆರಂಭಿಸಲಾಗಿತ್ತು. ಇದುವರೆಗೆ ಕೇವಲ 15 ಕಾರುಗಳು ಮಾತ್ರ ಅಲ್ಲಿಗೆ ಬಂದು ರೀಚಾರ್ಜ್ ಮಾಡಿಸಿಕೊಂಡಿವೆ. ಬೆಸ್ಕಾಂನ ಮುಖ್ಯ ಕಚೇರಿಯಲ್ಲಿರುವ ಐದು ಕಾರುಗಳು ಮಾತ್ರ ನಿತ್ಯ ಅದನ್ನು ಬಳಕೆ ಮಾಡುತ್ತಿವೆ.

ಇ-ವಾಹನ ರಿಚಾರ್ಜ್ ಸೆಂಟರ್: ಸಬ್ಸಿಡಿ ನೀಡುವಂತೆ ಕೆಇಆರ್ ಗೆ ಬೆಸ್ಕಾಂ ಪ್ರಸ್ತಾವ

ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದವರು ತಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳುತ್ತಾರೆ. ಅದರ ಜತೆಗೆ ನಮ್ಮ ಕಚೇರಿಯ ಆಸುಪಾಸಿನಲ್ಲಿ ವಿದ್ಯುತ್ ವಾಹನಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಂದಿ ಬಳಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಬೆಸ್ಕಾಂ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

Electric-vehicle charging station on Bescom premises finds few takers

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇನ್ನು ಆರು ತಿಂಗಳೊಳಗೆ ಇನ್ನು 50ಕಡೆಗಳಲ್ಲಿ ಎಲೆಕ್ಟ್ರಿಕ್ ರೀಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುತ್ತದೆ. ಸಾರಿಗೆ ಇಲಾಖೆ ಪ್ರಕಾರ 6,275 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. 3,696 ಲಘು ಮೋಟಾರ್ ವಾಹನಗಳಿವೆ, 2,160 ದ್ವಿಚಕ್ರ ವಾಹನಗಳೆಲ್ಲ ಸೇರಿ ಒಟ್ಟು 73ಲಕ್ಷ ವಾಹನಗಳು ನೋಂದಣಿಯಾಗಿವೆ.

ಬಿಬಿಎಂಪಿ: ರಸ್ತೆಯ ಕಸ ಗುಡಿಸಲು ಎಲೆಕ್ಟ್ರಿಕ್ ವಾಹನ ಬಳಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over a month after its launch, the public electric vehicle charging station, set up in the city by the Bengaluru Electricity Supply company has found very few takers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ