ವಾಯು ಮಾಲಿನ್ಯ ನಿಯಂತ್ರಣಕ್ಕೆ ಬ್ಯಾಟರಿ ಚಾಲಿತ ಆಟೋಗಳು

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28 : ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಏಪ್ರಿಲ್ 1 ರಿಂದ 2 ಸ್ಟ್ರೋಕ್ ಆಟೋಗಳನ್ನು ನಗರದಲ್ಲಿ ನಿಷೇಧ ಮಾಡಿದ ಬೆನ್ನಲ್ಲೇ ಸಿಟಿಯಲ್ಲಿ ಎಲೆಕ್ಟ್ರಾನಿಕ್ ಆಟೋ ರಿಕ್ಷಾಗಳನ್ನು ಓಡಿಸುವ ಚಿಂತನೆಯನ್ನೂ ಮಾಡಿದೆ.

ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಆಟೋಗಳು ನಗರದಿಂದ ಹೊರಗೆ

ನಗರದಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ನಡೆಸುತ್ತಿದೆ. ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಎನರ್ಜಿ ಸ್ಟೋರೇಜ್ ಪಾಲಿಸಿ 2017 ಅನ್ವಯ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಆಟೋಗಳಿಗೆ ಅನುಮತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.

Electric engine Autorickshaws to come up in Bengaluru soon!

ಪ್ರಸ್ತುತ ಇರುವ ವಾಹನಗಳಿಗೆ ಬ್ಯಾಟರಿ ಚಾಲಿತ ಎಂಜಿನ್ ಗಳನ್ನು ಅಳವಡಿಸುವ ಚಿಂತನೆ ಮಾಡಿದೆ. ಬೆಂಗಳೂರು ನಗರದೊಳಗೆ ಬ್ಯಾಟರಿ ಚಾಲಿತ ಆಟೋಗಳನ್ನು ಓಡಿಸಲು ಪ್ರಸ್ತುತ ಅವಕಾಶವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಯಾವುದೇ ಯೋಜನೆ ಜಾರಿಯಾಗಿಲ್ಲ. ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿ, ಒಪ್ಪಿಗೆ ಪಡೆದುಕೊಂಡರೆ ರಹದಾರಿ ವಿತರಣೆ ಕಾರ್ಯ ನಡೆಯಲಿದೆ.

ಕನ್ನಡನಾಡಿನ ಹಳೇ ಆಟೋರಿಕ್ಷಾಗಳನ್ನು ಗುಜರಿ ಮಾಡಲು ಸರಕಾರದ ಚಿಂತನೆ!

ಬ್ಯಾಟರಿ ಚಾಲಿತ ವಾಹನಗಳಿಗೆ ಉತ್ತೇಜನ ಕೊಡುವಲ್ಲಿ ರಾಜ್ಯ ಸರ್ಕಾರ ನಾನಾ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಲ್ಲಿ ಬೆಂಗಳೂರು ನಗರದೊಳಗೆ ಈ ಕಾರ್ಯಕ್ಕೆ ಹೆಚ್ಚು ಪ್ರೇರಣೆ ನೀಡಲಾಗುತ್ತಿದೆ. ನಗರದೊಳಗೆ ಮಾಲಿನ್ಯ ಹೆಚ್ಚಾಗಲು ಜಾಸ್ತಿ ಹೊಗೆ ಉಗುಳುವ ಆಟೋಗಳು ಕಾರಣ ಎನ್ನುವ ಆರೋಪಗಳು ಇರುವ ಕಾರಣ ಅದರ ನಿಯಂತ್ರಣ ಅನಿವಾರ್ಯವಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಹೇಳುತ್ತಾರೆ.

ಸರ್ಕಾರ ಒಪ್ಪಿಗೆ ಸೂಚಿಸಬೇಕು: ಬ್ಯಾಟರಿ ಚಾಲಿತ ಎಂಜಿನ್ ಅಳವಡಿಸುವ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಸಾಕಷ್ಟು ಆಸಕ್ತಿ ತೋರಿದೆ. ಎಲೆಕ್ಟ್ರಿಕ್ ಎಂಜಿನ್ ಅಳವಡಿಸಲು ಆಸಕ್ತಿ ತೋರುವ ಚಾಲಕರಿಗೆಇಲಾಖೆಯಿಂದ ಬೆಂಬಲ ಕೊಡಲಾಗುವುದು. ಒಂದು ಬಾರಿ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದರೆ ಇಲಾಖೆಯಿಂದ ಮಾಡ ಬೇಕಾದ ಕಾರ್ಯ ಚಟುವಟಿಕೆಗಳು ವೇಗವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of Transport sent proposal to the government to introduce electric engine autorickshaws in Bengaluru city ad initiative of control the air pollution in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ