ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರು ತಿಂಗಳಲ್ಲಿ ಬೆಂಗಳೂರು ರಸ್ತೆಗೆ ವಿದ್ಯುತ್ ಚಾಲಿತ ಬಸ್

|
Google Oneindia Kannada News

ಬೆಂಗಳೂರು, ಮಾರ್ಚ್ 07: ಹಲವು ದಿನಗಳಿಂದ ನಗರದ ಜನತೆ ಕಾತುರದಿಂದ ಕಾದಿರುವ ವಿದ್ಯುತ್ ಚಾಲಿತ ಬಸ್ ಸೇವೆ ಇನ್ನು ಆರು ತಿಂಗಳಲ್ಲಿ ಪ್ರಾರಂಭವಾಗಲಿದೆ.

ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್ ಎಮರ್ಜಿಂಗ್ ಕಂಪನಿಯು ಅತ್ಯಂತ ಕಡಿಮೆ ದರಕ್ಕೆ ಬಸ್‌ಗಳನ್ನು ಭೋಗ್ಯಕ್ಕೆ ನೀಡಲು ಮುಂದೆ ಬಂದಿದೆ. ಭೋಗ್ಯದ ಆಧಾರದಲ್ಲಿ 150 ವಿದ್ಯುತ್‌ಚಾಲಿತ ಬಸ್‌ಗಳನ್ನು ಒದಗಿಸುವ ಕುರಿತು ಬಿಎಂಟಿಸಿಯು ಡಿಸೆಂಬರ್‌ನಲ್ಲಿ ಟೆಂಡರ್ ಕರೆದಿತ್ತು.

ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್ಬೆಂಗಳೂರು ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕಲ್ ಬಸ್

ಈ ಬಸ್‌ಗಳಲ್ಲಿ 35 ಆಸನಗಳಿರುತ್ತವೆ. ವೋಲ್ವೊ ಬಸ್‌ನಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲೂ ಇರಲಿವೆ. ಇವು ಹೊರ ವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚರಿಸಲಿವೆ. ಈ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಜ್ರ ಬಸ್‌ಗಳು ಪ್ರತಿ ಕಿ.ಮೀ.ಗೆ ಸರಾಸರಿ 62 ರೂ ವರಮಾನ ಗಳಿಸುತ್ತಿವೆ.

Electric buses in Bengaluru on six months

ಮೊದಲ ಹಂತದಲ್ಲಿ 40 ಬಸ್ ಗಳನ್ನು ಒದಗಿಸುವ ಕಂಪನಿಯು ಒಪ್ಪಿಗೆ ನೀಡಿದೆ. ವಾಹನದ ಪ್ರತಿ ಕಿ.ಮೀ ಕಾರ್ಯಾಚಾರಣೆ ನಾವು 37.50 ಶುಲ್ಕವನ್ನು ಕಂಪನಿಗೆ ಪಾವತಿಸಬೇಕು. ವಿದ್ಯುತ್ ಹಾಗೂ ನಿರ್ವಾಹಕರ ವೆಚ್ಚ 17 ಆಗುತ್ತದೆ. ಚಾರ್ಜಿಂಗ್ ಪಾಯಿಂಟ್ ಗಳನ್ನು ಅವರೇ ನಿರ್ಮಿಸಲಿದ್ದಾರೆ. ಚಾಲಕರನ್ನು ಅವರೇ ಒದಗಿಸಲಿದ್ದಾರೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.

English summary
Hyderabad based Gold stone emerging company has comes forward to provide to provide 40 electric buses to BMTC within six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X