ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಹಿನ್ನೆಲೆ, ರೌಡಿಗಳಿಗೆ ಬೆಂಗಳೂರು ಪೊಲೀಸರ ಖಡಕ್ ವಾರ್ನಿಂಗ್

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 21: ವಿಧಾನಸಭಾ ಚುನಾವಣೆ ಘೋಷಣೆ ಮುನ್ನವೇ ಬೆಂಗಳೂರು ಪೊಲೀಸರು ಜಾಗೃತರಾಗಿದ್ದು, ನಗರದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಅಕ್ರಮಕ್ಕೆ, ಮತದಾರ, ಜನಪ್ರತಿನಿಧಿಗಳ ಬೆದರಿಕೆಗೆ ಮುಂದಾಗಬಹುದೆಂಬ ಶಂಕೆಯಿಂದ ನಗರದ ರೌಡಿ ಶೀಟರ್‌ಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿರುವ ಪೊಲೀಸರು ಎಲ್ಲಾ ರೌಡಿಗಳಿಗೂ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ರೌಡಿಗಳ ವಿರುದ್ಧ ಬಂದೂಕು ಬಳಸಿ: ರಾಮಲಿಂಗಾ ರೆಡ್ಡಿರೌಡಿಗಳ ವಿರುದ್ಧ ಬಂದೂಕು ಬಳಸಿ: ರಾಮಲಿಂಗಾ ರೆಡ್ಡಿ

ರೌಡಿ ಅಪರೇಷನ್ ನಡೆಸಿರುವ ಪೂರ್ವ ಮತ್ತು ಪಶ್ವಿಮ ವಲಯದ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಅಪರಾಧ ವಿಭಾದ ಜಂಟಿ ಆಯುಕ್ತರು ಚುನಾವಣೆ ಹೆಸರಲ್ಲಿ ರಾಜಕಾರಣಿಗಳ ಜೊತೆ ಸೇರಿ ಸಾಮಾನ್ಯ ಮತದಾರರ ಮೇಲೆ ದರ್ಪ ಮೆರೆಯದಂತೆ ರೌಡಿಗಳಿಗೆ ಬ್ರೇಕ್ ಹಾಕಿದ್ದಾರೆ.

Elections: Police warns Rowdy sheeters and took bond

ಕಳೆದ ಜನವರಿ ಒಂದರಿಂದ ಅಪರೇಷನ್ ಶುರುಮಾಡಿದ್ದು, ಬರೋಬ್ಬರಿ 1615 ಮಂದಿಯ ವಿರುದ್ದ ಸಿಆರ್‌ಪಿಸಿ ಸೆಕ್ಷನ್ 110 ಪ್ರಯೋಗ ಮಾಡಿದ್ದಾರೆ. 1568 ಮಂದಿಯ ಬಳಿ ಆಯುಕ್ತರು ಬಾಂಡ್ ಸಹ ಪಡೆದುಕೊಂಡಿದ್ದಾರೆ.
ರೌಡಿಗಳಿಂದ ಬರೆಸಿಕೊಂಡಿರುವ ಬಾಂಡ್‌ ನಲ್ಲಿ ಈ ಅಂಶಗಳೆಲ್ಲಾ ಇವೆ...

* ಆರು ತಿಂಗಳು ಕಾಲ ಯಾವುದೇ ಅಪರಾಧದಲ್ಲಿ ಭಾಗಿಯಾಗಲ್ಲ
* ಚುನಾವಣೆ ಹೆಸರಲ್ಲಿ ಯಾವುದೇ ವ್ಯಕ್ತಿಗೆ ಬೆದರಿಸಲ್ಲ
* ಪ್ರಚಾರದ ವೇಳೆ ಯಾವುದೇ ಕಾರಣಕ್ಕೂ ಗಲಾಟೆ ಮಾಡಲ್ಲ
* ಮತದಾರರಿಗಾಗಲಿ ಅಥವಾ ಜನಪ್ರತಿನಿಧಿಗಳಿಗಾಗಲಿ ಬೆದರಿಸುವುದಿಲ್ಲ
* ಯಾವುದೇ ಪಕ್ಷದ ಪರ ವಿರೋಧವಾಗಿ ಒಳಸಂಚು ರೂಪಿಸುವಂತಿಲ್ಲ
* ಏರೀಯಾದ ಕಾನೂನು ಸುವ್ಯವಸ್ಥೆ ಗೆ ಧಕ್ಕೆ ತರುವಂತಿಲ್ಲ
* ಐದಾರು ಮಂದಿ ರೌಡಿಗಳು ಒಟ್ಟಾಗಿ ಎಲ್ಲೂ ಸೇರುವಂತಿಲ್ಲ
* ಅಪರಾಧ ಕೃತ್ಯ ಮಾಡದಂತೆ ನೋಡಿಕೊಳ್ಳುವುದಾಗಿ ಪರಿಚಿತರ ( ಸಂಬಂಧಿಕರ) ಶ್ಯೂರಿಟಿ ನೀಡಬೇಕು

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದರೆ, ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಅಲ್ಲದೇ ಬಾಂಡ್ ಪ್ರಕಾರ ಒಂದು ವೇಳೆ ಅಪರಾಧ ಮಾಡಿ ರೌಡಿ ಶೀಟರ್ ಜೈಲು ಸೇರಿದರೆ, ಶ್ಯೂರಿಟಿ ನೀಡಿದ ವ್ಯಕ್ತಿ ಬಾಂಡ್‌ನಲ್ಲಿ ಬರೆದಷ್ಟು ಹಣದ ದಂಡ ಕಡ್ಟಬೇಕು.

English summary
Bengaluru police imposed CRPC section 110 on 1615 rowdies and took bond from 1568 people ahead of assembly elections. If rowdies violate the bond or police orders will be imprisoned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X