ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ- ಮುರಳೀಧರನ್ ಟ್ವೀಟ್ ವಾರ್ ಮುಂದುವರಿಕೆ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 22: ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ. ಪ್ರಾದೇಶಿಕ ಅಸಮತೋಲನವಾಗುತ್ತಿದೆ ಎಂಬ ಕೂಗಿದೆ ಬಲ ತರುವಂಥ ಟ್ವೀಟೊಂದನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಗರಿಗೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಎಂದು ಟ್ವೀಟ್ ಮಾಡುವ ಕನ್ನಡಿಗರ ಕೆಚ್ಚೆಬ್ಬಿಸಿದ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು, ಮುರಳೀಧರ್ ರಾವ್ ಅವರು ಕೂಡಾ ಕನ್ನಡ ಭಾಷೆ ಲಿಪಿ ಬಳಸಿ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Elections 2018: Muralidhr Rao replies with Kannada Tweet CM Siddaramaiah

ಹಿಂದಿ ಟ್ವೀಟ್‌ಗೆ ಸಿದ್ದರಾಮಯ್ಯ ಎದಿರೇಟು, ಉಘೇ ಉಘೇ ಎಂದ ಟ್ವಿಟ್ಟಿಗರುಹಿಂದಿ ಟ್ವೀಟ್‌ಗೆ ಸಿದ್ದರಾಮಯ್ಯ ಎದಿರೇಟು, ಉಘೇ ಉಘೇ ಎಂದ ಟ್ವಿಟ್ಟಿಗರು

'ಏನ್ ಸಿದ್ದರಾಮಯ್ಯನವ್ರೇ ಹೆದರಿಬಿಟ್ರಾ?
ಭಾರೀ ಮಸಲತ್ತು ಮಾಡಿ ಚಾಮುಂಡೇಶ್ವರಿ ಕ್ಷೇತ್ರ ಆರಿಸಿಕೊಂಡ್ರಿ. ಈಗ ಭಯದಿಂದ ಎರಡು ದೋಣಿಯಲ್ಲಿ ಕಾಲಿಡಲು ಹೊರಟಿದ್ದೀರಿ! ಚಿಂತೆ ಬೇಡ, ನೀವೆಲ್ಲಿ ಸ್ಪರ್ಧಿಸಿದರೂ ನಾವು ಪೂರ್ತಿ ಕರ್ನಾಟಕವನ್ನೇ ಕಾಂಗ್ರೆಸ್ ಮುಕ್ತ ಮಾಡುತ್ತೇವೆ'

ಬಿಜೆಪಿಯ ಮುರಳೀಧರ ರಾವ್‌ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ, ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು 'ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿ ಸರ್ ಹಿಂದಿ ಅರ್ಥವಾಗುವುದಿಲ್ಲ' ಎಂದು ಮರು ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯ ಅವರ ಟ್ವೀಟ್‌ ಕುರಿತಂತೆ ಆರೋಗ್ಯಕರ ಚರ್ಚೆಯೂ ನಡೆದಿದೆ. ಕೆಲವರು, ಮುಖ್ಯಮಂತ್ರಿಗಳಿಗೆ ರಾಷ್ಟ್ರಭಾಷೆ ಹಿಂದಿ ಬರುವುದಿಲ್ಲವೇ ಎಂದು ಕಾಲೆಳೆದರೆ ಅವರಿಗೆ ಕ್ಲಾಸ್ ತೆಗೆದಿರುವ ಕೆಲವರು ಎಲ್ಲವೂ ಆಡಳಿತ ಭಾಷೆಯಷ್ಟೆ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದಾರೆ.

English summary
Elections 2018: BJP state in charge Muralidhar Rao forced to tweet in Kannada to a teasing Tweet by CM Siddaramaiah. Siddaramaiah asked Muralidhar Rao to tweet either in Kannada or English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X