ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟಿಂಗ್ ವಿಡಿಯೋಗಳನ್ನು ಸುಮ್ಮನೆ ನಂಬಬೇಡಿ : ಅಮಿತ್ ಶಾ

By Mahesh
|
Google Oneindia Kannada News

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮಾಜಿ ಸಚಿವ ಬಿ ಶ್ರೀರಾಮುಲು ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಚಾರ ನಡೆಸಿ, ವಿಶ್ರಾಂತಿ ಪಡೆಯುವ ಹೊತ್ತಿಗೆ ಸ್ಟಿಂಗ್ ಆಪರೇಷನ್ ವಿಡಿಯೋ ಕಾಣಿಸಿಕೊಂಡಿದೆ.

2010ರಲ್ಲಿ ಗಾಲಿ ರೆಡ್ಡಿ ಸೋದರರನ್ನು ನಡೆಸಲಾದ ಬೇಲ್ ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದ ಈ ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ನೈತಿಕತೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ.

Elections 2018: Amit Shah reaction on Sriramulus alleged video Many fake sting videos surface, dont believe

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್, ಬೇಲ್ ಗಾಗಿ ಡೀಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ರೆಡ್ಡಿ ಬೇಲ್ ಗಾಗಿ ಡೀಲ್ : ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್ರೆಡ್ಡಿ ಬೇಲ್ ಗಾಗಿ ಡೀಲ್ : ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್

ಓಬಳಾಪುರಂ ಮೈನಿಂಗ್ ಕಂಪನಿ ನಿಲ್ಲಿಸಲು ಆಂಧ್ರಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಅಲ್ಲಿನ ಹೈಕೋರ್ಟ್‌ಗೆ ಹೋಗಿ ತಡೆ ತಂದಿದ್ದರು. ನಂತರ ಅಲ್ಲಿನ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು. ಆದರೆ ಅಂದಿನ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಗೂ ಒಂದು ದಿನ ಮೊದಲು ಹೈಕೋರ್ಟ್ ಆದೇಶ ಎತ್ತಿಹಿಡಿದು ಆದೇಶ ಹೊರಡಿಸಿದ್ದರು. ಆದರೆ ಇದರ ಹಿಂದೆ ದೊಡ್ಡ ಡೀಲ್‌ ನಡೆದಿದೆ ಎಂದಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಚುನಾವಣೆ ಸಂದರ್ಭದಲ್ಲಿ ಇಂಥ ಸ್ಟಿಂಗ್ ಆಪರೇಷನ್ ವಿಡಿಯೋಗಳು ಹೊರ ಬರುವುದು ಸಹಜ. ಎಲ್ಲಾ ವಿಡಿಯೋಗಳನ್ನು ಕಣ್ಮುಚ್ಚಿಕೊಂಡು ನಂಬಬೇಡಿ. ಸತ್ಯಾಸತ್ಯತೆ ಪರಿಶೀಲನೆಯಾಗಲಿ, ನಂತರ ಈ ಬಗ್ಗೆ ನಿರ್ಧರಿಸಿ ಎಂದು ಕರೆ ನೀಡಿದ್ದಾರೆ.

ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರ ತೇಜೋವಧೆ ಮಾಡಲು ಸರಣಿ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Karnataka Assembly Elections 2018: Many fake sting videos surface, don't believe them blindly. Rather verify it: Amit Shah on BJP candidate Sriramulu's alleged bribery video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X