ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9 ಲಕ್ಷ ವಿದ್ಯುನ್ಮಾನ ಮತಯಂತ್ರಗಳು ಗುಜರಿಗೆ

By Ashwath
|
Google Oneindia Kannada News

ನವದೆಹಲಿ, ಜೂ. 28: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಕಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಹಳೆಯ ಸುಮಾರು 9 ಲಕ್ಷಕ್ಕೂ ಅಧಿಕ ಮತಯಂತ್ರಗಳನ್ನು ಗುಜರಿಗೆ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ.

ಮುಂದಿನ ಲೋಕಸಭಾ ಚುನಾವಣೆ ವೇಳೆ ಆಯೋಗದಿಂದ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಸೃಷ್ಟಿಯಾಗದಿರಲು ಚುನಾವಣಾ ಆಯೋಗ ಈಗಲೇ ಎಚ್ಚೆತ್ತುಕೊಂಡಿದ್ದು 15 ವರ್ಷ ಹಳೆಯದಾದ ಸುಮಾರು 9 ಲಕ್ಷ ಮತಯಂತ್ರಗಳನ್ನು ಬಳಸದಿರಲು ನಿರ್ಧರಿಸಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೆಲವೊಂದು ಕಡೆ ಮತಯಂತ್ರ ಕೈಕೊಟ್ಟಿದ್ದರೆ, ಕೆಲವು ಮತಗಟ್ಟೆಯಲ್ಲಿ ಒಂದೇ ಅಭ್ಯರ್ಥಿ‌ಗೆ ಎಲ್ಲಾ ಮತಗಳು ಬಿದ್ದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮೇಜರ್‌ ಸರ್ಜರಿಗೆ ಮುಂದಾಗಿದೆ.[ಪುಣೆ: ಯಾವ ಗುಂಡಿ ಒತ್ತಿದ್ದರೂ ಕೈಗೆ ಮತ!]

evm

ಚುನಾವಣೆಗೆ ಇವಿಎಂ ಬಳಕೆಗೆ ಬಂದ ಬಳಿಕ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆ ಮತಯಂತ್ರ ಬದಲಾಯಿಸಲು ಆಯೋಗ ನಿರ್ಧರಿಸಿದ್ದು ಇವುಗಳ ಜಾಗದಲ್ಲಿ ಹೊಸ ಮತ ಯಂತ್ರಗಳನ್ನು ಖರೀದಿಗೆ ಮುಂದಾಗಿದೆ.

ಹೊಸ ಮತಯಂತ್ರ ಖರೀದಿ ಸಲುವಾಗಿ ಚುನಾವಣಾ ಆಯೋಗ ಕಳೆದ ವಾರವೇ ಮೋದಿ ಸರ್ಕರಕ್ಕೆ ಒಂದು ಸಾವಿರ ಕೋಟಿ ವೆಚ್ಚದ ಪ್ರಸ್ತಾವನೆ ಕಳುಹಿಸಿದೆ. ದೇಶದ ಚುನಾವಣೆಯ ಬೆನ್ನೆಲುಬು ಎಂದೇ ಪ್ರಸಿದ್ದವಾಗಿರುವ ಇವಿಎಂನ್ನು ಮೊದಲ ಬಾರಿಗೆ 2004ರ ಲೋಕಸಭಾ ಚುನಾವಣೆಯಲ್ಲಿ ಸಾರ್ವತ್ರಿಕವಾಗಿ ಬಳಸಲಾಯಿತು.

ಒಂದು ಇವಿಎಂ ತಯಾರಿಸಲು 2000-2001ರಲ್ಲಿ 10 ಸಾವಿರ ರೂಪಾಯಿ ವೆಚ್ಚವಾಗಿದ್ದರೆ, ಪ್ರಸ್ತುತ 18 ಸಾವಿರ ರೂ ವೆಚ್ಚವಾಗಲಿದೆ.

English summary
The Election Commission of India (ECI) could soon embark on a wholesale junking exercise in which up to 900,000 electronic voting machines, or EVMs, could be headed for the scrapyard in the next five years, after their supposed infallibility was questioned during the recently concluded Lok Sabha polls when some defective machines reportedly recorded all votes in favour of just one political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X