ಏರೋ ಇಂಡಿಯಾದಲ್ಲಿ ಟಾಟಾ ಸಮೂಹದ 8 ಶಕ್ತಿ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 11: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕದ ಏರ್‍ಫೋರ್ಸ್ ಸ್ಟೇಷನ್‍ನಲ್ಲಿ ಫೆಬ್ರವರಿ 14 ರಿಂದ 18 ರವರೆಗೆ ನಡೆಯಲಿರುವ 11 ನೇ ಏರೋ ಇಂಡಿಯಾ ಪ್ರದರ್ಶನದಲ್ಲಿ ಎಂಟು ಟಾಟಾ ಕಂಪನಿಗಳು ಪಾಲ್ಗೊಳ್ಳುತ್ತಿವೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಅಡ್ವಾನ್ಸ್ಡ್ ಮಟೀರಿಯಲ್ಸ್ ಲಿಮಿಟೆಡ್, ಟಾಟಾ ಮೋಟರ್ಸ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಟಾಟಾ ಸ್ಟೀಲ್ (ಸ್ಪೆಷಾಲಿಟಿ ಸ್ಟೀಲ್ ಬ್ಯುಸಿನೆಸ್ ಇನ್ ಯೂರೋಪ್), ಟಿಎಎಲ್ ಮ್ಯಾನ್ಯುಫ್ಯಾಕ್ಷರಿಂಗ್ ಸಲೂಶನ್ಸ್ ಲಿಮಿಟೆಡ್ ಮತ್ತು ಟಾಟಾ ಪವರ್ ಸ್ಟ್ರಾಟೆಜಿಕ್ ಎಂಜಿನಿಯರಿಂಗ್ ಡಿವಿಶನ್ ಕಂಪನಿಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳಲಿವೆ.[ಏರೋ ಇಂಡಿಯಾ ದೆಸೆಯಿಂದ ಮಾಂಸಪ್ರಿಯರಿಗೆ ಉಪವಾಸ!]

ವೈಮಾನಿಕ ಕ್ಷೇತ್ರದಲ್ಲಿ ಟಾಟಾ ಸಮೂಹ ಐತಿಹಾಸಿಕ ಸಹಯೋಗವನ್ನು ಹೊಂದಿದೆ ಮತ್ತು ಹೊಂದುತ್ತಾ ಬಂದಿದೆ. ಸಂಸ್ಥೆಯ ಮುಖ್ಯಸ್ಥರಾಗಿರುವ ರತನ್ ಎನ್ ಟಾಟಾ ಅವರ ದೂರದೃಷ್ಟಿಯ ಫಲವಾಗಿ ಕಳೆದ ಹಲವು ದಶಕಗಳಿಂದ ದೇಶದ ವೈಮಾನಿಕ ಕ್ಷೇತ್ರದಲ್ಲಿ ಟಾಟಾ ಸಮೂಹ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ.

ವೈಮಾಂತರಿಕ್ಷ ಕ್ಷೇತ್ರಕ್ಕೆ ಟಾಟಾ ಸಮೂಹವನ್ನು ಸೇರುವಂತೆ ಉತ್ತೇಜನ ನೀಡಿದ ರತನ್ ಟಾಟಾ ಅವರು, ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಸಹಯೋಗ ಸಾಧಿಸಿ ವೈಮಾಂತರಿಕ್ಷ ಕ್ಷೇತ್ರಕ್ಕೆ ಹಲವು ಪರಿಹಾರೋಪಾಯಗಳನ್ನು ಒದಗಿಸುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಅನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದು, ಇದಕ್ಕೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದಾರೆ.

ಏರೋ ಇಂಡಿಯಾದಲ್ಲಿ ಟಾಟಾ

ಏರೋ ಇಂಡಿಯಾದಲ್ಲಿ ಟಾಟಾ

ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿರುವ ಟಾಟಾ ಗ್ರೂಪಿನ ಕಂಪನಿಗಳು ವೈಮಾಂತರಿಕ್ಷಕ್ಕೆ ಸಂಬಂಧಿಸಿದ ಆರಂಭದಿಂದ ಅಂತ್ಯದವರೆಗಿನ ಅಂದರೆ ವಿನ್ಯಾಸದಿಂದ ತಯಾರಿಕಾ ಹಂತದವರೆಗಿನ ಎಲ್ಲಾ ಪರಿಹಾರಗಳನ್ನು ನೀಡಲಿವೆ.

ಇದಲ್ಲದೇ, ಜಾಗತಿಕ ಮಟ್ಟದ ಏರೋಸ್ಪೇಸ್ ಮತ್ತು ಡಿಫೆನ್ಸ್ ಒಇಎಂ ಮತ್ತು ಪೂರೈಕೆದಾರರಿಗೆ ಭಾರತ ತಾಂತ್ರಿಕ ಶಕ್ತಿಯನ್ನು ಪೂರೈಸಲಿವೆ. ಈ ಮೂಲಕ ಉತ್ಪಾದಕತ್ವವನ್ನು ಹೆಚ್ಚಿಸಿಕೊಳ್ಳಲು ಸಹಕಾರ ನೀಡುತ್ತಿವೆ. ಈ ಕಂಪನಿಗಳು ಏರೋಸ್ಪೇಸ್ ಕ್ಷೇತ್ರದಲ್ಲಿ ಈ ಕೆಳಗಿನ ವಿಭಾಗಗಳ ಉತ್ಪಾದನೆಯಲ್ಲಿ ತೊಡಗಿವೆ
ಎಂಜಿನಿಯರಿಂಗ್ ನಿಂದ ಉತ್ಪಾದನೆವರೆಗೆ
ವಿನ್ಯಾಸದಿಂದ ತಯಾರಿಕೆ
ತಯಾರಿಕೆಗೆ ಹೊಸ ವಿನ್ಯಾಸ
ವಿನ್ಯಾಸ ಸುಧಾರಣೆ ಮತ್ತು ಇತ್ಯಾದಿ.

ಟಾಟಾ ಸನ್ಸ್ ಒಡೆತನದ TASL

ಟಾಟಾ ಸನ್ಸ್ ಒಡೆತನದ TASL

ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ. ಈ ಮೂಲಕ ಭಾರತದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಕಂಪನಿ ಎಂಬ ಹೆಗ್ಗಳಿಕೆ ಈ ಟಿಎಎಸ್ ಎಲ್‍ಗಿದೆ. ಕ್ಷಿಪಣಿ, ರಾಡಾರ್, ಕಮಾಂಡ್ ಅಂಡ್ ಕಂಟ್ರೋಲ್ ಸಿಸ್ಟಮ್ಸ್, ಏರೋಸ್ಪೇಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. 1700 ನುರಿತ ಮತ್ತು ತರಬೇತಿ ಹೊಂದಿದ ಸಿಬ್ಬಂದಿ ಹೊಂದಿರುವ ಟಿಎಎಸ್ ಎಲ್ ಜಾಗತಿಕ ಮಟ್ಟದಲ್ಲಿ ಏರೋಸ್ಪೇಸ್ ಒಇಎಮ್ ಗಳನ್ನು ಪೂರೈಸುವ ಪ್ರಮುಖ ಸಂಸ್ಥೆಯಾಗಿದೆ.

ಟಾಟಾ ಇಂಡಸ್ಟ್ರೀಸ್ ‍ನ ಅಂಗಸಂಸ್ಥೆ ಟಿಎಎಂಎಲ್

ಟಾಟಾ ಇಂಡಸ್ಟ್ರೀಸ್ ‍ನ ಅಂಗಸಂಸ್ಥೆ ಟಿಎಎಂಎಲ್

ಟಾಟಾ ಇಂಡಸ್ಟ್ರೀಸ್ ‍ನ ಅಂಗಸಂಸ್ಥೆಯಾಗಿರುವ ಟಿಎಎಂಎಲ್, ಜಾಗತಿಕ ಏರೋಸ್ಪೇಸ್, ಸ್ಪೇಸ್ ಡಿಫೆನ್ಸ್ ಮತ್ತು ಕೈಗಾರಿಕಾ ಮಾರುಕಟ್ಟೆಗಳಿಗೆ ಅಗತ್ಯವಾದ ಉತ್ಪನ್ನಗಳ ತಯಾರಿಕೆ ಮತ್ತು ಪರಿಹಾರಗಳನ್ನು ಒದಗಿಸುವ ಭಾರತದ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಸ್ಪೇಸ್ ಅಪ್ಲಿಕೇಶನ್ಸ್, ಸ್ಟ್ರಕ್ಚರಲ್ ಕಾಂಪೊನೆಂಟ್ಸ್, ಎಂಜಿನ್ ಬಿಡಿ ಭಾಗಗಳು, ಪರ್ಸನಲ್ ಮತ್ತು ವೆಹಿಕಲ್ ಆರ್ಮರ್, ಒಇಎಂಗಳ ಕೈಗಾರಿಕಾ ಅಪ್ಲಿಕೇಶನ್‍ಗಳನ್ನು ಸಿದ್ಧಪಡಿಸುತ್ತದೆ. ಕಾಂಪೊಸಿಟ್ ಮಾನ್ಯುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಎನ್‍ಎಡಿಸಿಎಪಿ ಪ್ರಮಾಣಪತ್ರ ಪಡೆದಿರುವ ಭಾರತದ ಏಕೈಕ ಕಂಪನಿಯೆಂದರೆ ಟಿಎಎಂಎಲ್. ಇದು ಭಾರತೀಯ ರಕ್ಷಣಾ ಇಲಾಖೆಗೆ ಪರ್ಸನಲ್ ಆರ್ಮರ್ ಉತ್ಪನ್ನಗಳನ್ನು ಪೂರೈಕೆ ಮಾಡುವ ಅತಿದೊಡ್ಡ ಕಂಪನಿಯೂ ಆಗಿದೆ.

ಟಾಟಾ ಮೋಟರ್ಸ್ ಲಿಮಿಟೆಡ್

ಟಾಟಾ ಮೋಟರ್ಸ್ ಲಿಮಿಟೆಡ್

ಭಾರತದ ಅತಿ ದೊಡ್ಡ ಆಟೋಮೊಬೈಲ್ ಕಂಪನಿಯಾಗಿದ್ದು, 2015-16 ರಲ್ಲಿ 2,75,561 ಕೋಟಿ ರೂಪಾಯಿಗಳ ಆದಾಯ ಹೊಂದಿದ ಕಂಪನಿ. ಕಳೆದ 70 ವರ್ಷಗಳಲ್ಲಿ ಭಾರತೀಯ ಸೇನೆ, ಅರೆಸೇನಾಪಡೆಗಳಿಗೆ 1,50,000 ವಾಹನಗಳನ್ನು ಪೂರೈಸಿದೆ. ಕಾಂಬ್ಯಾಟ್ ವೆಹಿಕಲ್ಸ್, ಕಾಂಬ್ಯಾಟ್ ಸಪೋರ್ಟ್ ವೆಹಿಕಲ್ಸ್ ಸೇರಿದಂತೆ ಹಲವು ವಿಧದ ವಾಹನಗಳನ್ನು ಪೂರೈಸುತ್ತಿದೆ. ಇದಲ್ಲದೇ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ತಾಂಜೇನಿಯಾಗಳ ಸೇನೆಗಳಿಗೆ ವಾಹನಗಳನ್ನು ಪೂರೈಸಿದೆ. ಮತ್ತೊಂದು ಪ್ರಮುಖವಾದ ಅಂಶವೆಂದರೆ ಟಾಟಾ ಮೋಟರ್ಸ್ ಆಫ್ರಿಕಾದಲ್ಲಿ ಗಲಭೆಪೀಡಿತ ಪ್ರದೇಶಗಳಲ್ಲಿ ವಿಶ್ವಸಂಸ್ಥೆಯ ಶಾಂತಿ ಪಡೆಗಳಿಗೂ ವಾಹನಗಳನ್ನು ಒದಗಿಸಿದೆ.

ಟಾಟಾ ಪವರ್ ಸ್ಟ್ರಾಟೆಜಿಕ್ ಎಂಜಿನಿಯರಿಂಗ್ ಡಿವಿಶನ್

ಟಾಟಾ ಪವರ್ ಸ್ಟ್ರಾಟೆಜಿಕ್ ಎಂಜಿನಿಯರಿಂಗ್ ಡಿವಿಶನ್

ಡಿಫೆನ್ಸ್ ಸಿಸ್ಟಮ್ಸ್ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಕಂಪನಿ. ಭಾರತೀಯ ಸಶಸ್ತ್ರ ಪಡೆ, ಡಿಪಿಎಸ್‍ಯು, ಡಿಆರ್‍ಡಿಒ ಸೇರಿದಂತೆ ರಕ್ಷಣಾ ಇಲಾಖೆಗೆ ಒಳಪಟ್ಟಿರುವ ಹಲವು ಸಂಸ್ಥೆಗಳಿಗೆ ಡಿಫೆನ್ಸ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿ ಕೊಡುತ್ತಿದೆ. ಇದರಲ್ಲಿ ಪ್ರಮುಖವಾಗಿ ಸಂಯುಕ್ತ ಎಲೆಕ್ಟ್ರಾನಿಕ್ ವಾರ್‍ಫೇರ್ ಸಿಸ್ಟಮ್, ಅರಿಹಂತ್ ನ್ಯೂಕ್ಲಿಯರ್ ಸಬ್‍ಮರೀನ್ ಕಂಟ್ರೋಲ್ ಸೆಂಟರ್.

ಟಾಟಾ ಸ್ಟೀಲ್(ಸ್ಪೆಷಾಲಿಟಿ ಸ್ಟೀಲ್ ಬ್ಯುಸಿನೆಸ್ ಇನ್ ಯೂರೋಪ್): ಏರ್‍ಬಸ್, ಬೋಯಿಂಗ್ ಮತ್ತು ಬೆಲ್ ಹೆಲಿಕಾಪ್ಟರ್‍ಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಂಪನಿ ಇದು. ಅಲ್ಲದೇ, ಮಿಲಿಟರಿ ಏರೋಸ್ಪೇಸ್ ಯೋಜನೆಗಳಲ್ಲೂ ತೊಡಗಿಸಿಕೊಂಡಿದೆ.

ಟಾಟಾದ 8 ಕಂಪನಿಗಳು

ಟಾಟಾದ 8 ಕಂಪನಿಗಳು

ಟಿಎಎಲ್ ಮ್ಯಾನ್ಯುಫ್ಯಾಕ್ಚರಿಂಗ್ ಸಲೂಶನ್ಸ್ ಲಿಮಿಟೆಡ್(ಟಿಎಎಲ್): ಟಾಟಾ ಮೋಟರ್ಸ್‍ನ ಮಾಲೀಕತ್ವದ ಸಂಸ್ಥೆ ಇದಾಗಿದ್ದು, ಭಾರತದ ಮುಂಚೂಣಿಯಲ್ಲಿರುವ ಸಿವಿಲ್ ಏರೋಸ್ಪೇಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯಾಗಿದೆ. ಇದಲ್ಲದೇ, ಆಟೋಮೋಟಿವ್, ಹೆವಿ ಎಂಜಿನಿಯರಿಂಗ್, ರೈಲ್ವೆ ಸೇರಿದಂತೆ ಮತ್ತಿತರೆ ಕ್ಷೇತ್ರಗಳಿಗೆ ಎಂಜಿನಿಯರಿಂಗ್ ಸೇವೆಗಳನ್ನು ನೀಡುತ್ತಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್): ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರಗಳಿಗೆ ಎಂಜಿನಿಯರಿಂಗ್, ಐಟಿ, ಕನ್ಸಲ್ಟಿಂಗ್, ಡಿಜಿಟಲ್ ಮತ್ತು ಬಿಪಿಎಸ್ ಪರಿಹಾರಗಳನ್ನು ಈ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಒದಗಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Eight Tata companies will exhibit their expertise and offerings in the Aerospace and Defence sectors at the five-day 11th Aero India, Asia's premier air show, beginning here on February 14.
Please Wait while comments are loading...