ಪೂರೈಕೆ ಕೊರತೆ, ಮೊಟ್ಟೆ ದರದಲ್ಲಿ ಭಾರೀ ಏರಿಕೆ

Subscribe to Oneindia Kannada

ಬೆಂಗಳೂರು, ನವೆಂಬರ್ 20: ದೇಶದಾದ್ಯಂತ ಮೊಟ್ಟೆ ಪೂರೈಕೆಯಲ್ಲಿ ಭಾರೀ ಕೊರತೆ ಉಂಟಾಗಿದ್ದು ದರ ಗಗನಕ್ಕೇರಿದೆ.

ಕೋಳಿಗೂ ಒಂದು ಕಾಲ, ಮೊಟ್ಟೆಗೂ ಒಂದು ಕಾಲ

ರಾಷ್ಟ್ರ ರಾಜಧಾನಿಯಲ್ಲಿ ಶೇಕಡಾ 40ರಷ್ಟು ಮೊಟ್ಟೆ ದರ ಏರಿಕೆಯಾಗಿದ್ದು ರೂ. 7 - 7.50ಕ್ಕೆ ತಲುಪಿದೆ. ಬೆಂಗಳೂರಿನಲ್ಲೂ 5 ರೂಪಾಯಿ ಇದ್ದ ಮೊಟ್ಟೆ ದರ 6.50 ರೂಪಾಯಿಗೆ ಏರಿಕೆಯಾಗಿದ್ದು ಜನರ ಕೈಗೆಟುಕದಾಗಿದೆ.

 Egg prices 40% higher on tight supply

ಮೊಟ್ಟೆ ಪೂರೈಕೆಯಲ್ಲಿ ಈ ವರ್ಷ ಶೇಕಡಾ 25-30 ರಷ್ಟು ಕೊರತೆಯಾಗಿದ್ದು ಇನ್ನೂ ಒಂದೆರಡು ತಿಂಗಳು ದರ ಏರಿಕೆ ಮುಂದುವರಿಯಲಿದೆ ಎಂದು ಕೋಳಿ ಸಾಕಣೆದಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ರಮೇಶ್ ಕತ್ರಿ ಹೇಳಿದ್ದಾರೆ.

ಕೋಳಿ ಮೊದಲೋ ಮೊಟ್ಟೆ ಮೊದಲೋ : ಸಂಶೋಧನೆ

ಕಳೆದ ವರ್ಷ ಹೆಚ್ಚಿನ ದರ ಸಿಗದ ಹಿನ್ನಲೆಯಲ್ಲಿ ಈ ವರ್ಷ ಹೆಚ್ಚಿನ ಕೋಳಿ ಸಾಕಣೆದಾರರು ಕಡಿಮೆ ಮೊಟ್ಟೆಗಳನ್ನು ಉತ್ಪಾದಿಸಿದ್ದರು. ಪರಿಣಾಮ ಈ ಬೆಲೆ ಏರಿಕೆ ಉಂಟಾಗಿದೆ ಎಂದು ಅವರು ವಿವರ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Egg prices have jumped by up to 40 per cent to Rs 7-7.50 per piece in retail markets in most parts of the country, hit by tight supply, Poultry Federation of India President Ramesh Katri said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ