ಬಿಎಂಟಿಸಿ ಪ್ರಯಾಣಿಕರ ಮೇಲೆ ಸಿದ್ದರಾಮಯ್ಯ ಸರಕಾರದ ಕೆಂಗಣ್ಣು

Posted By:
Subscribe to Oneindia Kannada

ಬೆಂಗಳೂರು, ಜ 21: ಬೆಂಗಳೂರು ಜನತೆಯ ಜೀವನಾಡಿ ಬಿಎಂಟಿಸಿ ಪ್ರಯಾಣಿಕರ ಜೇಬಿಗೆ ಸಿದ್ದರಾಮಯ್ಯ ಸರಕಾರ ಮತ್ತಷ್ಟು ಕತ್ತರಿ ಪ್ರಯೋಗಿಸಿದೆ.

ನಗರವ್ಯಾಪ್ತಿ ಸಂಚಾರಕ್ಕೆ ಸೀಮಿತವಾಗಿರುವ ಕಪ್ಪುಹಲಗೆ (ಬ್ಲ್ಯಾಕ್ ಬೋರ್ಡ್) ಪಾಸ್ ಈ ತಿಂಗಳಾಂತ್ಯದವರೆಗೆ ಮಾತ್ರ ವಾಯ್ದೆಯಲ್ಲಿರುತ್ತದೆ. ಅಂದರೆ ಫೆಬ್ರವರಿ ಒಂದರಿಂದ ಕಪ್ಪುಹಲಗೆ ಮಾಸಿಕ ಪಾಸ್ ಬಿಎಂಟಿಸಿ ವಿತರಿಸುವುದಿಲ್ಲ. (ಬಿಎಂಟಿಸಿಯ ಮಾಸಿಕ ಪಾಸು ಪಡೆಯುವುದು ಹೇಗೆ)

Effective from February 1st, BMTC stopped black board monthly passes

ಇದುವರೆಗೆ ಬ್ಯ್ಲಾಕ್ ಬೋರ್ಡ್ ಮಾಸಿಕ ಪಾಸಿಗೆ 825 ರೂಪಾಯಿ ಪಾವತಿಸುತ್ತಿದ್ದ ಪ್ರಯಾಣಿಕ ಇನ್ಮುಂದೆ ಮಾಸಿಕ 1050 ರೂಪಾಯಿ ಪಾವತಿಸಿ, ರೆಡ್ ಬೋರ್ಡ್ (ಕೆಂಪುಹಲಗೆ) ಪಾಸ್ ತೆಗೆದುಕೊಳ್ಳಬೇಕಿದೆ. ಇದು ಪ್ರಯಾಣಿಕರಿಗೆ ಮಾಸಿಕ 225 ರೂಪಾಯಿ ಹೆಚ್ಚಿನ ಹೊರೆ.

ಗುರುವಾರ (ಜ 21) ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಿಎಂಟಿಸಿ ಎಂಡಿ ಡಾ. ಏಕರೂಪ್ ಕೌರ್, ಫೆಬ್ರವರಿ ಒಂದನೇ ತಾರೀಕಿನಿಂದ ಕಪ್ಪುಹಲಗೆ ಪಾಸ್ ತೆಗೆದುಕೊಳ್ಳುವವರು ರೆಡ್ ಬೋರ್ಡ್ ಪಾಸ್ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

ಬ್ಲಾಕ್ ಬೋರ್ಡ್‌ ಬಸ್ಸುಗಳು ಸಂಚಾರ ನಡೆಸುವ ವ್ಯಾಪ್ತಿಯಲ್ಲಿ ರೆಡ್ ಬೋರ್ಡ್ ಬಸ್ಸುಗಳು ಸಂಚಾರ ನಡೆಸುತ್ತವೆ. ಒಂದೇ ಮಾರ್ಗದಲ್ಲಿ ಸಂಚರಿಸುವ ಎರಡು ಬಸ್ಸುಗಳಿಗೆ ಬೇರೆ ಬೇರೆ ಪಾಸ್ ಇರುವುದರಿಂದ ಆಡಳಿತಾತ್ಮಕವಾಗಿ ಇದನ್ನು ನಿಭಾಯಿಸಲು ತೊಂದರೆಯಾಗುತ್ತಿದೆ.

ಕೆಂಪುಹಲಗೆ ಪಾಸುಗಳನ್ನು ಖರೀದಿ ಮಾಡಿದರೆ ಕಪ್ಪು ಹಲಗೆ ಬಸ್ಸುಗಳಲ್ಲಿಯೂ ಸಂಚಾರ ನಡೆಸಬಹುದು ಎಂದು ಡಾ. ಕೌರ್, ಕಪ್ಪುಹಲಗೆ ಪಾಸ್ ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಬ್ಲ್ಯಾಕ್ ಬೋರ್ಡ್ ಪಾಸನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಕಳೆದ ಡಿಸೆಂಬರ್ ನಲ್ಲಿಯೇ ಬಿಎಂಟಿಸಿ ಆಡಳಿತ ಮಂಡಳಿ ಬಂದಿತ್ತು. ಹೊಸ ವರ್ಷದಿಂದ ಪಾಸ್ ರದ್ದುಗೊಳಿಸಲು ಸರಕಾರವೂ ಗ್ರೀನ್ ಸಿಗ್ನಲ್ ನೀಡಿತ್ತು. (ಕಪ್ಪು ಹಲಗೆಯ ಬಿಎಂಟಿಸಿ ಮಾಸಿಕ ಪಾಸು ರದ್ದು)

2016ರ ಮೊದಲ ದಿನದಿಂದ ಜಾರಿಯಾಗಬೇಕಾಗಿದ್ದ ಹೊಸ ಪಾಸ್ ಪದ್ದತಿ, ಒಂದು ತಿಂಗಳ ನಂತರ ಅಂದರೆ ಫೆಬ್ರವರಿ ಒಂದರಿಂದ ಜಾರಿಗೆ ಬರಲಿದೆ.

Effective from February 1st, BMTC stopped black board monthly passes

ಬಿಎಂಟಿಸಿ ಕಪ್ಪು ಹಲಗೆ, ಕೆಂಪು ಹಲಗೆ, ವಜ್ರ ಸೇರಿದಂತೆ ವಿವಿಧ ರೀತಿಯ ಮಾಸಿಕ ಪಾಸುಗಳನ್ನು ಹೊಂದಿದೆ. ಕಪ್ಪು ಹಲಗೆ ಪಾಸು ಪಡೆದರೆ ನಗರದ ವ್ಯಾಪ್ತಿಯಲ್ಲಿ ಅಂದರೆ 10 ರಿಂದ 12 ಕಿ.ಮೀ ವ್ಯಾಪ್ತಿಯೊಳಗೆ ಸಾಮಾನ್ಯ ಬಸ್ಸುಗಳಲ್ಲಿ ಸಂಚಾರ ನಡೆಸಬಹುದಾಗಿತ್ತು. ಈಗ ಸರಕಾರ ಈ ಪಾಸನ್ನು ಇತಿಹಾಸದ ಪುಟಕ್ಕೆ ಸೇರಿಸಲು ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Effective from February 1, 2015 BMTC (Bengaluru Metropolitan Transport Corporation) stopped black board monthly passes, BMTC MD Dr. Ekroop Caur statement.
Please Wait while comments are loading...