ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ಇಂಡಿಯಾ ವರದಿ ಫಲಶ್ರುತಿ : ವಿದ್ಯುತ್ ಕಂಬಕ್ಕೆ ಮುಕ್ತಿ

|
Google Oneindia Kannada News

ಬೆಂಗಳೂರು, ಜೂ. 04: ಒನ್ಇಂಡಿಯಾ ವರದಿಯಿಂದ ಎಚ್ಚೆತ್ತುಕೊಂಡ ಬೆಸ್ಕಾಂ ಮತ್ತು ಸಂಬಂಧಿಸಿದ ಇಲಾಖೆಗಳು ಜಯನಗರದ 3 ನೇ ಹಂತದಲ್ಲಿ ಬೀಳುವ ಸ್ಥಿತಿ ತಲುಪಿದ್ದ ವಿದ್ಯುತ್ ಕಂಬವನ್ನು ಗುರುವಾರ ತೆರವು ಮಾಡಿವೆ.

ಜಯನಗರದ ಸಿಂಡಿಕೇಟ್ ಬ್ಯಾಂಕ್ ಎದುರಿಗಿನ ಬಸ್ ನಿಲ್ದಾಣದ ಸಮೀಪ ಇಂಥದ್ದೊಂದು ಮೃತ್ಯುಕೂಪ ಇತ್ತು. ಕೈಗೆಟಕುವ ಜಾಗದಲ್ಲಿ ವಿದ್ಯುತ್ ಕಂಬ ಕತ್ತರಿಸಿದ್ದು ಅದಕ್ಕೆ ತಾತ್ಕಾಲಿಕವಾಗಿ ಕಬ್ಬಿಣದ ರಾಡ್ ಗಳನ್ನು ಆಧಾರವಾಗಿ ನೀಡಲಾಗಿತ್ತು. ಈ ಬಗ್ಗೆ ಒನ್ಇಂಡಿಯಾ ಕನ್ನಡ ಜೂನ್ 2 ರಂದು ವರದಿ ಮಾಡಿತ್ತು.[ಜಯನಗರ 3ನೇ ಬ್ಲಾಕ್ ನಲ್ಲಿ ತಲೆಯ ಮೇಲೆಯೇ ಇದೆ ಮೃತ್ಯು]

jayanagara

ಸದಾ ವಾಹನ ಸಂಚಾರ ಜಾಸ್ತಿ ಇರುವ ರಸ್ತೆಯ ಮೇಲೆ ಬೀಳಲು ಮುಂದಾಗಿದ್ದ ವಿದ್ಯುತ್ ಕಂಬವನ್ನು ತೆರವು ಮಾಡಲಾಗಿದೆ. ಬೆಸ್ಕಾಂ ಎಚ್ಚೆತ್ತುಕೊಂಡು ಮಳೆಗಾಲಕ್ಕೆ ಮುನ್ನ ಕಂಬವನ್ನು ತೆರವು ಮಾಡಿದ್ದು ಜನರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದೆ.

ಇವು ಮೇಲ್ನೋಟಕ್ಕೆ ಸಣ್ಣ ಸಮಸ್ಯೆ ಎಂದು ತೋರಿದರೂ ತಂದೊಡ್ಡುವ ಅಪಾಯ ಅಂತಿಥದ್ದಲ್ಲ. ನಿಮ್ಮ ಮನೆ ಸಮೀಪ ಅಥವಾ ಏರಿಯಾದಲ್ಲಿ ಇಂಥ ಮೃತ್ಯುಕೂಪಗಳಿದ್ದರೆ ನಮ್ಮ ಗಮನಕ್ಕೆ ತರಬಹುದು.

English summary
Effect of Oneindia report : Dangerous electric pole removed in Jayanagar 3rd block, Bengaluru. An electric pole was dangerously hanging causing anxiety among the pedestrians. But, why BESCOM is not noticing such things and taking action immediately?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X