ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ, ನಿರ್ಗತಿಕ ಮಕ್ಕಳಿಗಾಗಿ ಎಡಿಫೈನಿಂದ ಕೊಡುಗೆ

By Mahesh
|
Google Oneindia Kannada News

ಬೆಂಗಳೂರು, ಅ.28: ಅನಾಥ, ನಿರ್ಗತಿಕ ಮಕ್ಕಳ ಸಹಾಯಾರ್ಥ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರಿಂದ ಸಂಗ್ರಹವಾಗುವ ದೇಣಿಗೆಯನ್ನು ಉತ್ತಮ ಕಾರ್ಯಕ್ಕೆ ಬಳಸಲು ಎಡಿಫೈ ಶಾಲೆ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ 'ಹೆಣ್ಣು ಮಕ್ಕಳ ಮಾಸಾಚಾರಣೆ' ಎಂದು ಕಾರ್ಯಕ್ರಮ ರೂಪಿಸಲಾಗಿದೆ.

ಅಕ್ಟೋಬರ್ 31ರಂದು ಬೆಂಗಳೂರಿನ ಹೊರವಲಯದಲ್ಲಿರುವ ಸೂರ್ಯ ಸಿಟಿ ಎರಡನೇ ಹಂತದಲ್ಲಿ ಶಾಲೆಯ ಹೊಸ ಕಟ್ಟಡದಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. [ಶಾಲೆಯ ಬಗ್ಗೆ ಇನ್ನಷ್ಟು ಮಾಹಿತಿ]

ಕೆಎಂಇ ಟ್ರಸ್ಟ್ ಆಯೋಜನೆಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ನಿರ್ಗತಿಕ ಮಕ್ಕಳಿಗೂ ಶಿಕ್ಷಣ ದೊರಕಿಸುವುದೇ ಆಗಿದೆ. ಇದಕ್ಕಾಗಿ ಹಣ ಸಂಗ್ರಹಿಸಲು ವಿವಿಧ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Edify School Electronic City ‘Month of Girl Child’ support under privileged

ಲಗೋರಿ ರಾಕ್ ಬ್ಯಾಂಡ್ ಜೊತೆ ಹಾಲೋವಿನ್ ನೈಟ್, ಅಕ್ಸಿಜನ್ ಡ್ಯಾನ್ಸ್ ತಂಡದಿಂದ ನೃತ್ಯ, ಸುಧಾ ಬರಗೂರು ಅವರಿಂದ ಹಾಸ್ಯ ಕಾರ್ಯಕ್ರಮಗಳಿವೆ. ಇದರ ಜೊತೆಗೆ ಎಡಿಫೈ ಸಂತೆ ನಡೆಸಲಾಗುತ್ತಿದ್ದು, ವೈವಿಧ್ಯಮಯ ತಿಂಡಿ ತಿನಿಸುಗಳ 30ಕ್ಕೂ ಅಧಿಕ ಮಳಿಗೆಗಳು ನಿಮ್ಮ ಹಾಗೂ ನಿಮ್ಮ ಕುಟುಂಬವನ್ನು ಆಕರ್ಷಿಸಲಿದೆ.

500 ಪ್ರತಿ ಟಿಕೆಟ್ ನಂತೆ ನೀವು ನೀಡುವ ಮೊತ್ತವನ್ನು ಅನಾಥ ಹಾಗೂ ನಿರ್ಗತಿಕ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ.

ದಿನಾಂಕ : ಅಕ್ಟೋಬರ್ 31,2015
ಸಮಯ: ಸಂಜೆ 4 ಗಂಟೆ ನಂತರ.
ಸ್ಥಳ : ಎಡಿಫೈ ಶಾಲೆ ಹೊಸ ಕ್ಯಾಂಪಸ್
10th ಮುಖ್ಯರಸ್ತೆ, 19th ಅಡ್ಡರಸ್ತೆ, ಸೆಕ್ಟರ್ C, ಸೂರ್ಯ ನಗರ ಎರಡನೇ ಹಂತ, ಆನೇಕಲ್-ಚಂದಾಪುರ ಮುಖ್ಯರಸ್ತೆ, ಬೆಂಗಳೂರು 560 106.

Edify School Electronic City ‘Month of Girl Child’ support under privileged

ಎಡಿಫೈ ಶಾಲೆಗಳು ಶೈಕ್ಷಣಿಕ ಉತ್ಕೃಷ್ಟತೆ, ಕ್ರೀಡಾ ಸೌಲಭ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಎಡಿಫೈ ಶಾಲೆಗಳು ವಿಶಾಲವಾದ ಗ್ರಂಥಾಲಯ, ಸಂಗೀತ ಶಾಲೆ, ಇಂಗ್ಲೀಷ್ ಪ್ರಯೋಗಾಲಯ, ವಂಡರ್ ರೂಮ್, ಮ್ಯಾಥ್ ಲ್ಯಾಬ್, ಇವಿಎಸ್ ಲ್ಯಾಬ್ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿದೆ.

ಎಡಿಫೈ ಶಾಲೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಪಠ್ಯಕ್ರಮ ಪದ್ಧತಿಯ ಮಿಶ್ರಣವನ್ನು ಕಾಣಬಹುದಾಗಿದೆ. ಸಿಬಿಎಸ್ ಇ, ಐಸಿಎಸ್ ಇ, ಐಜಿಸಿಎಎಸ್ ಇ ಹಾಗೂ ಐಬಿ ಹೀಗೆ ವಿವಿಧ ಮಾದರಿ ಪಠ್ಯಕ್ರಮಗಳನ್ನು ಎಡಿಎನ್ ಎಡಿಫೈ ಎಜುಕೇಷನ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಶಾಲೆಯ ಸಲಹಾ ಸಮಿತಿಯಲ್ಲಿ ಪ್ರೊ.ರಾಜೀವ್ ಗೌಡ, ನಿರ್ದೇಶಕ ಪವನ್ ಕುಮಾರ್, ಡಾ. ಜಗದೀಶ್ ಮುಂತಾದವರಿದ್ದಾರೆ.

English summary
KME trust has taken the initiative to educate girl children from under privileged families. To support the cause we are organizing a fund raiser event ‘Month of Girl Child’ on Oct 31st 2015 at our new school Edify campus in Surya City Phase II. Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X