ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರಿ ನಿರ್ದೇಶನಾಲಯದ ಸೂಚನೆ, ಫೆರಾ ಕೇಸಲ್ಲಿ ಶಶಿಕಲಾ ವಿಚಾರಣೆ

ಫೆರಾ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ವಿಚಾರಣೆ ಎದುರಿಸಬೇಕು ಎಂದು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ. ಅಂದಹಾಗೆ ಇದು 20 ವರ್ಷದ ಹಿಂದಿನ ಪ್ರಕರಣ. ಒಂದು ವೇಳೆ ಶಿಕ್ಷೆಯಾದರೆ ಶಶಿಕಲಾ ಜೈಲು ಶಿಕ್ಷೆ ಪ್ರಮಾಣ ಹೆಚ್ಚುತ್ತದೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 12: ವಿದೇಶಿ ವಿನಿಮಯ ನಿಯಮಗಳ ಕಾಯ್ದೆ ಉಲ್ಲಂಘನೆ ಪ್ರಕರಣ ಶಶಿಕಲಾ ನಟರಾಜನ್ ವಿರುದ್ಧ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಸೂಚಿಸಿದೆ. ಎರಡು ದಶಕಗಳಷ್ಟು ಹಳೆಯ ಪ್ರಕರಣವಾದ ಇದರಲ್ಲಿ ಶಶಿಕಲಾ ಮತ್ತಿತರರು ವಿಚಾರಣೆ ಎದುರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಹೇಳಿತ್ತು.

ಆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ. ಶಶಿಕಲಾ ಮತ್ತು ಇತರ ಸಹ ಆರೋಪಿಗಳು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ (ಆರ್ಥಿಕ ಅಪರಾಧ) ಮುಂದೆ ಹಾಜರಾಗಿ, ವಿಚಾರಣೆ ಎದುರಿಸಬೇಕಾಗುತ್ತದೆ. ಆದರೆ ಶಶಿಕಲಾ ವೈಯಕ್ತಿಕವಾಗಿ ಕೋರ್ಟ್ ಗೆ ಹಾಜರಾಗುತ್ತಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.[ಜೈಲಿನಿಂದಲೇ ಶಶಿಕಲಾ ತ.ನಾಡು ಸರಕಾರ ನಡೆಸುತ್ತಿರುವುದು ಹೇಗೆ?]

ED wants Sasikala to be present for trial in FERA case

ಸದ್ಯ ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಬೆಂಗಳೂರು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ. ಒಂದು ವೇಳೆ 'ಫೆರಾ' ಪ್ರಕರಣದಲ್ಲಿ ದೋಷಿ ಎಂದಾದರೆ ಜೈಲಿನಲ್ಲಿ ಇನ್ನೂ ಹೆಚ್ಚುವರಿ ಸಮಯ ಕಳೆಯಬೇಕಾಗುತ್ತದೆ.[ಶಶಿಕಲಾ ನಟರಾಜನ್ ಬೇರೆ ಜೈಲಿಗೆ ವರ್ಗ ಸಾಧ್ಯವಿಲ್ಲ: ಹೈಕೋರ್ಟ್]

ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷದ ಜೈಲು ಶಿಕ್ಷೆ ಪೂರೈಸಿದ ನಂತರ ತಮಿಳುನಾಡಿನ ಜೈಲಿಗೆ ಸ್ಥಳಾಂತರಿಸಿ, ಫೆರಾ ಪ್ರಕರಣದಲ್ಲಿ ವಿಧಿಸಿದ ಶಿಕ್ಷೆ ಅವಧಿ ಪೂರೈಸಬೇಕಾಗುತ್ತದೆ.

English summary
The Enforcement Directorate has insisted that Sasikala Natarajan faces trial in a case registered under the Foreign Exchange Regulation Act. This move by the ED comes after the Madras High Court had recently said that Sasikala and the other accused must face trial in the two-decade old case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X