ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ಪ್ರಕರಣ: ಇ.ಡಿ.ಯಿಂದ ಕೇಸ್ ದಾಖಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ನಲ್ಲಿ ನೂರಾರು ಕೋಟಿ ನಗನಾಣ್ಯ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್ ಅಮರ್ ಲಾಲ್ ವಿರುದ್ಧ ಇಡಿ ಪ್ರಕರಣ ದಾಖಲಾಗಿದೆ.

ಬೌರಿಂಗ್ ಲಾಕರ್ ನಲ್ಲಿ 250 ಕೋಟಿ ಚೆಕ್ ಹೊಂದಿದ್ದ, ವಿದೇಶಿ ಕರೆನ್ಸಿ, ಖಾಲಿ ಚೆಕ್, ಹಲವು ದಾಖಲೆಗಳು ಪತ್ತೆಯಾಗಿತ್ತು ಆರೋಪಿಗೆ ಇಡಿ ನೋಟಿಸ್ ನೀಡಿತ್ತು ಇದೀಗ ಪ್ರಕರಣ ದಾಖಲಿಸಿಕೊಂಡಿದೆ.

ಲಾಕರ್ ನಲ್ಲಿ 3.90 ಕೋಟಿ ನಗದು, 7.80 ಕೋಟಿ ಮೌಲ್ಯದ ಆಭರಣಗಳು, 650 ಗ್ರಾಂ ಚಿನ್ನ, 15 ಲಕ್ಷ ಬೆಲೆ ಬಾಳುವ ರೋಲೆಕ್ಸ್ ವಾಚ್ ದೊರೆತಿದೆ. ಅವಿನಾಶ್‌ 1993ರಿಂದ ಬೌರಿಂಗ್ ಕ್ಲಬ್‌ ಸದಸ್ಯರಾಗಿದ್ದರು.

ಬೌರಿಂಗ್ ಇನ್ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜೀನಾಮೆ! ಬೌರಿಂಗ್ ಇನ್ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜೀನಾಮೆ!

ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಒಟ್ಟು 126 ಲಾಕರ್ ಗಳಿವೆ, ಇವುಗಳನ್ನು ಯಾರೂ ಸರಿಯಾಗಿ ಬಳಸುತ್ತಿರಲಿಲ್ಲ, ಹಾಗಾಗಿ ಆಡಳಿತ ಮಂಡಳಿಯು ಎಲ್ಲಾ ಲಾಕರ್‌ ಮಾಲೀಕರಿಗೆ ಪತ್ರ ಬರೆದು ಲಾಕರ್ ಪರಿಶೀಲಿಸುವಂತೆ ತಿಳಿಸಿತ್ತು. ಹೀಗಾಗಿ ಎಲ್ಲಾ ಲಾಕರ್ ಗಳ ಮಾಲೀಕರು ಲಾಕರ್ ತೆರೆಯಲು ಬಂದಿದ್ದರು ಆದರೆ ಮೂರು ಲಾಕರ್ ಗಳ ಮಾಲೀಕರು ಮಾತ್ರ ಬಂದಿರಲಿಲ್ಲ.

ಬೌರಿಂಗ್‌ ಕ್ಲಬ್‌ ಲಾಕರ್‌ನಲ್ಲಿ ಇದ್ದಿದ್ದು 550 ಕೋಟಿಯಲ್ಲ 800 ಕೋಟಿ ಬೌರಿಂಗ್‌ ಕ್ಲಬ್‌ ಲಾಕರ್‌ನಲ್ಲಿ ಇದ್ದಿದ್ದು 550 ಕೋಟಿಯಲ್ಲ 800 ಕೋಟಿ

ಬೌರಿಂಗ್ ಇನ್ಸ್ಟಿಟ್ಯೂಟ್ ನ ಲಾಕರ್ ನಲ್ಲಿ ಕೋಟಿಗಟ್ಟಲೆ ಹಣ , ಚಿನ್ನಾಭರಣ, ಆಸ್ತಿ ದಾಖಲೆಗಳು ದೊರೆತಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಐಟಿ ಅಧಿಕಾರಿಗಳು ಇಂದು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು. ಬಿಜೆಪಿ ಮುಖಂಡರಾದ ಪ್ರಸಾದ್ ರೆಡ್ಡಿ ಅವರ ಕೋರಮಂಗಲ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.

ಬೌರಿಂಗ್ ಇನ್‌ಸ್ಟಿಟ್ಯೂಟ್ ಪ್ರಕರಣ;ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ

ಬೌರಿಂಗ್ ಇನ್‌ಸ್ಟಿಟ್ಯೂಟ್ ಪ್ರಕರಣ;ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ

ಬೌರಿಂಗ್ ಇನ್‌ಸ್ಟಿಟ್ಯೂಟ್ ನ ಲಾಕರ್ ನಲ್ಲಿ ಕೋಟಿಗಟ್ಟಲೆ ಹಣ , ಚಿನ್ನಾಭರಣ, ಆಸ್ತಿ ದಾಖಲೆಗಳು ದೊರೆತಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಐಟಿ ಅಧಿಕಾರಿಗಳು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು.ಬಿಜೆಪಿ ಮುಖಂಡರಾದ ಪ್ರಸಾದ್ ರೆಡ್ಡಿ ಅವರ ಕೋರಮಂಗಲ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಅವಿನಾಶ್ ಯಾರು, ಅವನ ಹಿಂದೆ ಪ್ರಭಾವಿ ವ್ಯಕ್ತಿಗಳು ನಿಂತಿದ್ದೇಕೆ

ಅವಿನಾಶ್ ಯಾರು, ಅವನ ಹಿಂದೆ ಪ್ರಭಾವಿ ವ್ಯಕ್ತಿಗಳು ನಿಂತಿದ್ದೇಕೆ

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌ ಲಾಕರ್ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ. ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಲಾಕರ್ ನಲ್ಲಿ ಪತ್ತೆಯಾದ ಆಸ್ತಿಪತ್ರ ಪ್ರಮಾಣದ ಮೊತ್ತ ಈ ಮುಂದೆ 550 ಕೋಟಿಯಲ್ಲ 800 ಕೋಟಿಗೂ ಅಧಿಕವೆನ್ನುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಬೌರಿಂಗ್ ಕ್ಲಬ್‌ ಮೇಲೆ ಶನಿವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು, ಅಲ್ಲಿ ಅವಿನಾಶ್‌ ಕುಕ್ರೇಜಾ ಅವರಿಗೆ ಸಂಬಂಧಿಸಿದ್ದ ಲಾಕರ್ ನಲ್ಲಿ 800 ಕೋಟಿಗೂ ಅಧಿಕ ಮೊತ್ತದ ಆಸ್ತಿಪತ್ರಗಳು, ಹಣ, ಆಭರಣಗಳು ದೊರೆತಿದ್ದವು.ಲಾಕರ್‌ ರಹಸ್ಯದ ಹಿಂದೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಕುಟುಂಬಸ್ಥರ ಹೆಸರೂ ಕೂಡ ಕೇಳಿಬರುತ್ತಿದೆ. ಕೆಲವರು ಅವಿನಾಶ್‌ ರಕ್ಷಣೆಗೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿದೆ.

ಬೌರಿಂಗ್‌ ಕ್ಲಬ್‌: 500 ಕೋಟಿ ಆಸ್ತಿ ಒಡೆಯನ ವಿಚಾರಣೆ ಬೌರಿಂಗ್‌ ಕ್ಲಬ್‌: 500 ಕೋಟಿ ಆಸ್ತಿ ಒಡೆಯನ ವಿಚಾರಣೆ

ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ನಲ್ಲಿ ಇದ್ದಿದ್ದು 800ಕೋಟಿ

ಬೌರಿಂಗ್ ಇನ್‌ಸ್ಟಿಟ್ಯೂಟ್ ಲಾಕರ್ ನಲ್ಲಿ ಇದ್ದಿದ್ದು 800ಕೋಟಿ

ಲಾಕರ್ ನಲ್ಲಿ 3.90 ಕೋಟಿ ನಗದು, 7.80 ಕೋಟಿ ಮೌಲ್ಯದ ಆಭರಣಗಳು, 650 ಗ್ರಾಂ ಚಿನ್ನ, 15 ಲಕ್ಷ ಬೆಲೆ ಬಾಳುವ ರೋಲೆಕ್ಸ್ ವಾಚ್ ದೊರೆತಿದೆ. ಅವಿನಾಶ್‌ 1993ರಿಂದ ಬೌರಿಂಗ್ ಕ್ಲಬ್‌ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ. ಸುಮಾರು 800 ಕೋಟಿಗೂ ಹೆಚ್ಚು ಬೆಲೆಬಾಳುವ ದಾಖಲೆಗಳಿದ್ದವು ಎನ್ನಲಾಗಿದೆ.

ಬೌರಿಂಗ್ ಇನ್‌ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜಿನಾಮೆ

ಬೌರಿಂಗ್ ಇನ್‌ಸ್ಟಿಟ್ಯೂಟ್ ಸದಸ್ಯತ್ವಕ್ಕೆ ಅವಿನಾಶ್ ರಾಜಿನಾಮೆ

ಅವಿನಾಶ್ ಅಮರಲಾಲ್ ಕುಕ್ರೇಜ್ ಆಗಸ್ಟ್ 1ರಂದು ತಾಯಿ ಜೊತೆ ಬೌರಿಂಗ್ ಇನ್ಸ್ಟಿಟ್ಯೂಟ್‌ಗೆ ಆಗಮಿಸಿ, ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರಿಗೆ ರಾಜೀನಾಮೆ ನೀಡಿದ್ದಾರೆ, ರಾಜೀನಾಮೆ ಅಂಗೀಕಾರವಾಗಿದ್ದು, ತಕ್ಷಣದಿಂದಲೇ ಅವಿನಾಶ್, ಪತ್ನಿ ಮತ್ತು ಮಕ್ಕಳ ಸದಸ್ಯತ್ವ ರದ್ದಾಗಿದೆ.

English summary
Enforcement Directorate has filed a case against businessman Avinash who was put huge money and property documents in Bowring institute licker illegally recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X