ಬೆಂಗಳೂರಿನ ಕೆನರಾ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಮೇಲೆ ದಾಳಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 3: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಮೂರು ಬ್ಯಾಂಕ್ ಗಳ ವಿವಿಧ ಶಾಖೆಗಳ ಮೇಲೆ ದಾಳಿ ನಡೆಸಿದರು. ಹಳೇ ನೋಟು ಬದಲಾವಣೆ ದಂಧೆಯನ್ನು ಕೆಲವು ಬ್ಯಾಂಕ್ ಗಳಲ್ಲಿ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ನ ವಿವಿಧ ಶಾಖೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ದೇಶದಾದ್ಯಂತ ವಿವಿಧ ಬ್ಯಾಂಕ್ ಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳಲ್ಲಿ ಕೆಲ ಅಧಿಕಾರಿಗಳನ್ನು ಬಂಧಿಸಲಾಗಿತ್ತು.[ರಮೇಶ್ ಬರೆದ ಪತ್ರದಲ್ಲಿ ಗಾಲಿ ರೆಡ್ಡಿ 'ಭ್ರಷ್ಟಾಚಾರ ಬಹಿರಂಗ']

ED raid on banks in Bengaluru

ಕಪ್ಪು ಹಣ ಇರುವವರೊಂದಿಗೆ ಶಾಮೀಲಾಗಿ, ಕೆಲವು ಬ್ಯಾಂಕ್ ಅಧಿಕಾರಿಗಳು ಹಣ ಬದಲಾವಣೆಗೆ ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಸರಕಾರಿ ಅಧಿಕಾರಿಗಳ ಬಳಿ 5.7 ಕೋಟಿ ರುಪಾಯಿ ಹೊಸ ಎರಡು ಸಾವಿರ ರುಪಾಯಿ ನೋಟುಗಳು ಸಿಕ್ಕಿದ್ದವು.[ಹಳೇ ನೋಟಿನೊಂದಿಗೆ ಖ್ಯಾತ ನಟನ ಕುಟುಂಬ: ಅಧಿಕಾರಿಗಳ ತೀವ್ರ ವಿಚಾರಣೆ]

ಆ ನಂತರ ಅಷ್ಟೊಂದು ಪ್ರಮಾಣದಲ್ಲಿ ಹೊಸ ನೋಟುಗಳು ಸಿಗುವುದರಲ್ಲಿ ತಮಿಳುನಾಡಿನ ಈರೋಡ್ ನ ಬ್ಯಾಂಕ್ ಹಾಗೂ ಬೆಂಗಳೂರಿನ ಬ್ಯಾಂಕ್ ವೊಂದರ ಅಧಿಕಾರಿ ಪಾತ್ರ ಇರುವ ಬಗ್ಗೆ ಕೂಡ ಮಾಹಿತಿ ಸಿಕ್ಕಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Enforcement Directorate officers raid on Canara bank, Axis bank, ICICI bank various branches in Bengaluru on Wednesday to check suspicious activities.
Please Wait while comments are loading...