ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಸಂಸ್ಥೆ ಮೇಲೆ ಇಡಿ ದಾಳಿ, 1.92 ಕೋಟಿ ಹಣ ವಶ

|
Google Oneindia Kannada News

ಬೆಂಗಳೂರು, ನವೆಂಬರ್ 08: ಜನರಿಗೆ ವಂಚಿಸಿದೆ ಎಂದು ವಿಚಾರಣೆ ಎದುರಿಸುತ್ತಿರುವ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಜನರಿಗೆ ಚಿಟ್‌ ಫಂಡ್‌ ವ್ಯವಹಾರ, ಅಧಿಕ ಬಡ್ಡಿ ನೀಡುವ ಆಸೆ ತೋರಿಸಿ ಕೋಟ್ಯಂತರ ಹಣ ವಂಚಿಸಿದ್ದ ಆಂಬಿಡೆಂಟ್‌ ಪ್ರೈವೆಟ್‌ ಸಂಸ್ಥೆ ಮೇಲೆ ಕಳೆದ ವರ್ಷ ದೂರು ದಾಖಲಾಗಿ ಅದನ್ನು ಜಾರಿ ನಿರ್ದೇಶನಾಲಯವು ತನಿಖೆ ನಡೆಸಿತ್ತು.

ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?

ಇದೀಗ ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ಆಂಬಿಡೆಂಟ್‌ ಸಂಸ್ಥೆಯ ಆರೋಪಿಯನ್ನು ಬಚಾವ್ ಮಾಡಲು ಜನಾರ್ದನ ರೆಡ್ಡಿ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಸಿಸಿಬಿ ಪೊಲೀಸರು ಮಾಡಿರುವ ಬೆನ್ನಲ್ಲಿ ಇಂದು ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಂಪೆನಿಯ ಕಚೇರಿಯ ಮೇಲೆ ದಾಳಿ ನಡೆಸಿದೆ.

ED raid on Ambidant Marketing Pvt Ltd seized Rs 1.97 crore

ಆಂಬಿಡೆಂಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ ಆಂಬಿಡೆಂಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

ಜಾರಿ ನಿರ್ದೇಶನಾಲಯವು ಆಂಬಿಡೆಂಟ್‌ ಮೇಲೆ ದಾಳಿ ನಡೆಸಿ ಒಟ್ಟು 1.92 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ ಸಿಸಿಬಿಯು ತಲೆಮರೆಸಿಕೊಂಡಿರುವ ಜನಾರ್ದನ ರೆಡ್ಡಿಗೆ ಬಲೆ ಬೀಸಿದೆ.

English summary
Enforcement Directorate Bangalore Zonal Office conducted searches at several premises of Ambidant Marketing Pvt Ltd on and seized cash to the tune of Rs 1.97 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X