ಬೆಂಗಳೂರಿನ ಐಟಿ ಕಂಪನಿಗೆ ಸೇರಿದ 6.5 ಕೋಟಿ ರು ಜಪ್ತಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಅಪನಗದೀಕರಣ ಜಾರಿಗೆ ಬಂದ ನಂತರ ಅಕ್ರಮ ಹಣ ದಾಸ್ತಾನು ಹೊಂದಿರುವವರ ಮೇಲೆ ಐಟಿ ದಾಳಿ ಮುಂದುವರೆಯುತ್ತಲೇ ಇದೆ. ಗುರುವಾರ ಬೆಳಗ್ಗೆ ನಗರದ ಪ್ರಮುಖ ಐಟಿ ಕಂಪನಿ ಮೇಲೆ ನಡೆಸಿದ ದಾಳಿಯಲ್ಲಿ 6.5 ಕೋಟಿ ರು ಅಕ್ರಮ ಆಸ್ತಿ ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಗ್ನಿಸ್ ಟೆಕ್ನಾಲಾಜೀಸ್ ನ ನಿರ್ದೇಶಕ ನಿಹಾಲ್ ರಂಜನ್ ಸಮಥಾರಾ ಅವರ ವಿರುದ್ಧ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಆಸ್ತಿ ಗಳಿಕೆ ವಿರುದ್ಧದ 2002ರ ಕಾಯ್ದೆಯಡಿ ಇಗ್ನೆಸ್ ಟೆಕ್ನಾಲಜಿ ಕಂಪನಿ ವಿರುದ್ಧ ಪ್ರಕರಣವನ್ನು ದಾಖಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಹೇಳಿದ್ದಾರೆ.

ED raid at IT company, property worth Rs, 6.5 crore seized

ಏರೋಸ್ಪೇಸ್ ಇಂಜಿನಿಯರಿಂಗ್ ಗೆ ಸೇರಿದ ಈ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ದಾಳಿ ಮುಂದುವರೆದಿದೆ. ಷೇರು, ನಿವೇಶನ, ಕಟ್ಟಡ ಸೇರಿದಂತೆ ಹಲವು ಬಗೆಯ ಅಕ್ರಮ ಅಸ್ತಿಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.


ಬೆಂಗಳೂರಿನ ವಿವಿಧೆಡೆಗಳಲ್ಲಿರುವ ಕಂಪನಿಯ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಇಡಿ ಅಧಿಕಾರಿಗಳು, 6.50 ಕೋಟಿ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ. ಷೇರು, ನಿವೇಶನ, ಕಟ್ಟಡ ಸೇರಿದಂತೆ ಹಲವು ಬಗೆಯ ಅಕ್ರಮ ಅಸ್ತಿಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Officials of the Enforcement Directorate on Thursday raided city-based IT company and seized property worth Rs. 6.5 crore.
Please Wait while comments are loading...