ಇಡಿ ಅಧಿಕಾರಿಗಳ ಬಲೆಗೆ ಬಿದ್ದವು ಕಪ್ಪು ಹಣ ಬದಲಿಸುವ ತಿಮ್ಮಿಂಗಿಲಗಳು

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಪ್ಪು ಹಣ ಬದಲಿಸಿಕೊಳ್ಳಬೇಕಾದ ಗ್ರಾಹಕರಂತೆ ತೆರಳಿ, ದೊಡ್ಡ ಜಾಲವೊಂದನ್ನು ಭೇದಿಸಿದ್ದಾರೆ. ನಮ್ಮ ಹತ್ತಿರ ಕಪ್ಪು ಹಣವಿದೆ. ಅದನ್ನು ಬದಲಿಸಿಕೊಳ್ಳಬೇಕು ಎಂದು ಜಾಲದೊಳಗಿನ ವ್ಯಕ್ತಿಗಳನ್ನು ಸಂಪರ್ಕಿಸಿದ ಅಧಿಕಾರಿಗಳು, ಪ್ರಮುಖ ದಂಧೆಕೋರರನ್ನೇ ವಶಕ್ಕೆ ಪಡೆದಿದ್ದಾರೆ.

ಏಳು ಮಧ್ಯವರ್ತಿಗಳನ್ನು ಈವರೆಗೆ ಬಂಧಿಸಲಾಗಿದೆ. ಕರ್ನಾಟಕದಲ್ಲಿ ಕಪ್ಪು ಹಣ ಬದಲಿಸುವ ನಂಟು ಹೊಂದಿದ್ದ ಪ್ರಮುಖ ಜಾಲ ಬಯಲಿಗೆ ಬಿದ್ದಂತಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಕಾರ ಇದೇ ತಂಡವೇ ಹಿಂದೆ ಕೂಡ ನೋಟು ಬದಲಾವಣೆಗೆ ಸಹಾಯ ಮಾಡಿದೆ.[ಆಕ್ಸಿಸ್ ಬ್ಯಾಂಕ್ ಪರವಾನಗಿ ರದ್ದು ಸುದ್ದಿ ರದ್ದಿ]

note

ಅಧಿಕಾರಿಗಳು 93 ಲಕ್ಷ ರುಪಾಯಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಜತೆಗಿನ ಮಧ್ಯವರ್ತಿಗಳ ನಂಟು ಹೇಗೆ ಕೆಲಸ ಮಾಡುತ್ತಿತ್ತು ಎಂಬುದನ್ನು ಸಹ ತಿಳಿಯಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಮಧ್ಯವರ್ತಿಗಳ ಬಂಧನವಾದ ನಂತರ ಕೆಲವು ಬ್ಯಾಂಕ್ ಅಧಿಕಾರಿಗಳ ಚಲನವಲನಗಳ ಬಗ್ಗೆ ಕೂಡ ಕಣ್ಗಾವಲು ಇಡಲಾಗಿದೆ.

ಈ ಮಧ್ಯವರ್ತಿಗಳು ಕಪ್ಪು ಹಣದ ಬದಲಾವಣೆಗಾಗಿ ಶೇ 15ರಿಂದ 30ರವರೆಗೆ ಕಮಿಷನ್ ಪಡೆಯುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Officials from Enforcement Directorate posed as clients to bust a major black money conversion racket largely in Karnataka. Seven middlemen have been arrested so far for laundering money. A major part of the nexus was busted in Karnataka.
Please Wait while comments are loading...